ಪಿ.ವಿ ಸಿಂಧು ಬಯೋಪಿಕ್; ಪುಲ್ಲೇಲ ಪಾತ್ರಕ್ಕೆ ಬಾಲಿವುಡ್ ಹೀರೋ!

By Web Desk  |  First Published Aug 29, 2019, 10:36 AM IST

ಬಿ-ಟೌನ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಕಿರೀಟ ತನ್ನದನಾಗಿಸಿಕೊಂಡ ಪಿ.ವಿ ಸಿಂಧು ಬಯೋಪಿಕ್; ಕೋಚ್ ಪುಲ್ಲೇಲ ಗೋಪಿಚಂದ್ ಪಾತ್ರವನ್ನು ಯಾರು ನಟಿಸುತ್ತಾರೆ ಗೊತ್ತಾ?


 

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದಲ್ಲೇ ಹಿತಿಹಾಸ ಸೃಷ್ಟಿಸಿದ ಆಟಗಾತಿ ಪಿ.ವಿ ಸಿಂಧು ಬಯೋಪಿಕ್ ಮಾಡಲು ಬಾಲಿವುಡ್ ನಿರ್ದೇಶಕರು ಕಾತುರದಿಂದ ಕಾಯುತ್ತಿದ್ದಾರೆ.

Tap to resize

Latest Videos

undefined

ಸಿಂಧುಗೆ ಚಾಂಪಿಯನ್ ಕಿರೀಟ ತೊಡಿಸಿದ ಬಂಗಾರದ ಮನುಷ್ಯ!

 

ಇನ್ನು ಸಿಂಧು ಸಾಧನೆಗೆ ಬೆನ್ನೆಲುಬಾಗಿ ನಿಂತವರು ಕೋಚ್ ಪುಲ್ಲೇಲ ಗೋಪಿಚಂದ್. ಶಿಷ್ಯರ ಸಾಧನೆಗೆ ವಿಪರೀತ ಶ್ರಮ ಹಾಕಿರುವ ಈ ಗುರುವಿನ ಪಾತ್ರಕ್ಕೂ ಡಿಮ್ಯಾಂಡ್ ವಿಪರೀತವಿದೆ. ಹಿಂದಿ ವಾಹಿನಿಗಳಲ್ಲಿ ಹರಿದಾಡುತ್ತಿರುವ ವದಂತಿ ಪ್ರಕಾರ ವಿಶ್ವ ಬ್ಯಾಡ್ಮಿಂಟನ್ ಸಿಂಧು ಜೀವನಾಧಾರಿತ ಚಿತ್ರಕ್ಕೆ ನಟ ಅಕ್ಷಯ್ ಕುಮಾರ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ!

 

ಅಕ್ಷಯ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ವಿಚಾರ ತಿಳಿದ ಗೋಪಿಚಂದ್, ‘ನಟರಲ್ಲಿ ನಾನು ಇಷ್ಟ ಪಡುವ ವ್ಯಕ್ತಿ ಅಕ್ಷಯ್ ಕುಮಾರ್, ಅವರು ನನ್ನ ಪಾತ್ರ ಮಾಡಿದರೆ ಅದ್ಭುತವಾಗಿರುತ್ತದೆ. ಚಿತ್ರದ ಬಗ್ಗೆ ನನಗೆ ಯಾವ ಮಾಹಿತಿಯೂ ಇಲ್ಲ,’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ ಗೆದ್ದ ಸಿಂಧುಗೆ ಬಹುಮಾನ ಘೋಷಿಸಿದ ಯಡಿಯೂರಪ್ಪ

ಈ ಹಿಂದೆ ಬಯೋಪಿಕ್ ಬಗ್ಗೆ ಹರಿದಾಡುತ್ತಿದ ವಿಚಾರದ ಬಗ್ಗೆ ಸಿಂಧು ಮಾತನಾಡಿದ್ದು ವಿದ್ಯಾ ಬಾಲನ್ ಅಥವಾ ದೀಪಿಕಾ ಪಡುಕೋಣೆ ತಮ್ಮ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದರು.

click me!