
ಮಿಸ್ ವರ್ಲ್ಡ್ ಪಟ್ಟ ಗಿಟ್ಟಿಸಿ, ದೇಶಕ್ಕೆ ಹೆಮ್ಮೆ ತಂದುಕೊಟ್ಟ ನಟಿ ಐಶ್ವರ್ಯಾ ರೈ ಅದಾಗಿ 25 ವರ್ಷಗಳಾದರೂ ಮೇಣದ ಬೊಂಬೆಯಂತೆ ಕಂಗೊಳಿಸುತ್ತಾರೆ. ಕಾಲನ ಈ ಕೃಪಾದೃಷ್ಟಿ ಪಡೆದುಕೊಳ್ಳಲು ಐಶು ಏನೇನು ಕಸರತ್ತು ಮಾಡುತ್ತಾರೆ ಗೊತ್ತಾ?
ಹೋಂಮೇಡ್ ಫೇಸ್‌ಪ್ಯಾಕ್ಸ್
ಅಬ್ಬಾ ಐಶ್ವರ್ಯಾ ರೈ ; ಇವರ ಬಳಿ ಇರೋದೆಲ್ಲಾ ಬಲು ದುಬಾರಿ !
ಐಶ್ವರ್ಯಾ ಅಂದಿಗೂ ಇಂದಿಗೂ ಮನೆಯಲ್ಲೇ ಫೇಶಿಯಲ್ ತಯಾರಿಸಿಕೊಂಡು ಬಳಸುತ್ತಾರೆಂದರೆ ನಂಬುವುದು ಕೊಂಚ ಕಷ್ಟವಾದೀತು. ಆದರೆ, ಆಕೆ ಮಾಡುವುದಿಷ್ಟೇ, ಎರಡು ದಿನಕ್ಕೊಮ್ಮೆ ಕಡಲೆಹಿಟ್ಟು, ಹಾಲು ಹಾಗೂ ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಅಲ್ಲದೆ, ಮೊಸರು ಹಾಗೂ ಸೌತೆಕಾಯಿ ರಸವನ್ನು ಆಗಾಗ ಹಚ್ಚಿಕೊಂಡು ತ್ವಚೆಗೆ ನೈಸರ್ಗಿಕ ಮಾಯಿಶ್ಚರೈಸರ್ ಒದಗಿಸುತ್ತಾರೆ.
ನೀರು ನೀರು ನೀರು
ಯಾವುದೇ ನಟಿಯ ಹೊಳೆವ ಮೈ ಕಾಂತಿ ರಹಸ್ಯ ಕೇಳಿನೋಡಿ, ಅವರು ಹೇಳುವುದು ಒಂದೇ. ಅದು ನೀರು. ಏಕೆಂದರೆ ಚೆನ್ನಾಗಿ ನೀರು ಕುಡಿದಷ್ಟೂ ಅದು ದೇಹದಿಂದ ಟಾಕ್ಸಿನ್ಸ್ ಹೊರಹಾಕಿ ಒಳಗಿನಿಂದ ಸ್ವಚ್ಛವಾಗಿರುತ್ತದೆ. ಐಶ್ ಕೂಡಾ ಹಾಗೆ, ತನ್ನ ಯೂತ್‌ಫುಲ್ ಸ್ಕಿನ್ ಉಳಿಸಿಕೊಳ್ಳಲು ಸಾಕಷ್ಟು ನೀರು ಕುಡಿಯುತ್ತೇನೆ ಎನ್ನುತ್ತಾರೆ ಆಕೆ.
ತ್ವಚೆಯ ಆಹಾರ
ಎರಡನೇ ಮಗುವಿಗೆ ರೆಡಿಯಾದ್ರಾ ಮಾಜಿ ವಿಶ್ವ ಸುಂದರಿ?
ನೀವೇನು ತಿನ್ನುತ್ತೀರೋ ಅದೇ ಆಗುವಿರಿ ಎಂಬುದು ಜನಪ್ರಿಯ ನಾಣ್ಣುಡಿ. ಐಶ್ವರ್ಯಾ ವಿಷಯದಲ್ಲೂ ಅದು ನಿಜ. ಎಣ್ಣೆ ಆಹಾರಗಳಿಂದ ಸಂಪೂರ್ಣ ದೂರ ಉಳಿದಿರುವ ಐಶ್, ಆದಷ್ಟು ಬೇಯಿಸಿದ ಆಹಾರ ಸೇವಿಸುತ್ತಾರಂತೆ. ಮೂರು ಹೊತ್ತು ದೊಡ್ಡ ಊಟ ಮಾಡುವುದಕ್ಕಿಂತ ಆಗಾಗ ಸ್ವಲ್ಪ ಸ್ವಲ್ಪ ಆಹಾರ ಸೇವಿಸುವುದು ಐಶ್ವರ್ಯಾಗೆ ರೂಢಿ. ಸಂಪೂರ್ಣ ಆರೋಗ್ಯಯುತವಾದ ಸಮತೋಲಿತ ಆಹಾರ ಸೇವಿಸುವಂತೆ ಆಕೆಯ ಡಯಟೀಶಿಯನ್ ನೋಡಿಕೊಳ್ಳುತ್ತಾರೆ.
ಯೋಗ
ಉಳಿದ ಬಾಲಿವುಡ್ ನಟಿಯರಂತೆ ಐಶು ಜಿಮ್‌ಗೆ ಹೋಗುವುದಿಲ್ಲ. ಬದಲಿಗೆ ಪ್ರತಿದಿನ ಬ್ರಿಸ್ಕ್ ವಾಕ್ ಮಾಡುವುದು ತಪ್ಪಿಸುವುದಿಲ್ಲ. ಜೊತೆಗೆ, ಫಿಟ್ ಆಗಿರಲು ಪವರ್ ಯೋಗ ಅಭ್ಯಾಸ ಮಾಡಿಕೊಂಡಿದ್ದಾರೆ.
ಪಿಂಕ್ ಗ್ಲೋ
ಬಚ್ಚನ್ ಸೊಸೆ ಕೆನ್ನೆ ಯಾವಾಗಲೂ ಪಿಂಕ್ ಪಿಂಕ್ ಕಾಣುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಕಾರಣ ಪಿಂಕ್ ಮೇಕಪ್. ಐಶ್‌ಗೆ ಪಿಂಕ್ ಹಾಗೂ ಪೀಚ್ ಶೇಡ್‌ಗಳು ಫೇವರೇಟ್ ಆಗಿದ್ದು, ಆಕೆ ಮೇಕಪ್‌ಗೆ ಸದಾ ಆ ಶೇಡ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.