
ಸೆಲಬ್ರಿಟಿಗಳೆಂದ ಮೇಲೆ ಶೂಟಿಂಗ್ ಜಾಗಕ್ಕೆ ಸಾವಿರಾರು ಮಂದಿ ಫ್ಯಾನ್‌ಗಳು ಬಂದು ಹೋಗುತ್ತಾರೆ. ಫೋಟೋ ,ಆಟೋಗ್ರಾಫ್ ತೆಗೆದುಕೊಳ್ಳುತ್ತಾ ಗಿಫ್ಟ್ ಕೊಡುತ್ತಾ ಪ್ರೀತಿ ತೋರಿಸುತ್ತಾರೆ.
ಆದರೆ ಇಲ್ಲೊಂದು ಮರೆಯಲಾಗದ ಘಟನೆ ನಡೆದಿದೆ. ಶಾಹಿದ್ ಉತ್ತರ ಖಂಡ್‌ನಲ್ಲಿ ಇರುವ ಮಸ್ಸೂರಿಯಲ್ಲಿ ಚಿತ್ರವೊಂದಕ್ಕೆ ಶೂಟಿಂಗ್ ಮಾಡುವಾಗ ಸ್ಥಳಕ್ಕೆ ಭೇಟಿ ನೀಡಿದ ಫ್ಯಾನ್ ಒಬ್ಬಳು ಆಟೋಗ್ರಾಫ್‌ಗೆಂದು ಧರಿಸಿದ ಜಾಕೆಟ್ ಬಿಚ್ಚಿ ಶರ್ಟ್ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡಿದ್ದಾರೆ. ಇದನ್ನು ಕಂಡ ಜನರು ಅಬ್ಬಾ.! ಎಂಥ ಅಭಿಮಾನಿಗಳಿದ್ದಾರೆ ಎಂದ ಆಶ್ಚರ್ಯಪಟ್ಟಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಶಾಹಿದ್ ಹೀಗೆ ಒಂದು ಫ್ಯಾನ್ ಮಿಡ್‌ನೈಟ್ ರಾಮಾಯಣದ ಬಗ್ಗೆ ಹೇಳಿಕೊಂಡಿದ್ದರು. ರಾತ್ರಿ 2 ಗಂಟೆ ಅಂದು ಶಾಹಿದ್ ವಾಸ ಮಾಡುತ್ತಿದ್ದ ಮನೆಯ ಕಾಂಪೌಂಡ್‌ವೊಂದನ್ನು ಹತ್ತಿ ಭೇಟಿ ಮಾಡಲು ಬಂದಿದ್ದು ಗಾಬರಿ ಉಂಟು ಮಾಡಿತ್ತಂತೆ. ಮೊದ ಮೊದಲು ಇದನ್ನು ಕಂಡು ಭಯಪಡುತ್ತಿದ್ದ ಮೀರಾ ನಂತರ ಅಭಿಮಾನಿಗಳು ಹೇಗೆಂದು ತಿಳಿದುಕೊಂಡು ಶಾಹಿದ್‌ಗೆ ಸಪೂರ್ಟಿವ್ ಆದರು.
ಚಿತ್ರ ಶೂಟಿಂಗ್ ವೇಳೆ ಅವಘಡ : ವ್ಯಕ್ತಿ ಸಾವು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.