
‘ಕೇದಾರ್‌ನಾಥ್’ ಸಿನಿಮಾ ಚಿತ್ರೀಕರಣ, ಪ್ರಮೋಷನ್‌ಗಾಗಿ ಸುಶಾಂತ್ ಮತ್ತು ಸಾರಾ ಜೊತೆ ಜೊತೆಯಲ್ಲೇ ಎಲ್ಲಾ ಕಡೆ ಸುತ್ತಾಡಿದ್ದರು. ಇದು ಸಹಜ. ಇದಾದ ಮೇಲೂ ಈ ಜೋಡಿ ಅಲ್ಲಲ್ಲಿ ಒಟ್ಟಾಗಿ ಕಾಣಿಸಿಕೊಂಡು ಗಾಸಿಪ್ ಹೆಚ್ಚಾಗಲು ಕಾರಣವಾಗಿತ್ತು. ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ ಮೊನ್ನೆ ಸುಶಾಂತ್ ಬರ್ತ್‌ಡೇ ಅಂಗವಾಗಿ ಸಾರಾ ದೂರದ ಡೆಹ್ರಾಡೂನ್‌ನಲ್ಲಿ ನಿಗದಿಯಾಗಿದ್ದ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬರ್ತ್‌ಡೇ ಕೇಕ್ ಮತ್ತು ಗಿಫ್ಟ್ ಹಿಡಿದು ಸೀದಾ ಸುಶಾಂತ್ ಮನೆಗೆ ತೆರಳಿ ಮಧ್ಯಾಹ್ನದಿಂದ ರಾತ್ರಿ ಅಲ್ಲಿಯೇ ಕಳೆದಿದ್ದಾಳೆ.
ಇದು ಮೊದಲೇ ಇದ್ದ ಗಾಸಿಪ್‌ಗೆ ಮತ್ತಷ್ಟುರೆಕ್ಕೆ ಪುಕ್ಕ ಹುಟ್ಟುವಂತೆ ಮಾಡಿತ್ತು. ಆದರೆ ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಏನನ್ನೂ ಹೇಳದೇ ಇದ್ದರೂ, ಸಾರಾ ಆಪ್ತರು ಇಬ್ಬರ ನಡುವೆ ಒಳ್ಳೆಯ ಸ್ನೇಹ ಮಾತ್ರವೇ ಇದೆ. ಅದನ್ನು ಬಿಟ್ಟರೆ ಬೇರೆ ಏನೂ ಇಲ್ಲ ಎಂದಿದ್ದರೂ ಇದರ ಸತ್ಯಾಸತ್ಯತೆ ತಿಳಿಯಲು ಇನ್ನೂ ಕಾಲಾವಕಾಶ ಬೇಕೇ ಬೇಕು.
96 ಕೆಜಿ ತೂಗುತ್ತಿದ್ದ ಹುಡುಗಿ ಬಳುಕುವ ಬಳ್ಳಿಯಾದದ್ದು ಹೇಗೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.