
ಮುಂಬೈ (ಜ. 26): ಅತಿಲೋಕ ಸುಂದರಿ ಶ್ರೀದೇವಿ ಆಲ್ ಟೈಂ ಫೇವರೇಟ್ ನಟಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆಕೆಯ ನಿಧನಾ ನಂತರವೂ ಸಿನಿ ಪ್ರೇಕ್ಷಕರ ಮನದಲ್ಲಿ ಉಳಿದಿದ್ದಾರೆ. ಈಕೆಯ ಸಿನಿಮಾಗಳೆಂದೆ ಸಾಕು ಕಾದು ಕುಳಿತಿರುತ್ತಿದ್ದ ಅಭಿಮಾನಿ ಬಳಗವೇ ಇದೆ.
ಶ್ರೀದೇವಿ ಪುತ್ರಿ ಜಾಹ್ನವಿಗೂ ಅಮ್ಮನ ಸಿನಿಮಾಗಳನ್ನು ನೋಡುವುದೆಂದರೆ ಬಹಳ ಇಷ್ಟ. ಶ್ರೀದೇವಿಯ ಒಂದು ಸಿನಿಮಾ ನೋಡಿ 3 ದಿನ ಮಾತು ಬಿಟ್ಟಿದ್ದಳಂತೆ ಜಾಹ್ನವಿ! ಅಷ್ಟೇ ಅಲ್ಲ ತಾನು ಒಳ್ಳೆಯ ವ್ಯಕ್ತಿ ಅಲ್ಲ ಎಂದು ಯೋಚಿಸಲಾರಂಭಿಸಿದ್ದಳಂತೆ!
ಕಮಲ್ ಹಾಸನ್ ಜೊತೆಗಿನ ’ಸದ್ಮಾ’ ನೋಡಿ ಜಾಹ್ನವಿ ಪ್ರಭಾವಿತಳಾಗಿದ್ದಳು. ನೀನು ಅವರ ಜೊತೆ (ಕಮಲ್ ಹಾಸನ್) ಜೊತೆ ಸರಿಯಾಗಿ ನಡೆದುಕೊಂಡಿಲ್ಲ. ಯೂ ಆರ್ ಬ್ಯಾಡ್ ಮಮ್ಮ ಎಂದೂ ಹೇಳಿದ್ದಳು ಎಂದು ಶ್ರೀದೇವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
'ಆರಂಭದಲ್ಲಿ ಸ್ಟುಡೆಂಟ್ ಆಫ್ ದ ಇಯರ್ ಸಿನಿಮಾ ಮಾಡುತ್ತೇನೆಂದಾಗ ಆಕೆ ಸಿನಿಮಾ ರಂಗಕ್ಕೆ ಬರುವುದು ಇಷ್ಟವಿರಲಿಲ್ಲ. ಸಿನಿಮಾ ರಂಗ ಕೆಟ್ಟದಾಗಿದೆ ಅಂತಲ್ಲ. ನಾನು ಕೂಡಾ ಈ ಜಗತ್ತಿನ ಸೃಷ್ಟಿ’ ಎಂದು ಶ್ರೀದೇವಿ ಹೇಳಿಕೊಂಡಿದ್ದರು.
ಒಬ್ಬ ತಾಯಿಯಾಗಿ ಮಗಳ ಮದುವೆ ನೋಡಬೇಕೆಂಬ ಆಸೆ ಇತ್ತು. ನನ್ನ ಮಗಳ ಬಗ್ಗೆ ಹೆಮ್ಮೆ ಇದೆ. ನಾವು ಸ್ನೇಹಿತೆಯರ ರೀತಿ ಇದ್ದೇವೆ. ಹೆಚ್ಚಿನ ಸಮಯವನ್ನು ಒಟ್ಟಿಗೆ ಕಳೆದಿದ್ದೇವೆ ಎಂದು ಶ್ರೀದೇವಿ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.