ಇಷ್ಟು ಹಣವಿದ್ರೂ ಒಡೆದ ಪ್ಲೇಟ್ ನಲ್ಲಿ ವರುಣ್ ಧವನ್ ಊಟ ! ವೈರಲ್ ಆಯ್ತು ಕನ್ಯಾ ಪೂಜೆ ಥಾಲಿ

Published : Oct 01, 2025, 05:32 PM IST
Varun Dhawan

ಸಾರಾಂಶ

ಬಾಲಿವುಡ್ ಸ್ಟಾರ್ ವರುಣ್ ಧವನ್, ಕನ್ಯಾ ಪೂಜೆ ಮಾಡಿದ್ದಾರೆ. ಕನ್ಯಾ ಪೂಜೆ ವೇಳೆ ಅವರು ಮಕ್ಕಳಿಗೆ ಊಟ ಬಡಿಸಿದ್ದಾರೆ. ಆದ್ರೆ ಊಟದ ಪ್ಲೇಟ್ ಈಗ ವೈರಲ್ ಆಗಿದೆ. ಜನ, ಹಣ ಇಲ್ವಾ ಕೇಳ್ತಿದ್ದಾರೆ? 

ನವರಾತ್ರಿ (Navratri)ಯಲ್ಲಿ ಕನ್ಯಾ ಪೂಜೆಗೆ ವಿಶೇಷ ಮಹತ್ವ ಇದೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯಜನರವರೆಗೆ ಬಹುತೇಕ ಎಲ್ಲರ ಮನೆಯಲ್ಲಿ ಕನ್ಯಾ ಪೂಜೆ ನಡೆಯುತ್ತೆ. ಕನ್ಯಾ ಪೂಜೆ (Kanya Puja)ಯಲ್ಲಿ ಚಿಕ್ಕ ಮಕ್ಕಳನ್ನು ಮನೆಗೆ ಕರೆಯಿಸಿ, ಅವರಿಗೆ ಊಟ ಬಡಿಸಿ, ಹಣ – ವಸ್ತುಗಳನ್ನು ನೀಡೋದು ಪದ್ಧತಿ. ಬಾಲಿವುಡ್ ಕಲಾವಿದರು ಕೂಡ ನವರಾತ್ರಿ, ದುರ್ಗಾ ಪೂಜೆ, ಕನ್ಯಾ ಪೂಜೆಗಳನ್ನು ವಿಜ್ರಂಭಣೆಯಿಂದ ಮಾಡ್ತಾರೆ. ನಟ ವರುಣ್ ಧವನ್ (Varun Dhawan) ಕೂಡ ಇದಕ್ಕೆ ಹೊರತಾಗಿಲ್ಲ. ವರುಣ್ ಧವನ್ ಕನ್ಯಾ ಪೂಜೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವರುಣ್ ಧವನ್ ಅದ್ರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದ್ರೆ ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ತಟ್ಟೆ ವಿಷ್ಯಕ್ಕೆ ಸುದ್ದಿ ಮಾಡಿದೆ.

ಕನ್ಯಾ ಪೂಜೆ ಮಾಡಿದ ವರುಣ್ ಧವನ್ : 

ವರುಣ್ ಧವನ್ ತಮ್ಮ ಇನ್ಸ್ಟಾ ಖಾತೆಯಲ್ಲಿ ದುರ್ಗಾ ಅಷ್ಠಮಿ ಶುಭಾಶಯಗಳು ಎನ್ನುವ ಶೀರ್ಷಿಕೆ ಅಡಿ ಫೋಟೋ ಹಂಚಿಕೊಂಡಿದ್ದಾರೆ. ವರುಣ್ ಧವನ್ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ಮಕ್ಕಳ ಜೊತೆ ವರುಣ್ ಧವನ್ ಊಟ ಮಾಡ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ವರುಣ್ ಧವನ್ ಪ್ಲೇಟ್ ಇದೆ. ವರುಣ್ ಧವನ್ ಸ್ಟೀಲ್ ಪ್ಲೇಟ್ ನಲ್ಲಿ ಊಟ ಮಾಡ್ತಿದ್ದರೆ ಮಕ್ಕಳಿಗೆ ಪೇಪರ್ ಪ್ಲೇಟ್ ನಲ್ಲಿ ಊಟ ಬಡಿಸಿದ್ದಾರೆ. ತರಕಾರಿಗಳು, ರೈತಾ, ರವೆ ಪುಡಿಂಗ್ ಮತ್ತು ಪೂರಿ ಅವರ ಪ್ಲೇಟ್ ನಲ್ಲಿದೆ.

Jaya Bachchan Smiles: ಕಾಜೋಲ್ ಗಿಮಿಕ್ ವರ್ಕ್ ಆಯ್ತು, ಕೊನೆಗೂ ಜಯಾ ಬಚ್ಚನ್ ನಕ್ಬಿಟ್ರು

ವರುಣ್ ಧವನ್ ಪ್ಲೇಟ್ ವೈರಲ್ : 

ವರುಣ್ ಧವನ್ ಪ್ಲೇಟ್ ನಲ್ಲಿ ಏನಿದೆ ಎಂಬುದನ್ನು ಜನ ಗಮನಿಸಿಲ್ಲ. ವರುಣ್ ಧವನ್ ಪ್ಲೇಟ್ ಹೇಗಿದೆ ಎಂಬುದನ್ನು ಜನರು ಗಮನಿಸಿದ್ದಾರೆ. ಸ್ಟೀಲ್ ಪ್ಲೇಟ್ ಬಿರುಕು ಬಿಟ್ಟಿದೆ. ಇದನ್ನು ಗಮನಿಸಿದ ಬಳಕೆದಾರರು, ವರುಣ್ ಧವನ್ ಒಡೆದ ಸ್ಟೀಲ್ ಪ್ಲೇಟ್ ನಲ್ಲಿ ಆಹಾರ ತಿನ್ನುತ್ತಿದ್ದಾರೆ. ಇಷ್ಟು ಶ್ರೀಮಂತರಾದ್ರೂ ಇಂಥ ಪ್ಲೇಟ್ ಏಕೆ ಅಂತ ಪ್ರಶ್ನೆ ಮಾಡಿದ್ದಾರೆ. ದುಡಿದ ಹಣವನ್ನು ಏನು ಮಾಡ್ತೀರಿ? ಹೊಸ ಪ್ಲೇಟ್ ಖರೀದಿ ಮಾಡೋಕೆ ಆಗಲ್ವ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಅನೇಕ ಬಳಕೆದಾರರಿಗೆ ವರುಣ್ ಧವನ್ ಪ್ಲೇಟ್ ಹಾಗೂ ಮಕ್ಕಳಿಗೆ ನೀಡಿರುವ ಪ್ಲೇಟ್ ನಲ್ಲಿ ವ್ಯತ್ಯಾಸ ಏಕೆ ಎನ್ನುವ ಪ್ರಶ್ನೆಯನ್ನಿಟ್ಟಿದ್ದಾರೆ. ಮತ್ತೆ ಕೆಲವರು ವರುಣ್ ಧವನ್ ಪರ ಬ್ಯಾಟ್ ಬೀಸಿದ್ದಾರೆ. ವರುಣ್ ಧವನ್ ಪ್ಲೇಟ್ ಬಗ್ಗೆ ಟ್ರೋಲ್ ಮಾಡೋ ಅಗತ್ಯ ಇಲ್ಲ. ಸೆಲೆಬ್ರಿಟಿಯಾಗಿವರುಣ್ ಧವನ್ ನಮ್ಮ ಸಂಪ್ರದಾಯವನ್ನು ಪಾಲಿಸಿಕೊಂಡು ಬರ್ತಿದ್ದಾರೆ. ಇದಕ್ಕೆ ಖುಷಿಪಡಿ ಎಂದಿದ್ದಾರೆ.

ಬರದಿರುವ ಭಾಷೆ ಮಾತಾಡಿ ಅಗೌರವ ತೋರಿಸೋದಿಲ್ಲ: ಹೈದರಾಬಾದ್ ಈವೆಂಟ್ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?

ಸಿನಿಮಾ ಶೂಟಿಂಗ್ ನಲ್ಲಿ ವರುಣ್ ಧವನ್ ಬ್ಯೂಸಿ : 

ವರುಣ್ ಧವನ್ ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾನ್ವಿ ಕಪೂರ್, ಸನ್ಯಾ ಮಲ್ಹೋತ್ರಾ ಮತ್ತು ರೋಹಿತ್ ಶ್ರಾಫ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ನಾಳೆ ತೆರೆಗೆ ಬರಲಿದೆ. ಚಿತ್ರದ ಟ್ರೇಲರ್ ಗೆ ಫ್ಯಾನ್ಸ್ ನಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಇದ್ರ ಜೊತೆ , ವರುಣ್ ಧವನ್ ಕೈನಲ್ಲಿ ಇನ್ನೂ ಎರಡೂ ಸಿನಿಮಾಗಳಿವೆ. ಬಾರ್ಡರ್ 2 ಅವರು ಕಾಣಿಸಿಕೊಳ್ಳಲಿದ್ದಾರೆ. ಬಾರ್ಡರ್ 2 ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇದಲ್ದೆ ಹೈ ಜವಾನಿ ತೋ ಇಷ್ಕ್ ಹೋನಾ ಹೈ ಚಿತ್ರದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!