ಐಶ್ವರ್ಯಾ ರೈ ಕೈಬಿಟ್ಟ ಪಾತ್ರವನ್ನು ಒಪ್ಪಿಕೊಂಡ ಸೆಕ್ಸಿ ಕ್ವೀನ್!

By Web DeskFirst Published 10, Sep 2018, 3:38 PM IST
Highlights

ಕೆಲ ದಿನಗಳ ಹಿಂದೆ ನಟಿ ಐಶ್ವರ್ಯಾ ರೈ 'ವೋ ಕೌನ್ ಥಿ' ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಬಂದ ಸುದ್ದಿ ಪ್ರಕಾರ ಈ ಚಿತ್ರದಿಂದ ಐಶ್ವರ್ಯಾ ಹೊರ ಬಂದಿದ್ದಾರೆ. ಇದೀಗ ಅವರ ಪಾತ್ರವನ್ನು ಯಾರು ಮಾಡಲಿದ್ದಾರೆ? 

ನವದೆಹಲಿ (ಸೆ. 10): ಕೆಲ ದಿನಗಳ ಹಿಂದೆ ನಟಿ ಐಶ್ವರ್ಯಾ ರೈ ವೋ ಕೌನ್ ಥಿ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಬಂದ ಸುದ್ದಿ ಪ್ರಕಾರ ಈ ಚಿತ್ರದಿಂದ ಐಶ್ವರ್ಯಾ ಹೊರ ಬಂದಿದ್ದು ಸೆಕ್ಸಿ ಕ್ವೀನ್ ಬಿಪಾಶ ಬಸು ಅವರ ಪಾತ್ರವನ್ನು ಮಾಡಲಿದ್ದಾರೆ. 

’ವೋ ಕೌನ್ ಥಿ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಐಶ್ವರ್ಯಾ ರೈ ಒಪ್ಪಿಕೊಂಡಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಐಶ್ವರ್ಯಾ ಚಿತ್ರವನ್ನು ಕೈ ಬಿಟ್ಟಿದ್ದು ಅವರ ಪಾತ್ರ ಮಾಡಲು ಬಿಪಾಶ ಬಸು ಒಪ್ಪಿಕೊಂಡಿದ್ದಾರೆ. ಇವರಿಗೆ ಅರ್ಜುನ್ ಎನ್ ಕಪೂರ್ ಸಾಥ್ ನೀಡಲಿದ್ದಾರೆ. 

ವೋ ಕೌನ್ ಥಿ ಚಿತ್ರ 1964 ರಲ್ಲಿ ತೆರೆ ಕಂಡ ಚಿತ್ರ. ರಾಜ್ ಕೌಸ್ಲಾ ನಿರ್ದೇಶನದ ಈ ಚಿತ್ರದಲ್ಲಿ ಸಾಧನಾ ಹಾಗೂ ಮನೋಜ್ ಕುಮಾರ್ ಅಭಿನಯಿಸಿದ್ದರು. ಅದೇ ಚಿತ್ರವನ್ನು ಈಗ ರಿಮೇಕ್ ಮಾಡಲಾಗುತ್ತಿದೆ. ಈ ಚಿತ್ರದ ಮ್ರಮುಖ ಪಾತ್ರದಲ್ಲಿ ಬಿಪ್ಸ್ ಕಾಣಿಸಿಕೊಳ್ಳಲಿದ್ದು ಬೇರೆ ಪಾತ್ರಗಳ ಬಗ್ಗೆ ಇನ್ನೂ ಮಾಹಿತಿ ಬಹಿರಂಗಗೊಂಡಿಲ್ಲ. 

Last Updated 19, Sep 2018, 9:22 AM IST