ಬಂಗಲೆ ಮೇಲೆ ಸಾರಾ-ಅಮೃತ ಕಣ್ಣು: ದೂರು ದಾಖಲು!

Published : Jan 22, 2019, 01:26 PM IST
ಬಂಗಲೆ ಮೇಲೆ ಸಾರಾ-ಅಮೃತ ಕಣ್ಣು: ದೂರು ದಾಖಲು!

ಸಾರಾಂಶ

ಬಾಲಿವುಡ್ ಹಾಟ್ ಆ್ಯಂಡ್ ಹ್ಯಾಪೆನಿಂಗ್ ನಟಿ ಸಾರಾ ಖಾನ್ ಈಗ ಕೋಟ್ಯಾಂತರ ರು. ಬೆಲೆ ಬಾಳುವ ಬಂಗಲೆ ಮೇಲೆ ಕಣ್ಣು ಹಾಕಿದ್ದಕ್ಕೆ ಠಾಣೆ ಮಟ್ಟಿಲೇರುವ ಪರಿಸ್ಥಿತಿ ಬಂದೊದಗಿದೆ!

ಸೈಫ್ ಅಲಿ ಖಾನ್ ಮಾಜಿ ಪತ್ನಿ ಅಮೃತಾ ಸಿಂಗ್ ಹಾಗೂ ಮಗಳು ಸಾರಾ ಅಲಿ ಖಾನ್ ಕೂಲ್ ಲೈಫ್ ಲೀಡ್ ಮಾಡುತ್ತಿದ್ದಾರೆ. ಆದರೆ, ಇದೀಗ ಕೋಟ್ಯಾಂತರ ರೂ. ಬೆಲೆ ಬಾಳುವ ಬಂಗಲೆ ಮೇಲೆ ಕಣ್ಣಾಕ್ಕಿದ್ದಕ್ಕೆ ಸುದ್ದಿಯಾಗುತ್ತಿದ್ದಾರೆ.

 

ಇತ್ತೀಚೆಗೆ ಬಿಡುಗಡೆಯಾದ 'ಕೇದಾರನಾಥ್' ಹಾಗೂ 'ಸಿಂಬಾ' ಬಾಕ್ಸ್ ಆಫೀಸ್ ಕೊಳ್ಳೆ ಹೊಡಿದಿರುವ ಸಂತಸದಲ್ಲಿದ ಸಾರಾ ಎಲ್ಲೆಡೆ ಸಂದರ್ಶನ ನೀಡುತ್ತಾ, ಸೋಷಿಯಲ್ ಮಿಡಿಯಾದಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಈ ನಡುವೆಯೇ ಇದೀಗ ಹೊಸ ವಿವಾದಕ್ಕೆ ಸಿಲುಕಿದ್ದಾರೆ.

96 ಕೆಜಿ ತೂಗುತ್ತಿದ್ದ ಹುಡುಗಿ ಬಳುಕುವ ಬಳ್ಳಿಯಾದದ್ದು ಹೇಗೆ?

ಅಮೃತಾ ಸಿಂಗ್ ಸಂಬಂಧಿ ಮಧುಸೂದನ್ ಅವರಿಗೆ ಸೇರಿದ ಕೋಟ್ಯಾಂತರ ಬೆಲೆ ಬಾಳುವ ಬಂಗಲೆಯೊಂದು ಡೆಹರಾಡೂನ್‌ನಲ್ಲಿದೆ. ಜನವರಿಯಲ್ಲಿ ಈ ಬಂಗಲೆ ಮಾಲೀಕ ಮಧುಸೂಧನ್ ವಿಧಿವಶರಾಗಿದ್ದು, ಇದೀಗ ಈ ಬೆಲೆ ಬಾಳುವ ಬಂಗಲೆ ಮೇಲೆ ಹಕ್ಕು ಸಾಧಿಸಲು ಅಮ್ಮ-ಮಗಳು ಯತ್ನಿಸುತ್ತಿರುವುದು ಇದೀಗ ಸುದ್ದಿಯಾಗಿದೆ.

 

ಮಧುಸೂಧನ್ ಅವರು ಅನಾರೋಗ್ಯ ಪೀಡಿತರಾಗಿ, ಹಾಸಿಗೆ ಹಿಡಿದಾಗ ಒಂದು ದಿನವೂ ನೋಡಲು ಬಾರದ ಅಮೃತಾ ಸಿಂಗ್, ಇದೀಗ ಆಸ್ತಿ ಮೇಲೆ ಹಕ್ಕು ಸ್ಥಾಪಿಸಲು ಹೆಣಗುತ್ತಿದ್ದಾರೆಂದು ಮಧು ಅವರ ಕೇರ್ ಟೇಕರ್ ಖುಷಿರಾಮ್ ಆರೋಪಿಸುತ್ತಿದ್ದಾರೆ. ಅಮ್ಮ-ಮಗಳ ಮೇಲೆ ದೂರೂ ದಾಖಲಿಸಿದ್ದಾರೆ. ನೋಡಬೇಕು ಈ ಪ್ರಕರಣ ಅದೆಲ್ಲಿಗೆ ಬಂದು ನಿಲ್ಲುತ್ತೆ ಅಂತ.....

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಕ್ಷಯ್ ಖನ್ನಾ ವೃತ್ತಿಜೀವನದ ಅತಿ ಹೆಚ್ಚು ಗಳಿಕೆಯ 5 ಚಿತ್ರಗಳು, ಎಲ್ಲ 100 ಕೋಟಿ!
Travel Movies: ನೀವು ಟ್ರಾವೆಲ್ ಪ್ರಿಯರಾಗಿದ್ರೆ ಈ ಸಿನಿಮಾಗಳನ್ನು ಮಿಸ್ ಮಾಡದೆ ನೋಡಿ