
ತಮ್ಮ ಅರ್ಧ ದಿನ ಜಿಮ್‌ನಲ್ಲೇ ಕಳೆಯುವ ಜಾಹ್ನವಿ ಕಪೂರ್ ಸಣ್ಣ-ದಪ್ಪ ಆಟಕ್ಕೆ ಬ್ರೇಕ್ ಇಲ್ಲ ಅನ್ಸುತ್ತೆ ನೋಡಿ. ದಿಲ್ ಕಿ ಧಡಕ್ ಲಡ್ಕಿ 'ಕಾರ್ಗಿಲ್ ಗರ್ಲ್' ಚಿತ್ರದಲ್ಲಿ IAF ಅಧಿಕಾರಿಯಾದ ಗುನ್‌ಜನ್ ಸಕ್ಸೇನಾ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಇದಕ್ಕೆ 6 ಕೆಜಿ ತೂಕ ಹೆಚ್ಚಿಸಿಕೊಳ್ಳಬೇಕಿದೆ.
ಜಾಹ್ನವಿ ಕಪೂರ್ ಎರಡು ಚಿತ್ರಗಳಿಗೆ ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಮಾಡುತ್ತಿದ್ದು ಒಂದಕ್ಕೆ 6 ಕೆಜಿ ಹೆಚ್ಚಾಗಬೇಕಿದ್ದು ಮತ್ತೊಂದಕ್ಕೆ 10 ಕೆಜಿ ಇಳಿಸಬೇಕಿದೆ.
ಶ್ರೀದೇವಿ ಮಾಡಿದ ತಪ್ಪನ್ನೇ ಮಗಳು ಜಾಹ್ನವಿ ಮಾಡಿದ್ಲಾ?
'ಕಾರ್ಗಿಲ್ ಗರ್ಲ್' ಚಿತ್ರದ ಮೊದಲ ಶೂಟಿಂಗ್ ಶೆಡ್ಯೂಲ್ ಗೆ ಜಾಹ್ನವಿ 45 ದಿನಗಳಲ್ಲಿ 6 ಕೆಜಿ ತೂಕ ಹೆಚ್ಚಿಸಿಕೊಂಡರು. ಆನಂತರ ‘ರೂಹಿ ಅಫ್‌ಝಾ’ ಚಿತ್ರದ ಶೂಟಿಂಗ್ ಶುರುವಾಗಿದ್ದು 10 ಕೆಜಿ ಇಳಿಸಿಕೊಳ್ಳಬೇಕಿದ್ದು ಅದನ್ನು ಮಾಡಿ ಶೂಟಿಂಗ್ ಮುಗಿಸಿದ್ದರು. ಬಟ್ ದಿ ಪ್ರಾಬ್ಲಂ ಈಸ್ ‘ಕಾರ್ಗಿಲ್ ಗರ್ಲ್’ ಚಿತ್ರದ ಎರಡನೇ ಶೆಡ್ಯೂಲ್ ಶೂಟಿಂಗ್ ಶುರು ಮಾಡಲು ಚಿತ್ರತಂಡ ಸಿದ್ಧವಾಗಿದ್ದು ಜಾಹ್ನವಿ ಮತ್ತೆ 6-8 ಕೆಜಿ ಹೆಚ್ಚಿಸಿಕೊಳ್ಳಬೇಕಿದೆ.
‘ಜಿಮ್ ಗಲ್ಲ ನಿಮಗಾಗಿಯೇ ತಯಾರಾಗಿ ಬರುವಂತಾಗಿದೆ’
ಸಿಹಿ ತಿಂಡಿ ಕಂಡರೆ ಮಿಸ್ ಮಾಡದ ಜಾಹ್ನವಿ ಡಯಟ್ ಸಮಯದಲ್ಲಿ ಸಿಕ್ಕಾಪಟ್ಟೆ ಕಷ್ಟಪಡುತ್ತಾರೆ. ಆಕೆಯ ಜಿಮ್ ಟ್ರೇನರ್ ಮನೆಯಲ್ಲೇ ತಯಾರಿಸಿದ ಡ್ರೈ ಫ್ರೂಟ್ಸ್ ಲಡ್ಡು ತಯಾರಿ ಮಾಡಿ ವಾರಕ್ಕೊಂದು ದಿನ ಡಯಟ್ ಬ್ರೇಕ್ ಮಾಡಿ ಕೊಡುತ್ತಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.