ಈ ದಾಳಿಗೂ ನನಗೂ ಸಂಬಂಧವಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ: ನಟಿ ರಕುಲ್ ಸ್ಪಷ್ಟನೆಯೇನು?

Published : Oct 05, 2026, 06:17 PM IST
Rakul Preet Singh

ಸಾರಾಂಶ

ಮುಂಬೈನಲ್ಲಿ ನಡೆದ ಐಟಿ ದಾಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ನಟಿ ರಕುಲ್ ಪ್ರೀತ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ತಾವು 20ನೇ ವಯಸ್ಸಿನಿಂದ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿರುವ ಜವಾಬ್ದಾರಿಯುತ ಪ್ರಜೆ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಐಟಿ ದಾಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ನಟಿ ರಕುಲ್ ಪ್ರೀತ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ತಾವು ಪ್ರಾಮಾಣಿಕ ತೆರಿಗೆದಾರರು ಎಂದು ಹೇಳಿದ್ದು, ಸುಳ್ಳು ಸುದ್ದಿಗಳನ್ನು ಹಿಂಪಡೆಯುವಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ನಟಿ ರಕುಲ್ ಪ್ರೀತ್ ಸಿಂಗ್ ಅವರು ಮುಂಬೈನಲ್ಲಿ ಇತ್ತೀಚೆಗೆ ನಡೆದ ಆದಾಯ ತೆರಿಗೆ (ಐಟಿ) ದಾಳಿಗೂ ತಮಗೂ ತಳುಕು ಹಾಕಿ ಬರುತ್ತಿರುವ ವರದಿಗಳ ಬಗ್ಗೆ ಸೋಮವಾರ ಮೌನ ಮುರಿದಿದ್ದಾರೆ.

ಈ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಇನ್ಸ್ಟಾಗ್ರಾಮ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸತ್ಯಾಸತ್ಯತೆ ಪರಿಶೀಲಿಸದೆ ಸುದ್ದಿಗಳನ್ನು ವೈಭವೀಕರಿಸುವ ಟ್ರೆಂಡ್ ಆನ್‌ಲೈನ್ ರಿಪೋರ್ಟರ್‌ಗಳು ಹಾಗೂ ಕೆಲವು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ. ಹಾಗಾಗಿ ನಾನೇ ನೇರವಾಗಿ ಸತ್ಯವನ್ನು ಹೇಳುತ್ತಿದ್ದೇನೆ. ಆ ಐಟಿ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ರಕುಲ್ ಬರೆದುಕೊಂಡಿದ್ದಾರೆ.

'ನಾನು ಜವಾಬ್ದಾರಿಯುತ, ಕಾನೂನು ಗೌರವಿಸುವ ಪ್ರಜೆ'

ತಮಗೆ 20 ವರ್ಷ ವಯಸ್ಸಾಗಿದ್ದಾಗಿನಿಂದಲೂ ಸರಿಯಾಗಿ ತೆರಿಗೆ ಕಟ್ಟುತ್ತಿದ್ದೇನೆ ಎಂದು ರಕುಲ್ ಒತ್ತಿ ಹೇಳಿದ್ದಾರೆ. "ವೈಯಕ್ತಿಕವಾಗಿ ನಾನು ಯಾವುದೇ ಅಕ್ರಮ ವಿದೇಶಿ ಹಣ ವರ್ಗಾವಣೆಯಲ್ಲಿ ಭಾಗಿಯಾಗಿಲ್ಲ," ಎಂದು ಅವರು ತಿಳಿಸಿದ್ದಾರೆ. ನಾನು ಸೇನಾ ಹಿನ್ನೆಲೆಯ ಕುಟುಂಬದಿಂದ ಬಂದವಳು. ಚಿತ್ರರಂಗದಲ್ಲಿ ನನಗೆ ಯಾವುದೇ ಗಾಡ್‌ಫಾದರ್ ಇರಲಿಲ್ಲ. ಕೇವಲ ನನ್ನ ಕಠಿಣ ಪರಿಶ್ರಮದಿಂದ ಮೇಲೆ ಬಂದಿದ್ದೇನೆ. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ನನ್ನ 20ನೇ ವಯಸ್ಸಿನಿಂದಲೂ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದ್ದೇನೆ.

ವೈಯಕ್ತಿಕವಾಗಿ ಅಥವಾ ಯಾವುದೇ ಪ್ರೊಡಕ್ಷನ್ ಹೌಸ್ ಪರವಾಗಿ ನಾನು ಯಾವುದೇ ಅಕ್ರಮ ವಿದೇಶಿ ಹಣ ವರ್ಗಾವಣೆಯಲ್ಲಿ ಭಾಗಿಯಾಗಿಲ್ಲ. ದೇಶದಲ್ಲಿ ಅಥವಾ ವಿದೇಶದಲ್ಲಿ ಯಾರ ಪರವಾಗಿಯೂ ನಾನು ಯಾವುದೇ ಬೇನಾಮಿ ಆಸ್ತಿ ಹೊಂದಿಲ್ಲ. ಯಾರೂ ನನಗೆ ಯಾವುದೇ ಆಸ್ತಿಯನ್ನು ಉಡುಗೊರೆಯಾಗಿ ನೀಡಿಲ್ಲ, ಜೊತೆಗೆ ಅಂತಹ ದುಬಾರಿ ಉಡುಗೊರೆಗಳನ್ನು ನಾನು ಸ್ವೀಕರಿಸುವುದೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳಿಗೆ ಮನವಿ

ಯಾವುದೇ ಸುಳ್ಳು ಸುದ್ದಿ ಪ್ರಕಟಿಸುವ ಮುನ್ನ ಸತ್ಯವನ್ನು ಪರಿಶೀಲಿಸಿ ಎಂದು ರಕುಲ್ ಮನವಿ ಮಾಡಿದ್ದಾರೆ. ಈ ಸುಳ್ಳು ಹಾಗೂ ಊಹಾಪೋಹದ ವರದಿಗಳನ್ನು ಪ್ರಕಟಿಸಿದವರೆಲ್ಲರೂ ಅದನ್ನು ಹಿಂಪಡೆದು, ಸತ್ಯವನ್ನು ಸ್ಪಷ್ಟಪಡಿಸಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ. ಎಷ್ಟೇ ದೊಡ್ಡ ಮಾಧ್ಯಮ ಸಂಸ್ಥೆಯಾದರೂ ಅವರಿಗೆ ಅವರದ್ದೇ ಆದ ಕಮರ್ಷಿಯಲ್ ಒತ್ತಡಗಳು ಇರುತ್ತವೆ ಎಂಬುದು ನನಗೆ ಅರ್ಥವಾಗುತ್ತದೆ. ಆದರೆ ಅದು ಸತ್ಯವನ್ನು ಮರೆಮಾಚುವಂತಿರಬಾರದು. ಖಂಡಿತವಾಗಿಯೂ ಇನ್ನೊಬ್ಬರ ಘನತೆ ಮತ್ತು ಬದುಕನ್ನು ಹಾಳುಮಾಡುವ ಬೆಲೆಯಲ್ಲಿ ಇರಬಾರದು ಎಂದು ಅವರು ಮಾತು ಮುಗಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bethlehem Kudumba Unit: ಇದು ವಯಸ್ಸಿನ ಅಂತರದ ಕಥೆಯಲ್ಲ, ಪ್ರೀತಿಯೆಂಬ ಪ್ರಶಾಂತ ಭಾವದ ಸುಂದರ ಕಾವ್ಯ
3.5 ಕೋಟಿ ಬಜೆಟ್‌ನಿಂದ 13 ಕೋಟಿ+: ‘ಪ್ರೇಮದ ಊರಲಿ’ ಸಕ್ಸಸ್ ನೋಡಿ ರಿಷಬ್ ಶೆಟ್ಟಿ ಹೇಳಿದ್ದೇನು?