ಕಂಗನಾಗೆ ಕಿರಿಕ್ ಪಾರ್ಟಿ ಎಂದ ಸೋನಂ ಕಪೂರ್

Published : Sep 17, 2018, 11:13 AM ISTUpdated : Sep 19, 2018, 09:27 AM IST
ಕಂಗನಾಗೆ ಕಿರಿಕ್ ಪಾರ್ಟಿ ಎಂದ ಸೋನಂ ಕಪೂರ್

ಸಾರಾಂಶ

ನಮ್ಮ ನಿಮ್ಮೆಲ್ಲರ ಲೈಫ್‌ನಲ್ಲೂ ಸಮಸ್ಯೆ ತಂದೊಡ್ಡುವ, ಸಮಸ್ಯೆಯಾಗಿ ಕಾಡುವ ವ್ಯಕ್ತಿಗಳು ಒಂದಲ್ಲ ಒಂದು ಹಂತದಲ್ಲಿ ಬಂದೇ ಬರುತ್ತಾರೆ. ಅವರೆಲ್ಲಾ ನಮ್ಮ ಪಾಲಿಗೆ ‘ಟ್ರಬಲ್ ಮೇಕರ್’ಗಳೇ

ಹೀಗಿರುವಾಗ ಸೆಲೆಬ್ರಿಟಿಗಳ ಲೆವಲ್‌ನಲ್ಲಿ ಈ ರೀತಿಯ ಟ್ರಬಲ್ ಮೇಕರ್‌ಗಳು ಮತ್ತಷ್ಟು ಜಾಸ್ತಿ ಇದ್ದೇ ಇರುತ್ತಾರೆ. ಹೀಗಂತ ಅವರ ಬಳಿಯೇ ನೇರವಾಗಿ ನಿಮಗೆ ಹೆಚ್ಚು ತೊಂದರೆ ಕೊಡುವುದು ಯಾರು ಎಂದು ಪ್ರಶ್ನೆ ಮಾಡಿದರೆ ಏನು ಉತ್ತರ ಕೊಡುತ್ತಾರೋ, ಬಿಡುತ್ತಾರೋ? ಆದರೆ ಸೋನಂ ಕಪೂರ್ ಮಾತ್ರ ಈ ವಿಚಾರದಲ್ಲಿ ಭಾರಿ ಬೋಲ್ಡ್. ಯಾಕೆಂದರೆ ತನ್ನ ಪಾಲಿಗೆ ಹೆಚ್ಚು ಸಮಸ್ಯೆ ತಂದೊಡ್ಡುವುದು ಯಾರು ಎಂದು ಕೇಳಿದ ಪ್ರಶ್ನೆಗೆ ರಾಣಾವತ್ ಹೆಸರನ್ನು ನೇರಾ ನೇರವಾಗಿ ಹೇಳಿಬಿಟ್ಟಿದ್ದಾರೆ. ಸೋನಂ ಕಪೂರ್ ಮತ್ತು ಕಂಗನಾ ರಾಣಾವತ್ ನಡುವಿನ ಸ್ನೇಹ ಎಷ್ಟರ ಮಟ್ಟಿಗಿದೆ, ಅವರಿಬ್ಬರ ಒಡನಾಟ ಹೇಗಿದೆ ಎನ್ನುವುದನ್ನು ಜಾಲಾಡಿದರೆ ಅವರಿಬ್ಬರು ಹೆಚ್ಚು ಗಾಢವೂ ಅಲ್ಲದ, ಅಷ್ಟು ಪೇಲವವೂ ಅಲ್ಲದ ಸ್ನೇಹ ಹೊಂದಿದ್ದಾರೆ. ಹಾಗೆ ನೋಡಿದರೆ ಸೋನಂ ಸ್ವಲ್ಪ ಸಾಫ್ಟ್, ಕಂಗನಾ ರಾಣಾವತ್ ಸಲ್ಪ ಮುಂಗೋಪಿ. ಆದರೆ ಇವರಿಬ್ಬರ ಮಧ್ಯೆ ಏನಾಗಿದೆ, ಯಾವ ಕಾರಣಕ್ಕೆ ಸೋನಂಗೆ ಕಂಗನಾ ಕಿರಿಕ್ ಪಾರ್ಟಿಯಾಗಿ ಕಾಡಿದ್ದಾರೋ ಗೊತ್ತಿಲ್ಲ. ಅದ್ಯಾವ ವಿವರವನ್ನೂ ಸೋನಂ ಬಾಯಿಬಿಟ್ಟಿಲ್ಲ.

ಧೂಳೆಬ್ಬಿಸಿದ ಸನ್ನಿ ಡ್ಯಾನ್ಸ್.. ಅಭಿಮಾನಿಗಳಿಂದ ಉಘೆ..ಉಘೆ

ಬಾಲಿವುಡ್ ಜಾಕ್‌ಪಾಟ್ : ಅಕ್ಷಯ್, ಮಾಧುರಿ, ಸನ್ನಿಗೆ ಬಿಜೆಪಿ ಟಿಕೆಟ್?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?