
ಬೆಂಗಳೂರು (ಜ. 23): ಕತ್ರಿನಾ ಕೈಫ್ ‘ಭಾರತ್’ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಬಿಡುವಿದ್ದ ವೇಳೆಯಲ್ಲೇ ಬ್ಯಾಟ್ ಬೀಸಿ ಮುಂದಿನ ಕ್ರಿಕೆಟ್ ವಲ್ಡ್‌ರ್ ಕಪ್ ಮ್ಯಾಚ್‌ನಲ್ಲಿ ಇಂಡಿಯನ್ ಟೀಂ ಅನ್ನು ಪ್ರತಿನಿಧಿಸುವುದಕ್ಕಾಗಿ ಅಪ್ಲಿಕೇಷನ್ ಹಾಕಿ ಬಿಟ್ಟಿದ್ದಾರೆ. ಅದು ಗೆಳತಿ ಅನುಷ್ಕಾ ಶರ್ಮಾ ಮೂಲಕ.
ವಿಷಯ ಏನಪ್ಪಾ ಅಂತಂದ್ರೆ, ‘ಭಾರತ್’ ಸೆಟ್‌ನಲ್ಲಿ ಕತ್ರಿನಾ ಒಳ್ಳೆಯ ಅನುಭವಿ ಕ್ರಿಕೆಟರ್‌ನಂತೆ ಆಟವಾಡಿದ್ದ ವಿಡಿಯೋವನ್ನು ಸೋಷಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ ಅದರ ಕೆಳಗೆ ‘ಅನುಷ್ಕಾ ಶರ್ಮಾ, ನಿನ್ನ ಪತಿ ವಿರಾಟ್ ಕೊಹ್ಲಿಗೆ ಕ್ರಿಕೆಟ್ ವಲ್ಡ್‌ರ್ ಕಪ್ ಪಟ್ಟಿಯಲ್ಲಿ ನನ್ನ ಹೆಸರನ್ನೂ ಸೇರಿಸುವಂತೆ ಹೇಳು, ಏನಿಲ್ಲವೆಂದರೂ ಒಳ್ಳೆಯ ಆಲ್‌ರೌಂಡರ್ ಪ್ರದರ್ಶನ ನೀಡಿಯೇ ನೀಡುತ್ತೇನೆ’ ಎಂದು ತಮಾಷೆ ಮಾಡಿದ್ದಾರೆ.
ಇದಾಗುತ್ತಿದ್ದಂತೆಯೇ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಒಡತಿಯಾಗಿರುವ ಪ್ರೀತಿ ಝಿಂಟಾ, ಕತ್ರಿನಾ ಪೋಸ್ಟ್‌ಗೆ ಕಮೆಂಟ್ ಮಾಡಿ ‘ದಯವಿಟ್ಟು ನಮಗೂ ಆಟವಾಡಲು ಅವಕಾಶ ಕೊಡಿಸು’ ಎಂದು ಕಾಲೆಳೆದಿದ್ದಾರೆ. ಇನ್ನು ಇದೇ ಸೆಟ್‌ನಲ್ಲಿ ಸಲ್ಮಾನ್ ಖಾನ್ ಕೂಡ ಭರ್ಜರಿಯಾಗಿ ಬ್ಯಾಟ್ ಬೀಸಿ ತಮ್ಮ ಪ್ರತಿಭೆ ತೋರಿರುವುದು ವಿಶೇಷ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.