
ಬಾಲಿವುಡ್ ಗಲ್ಲಿ ಬಾಯ್ ರಣವೀರ್ ಸಿಂಗ್ ಚಿತ್ರ- ವಿಚಿತ್ರವಾದ ಕಾಸ್ಟ್ಯೂಮ್ ಹಾಕೋದ್ರಲ್ಲಿ, ಹೊಸ ಹೊಸ ಟ್ರೆಂಡ್ ಸೃಷ್ಟಿ ಮಾಡೋದ್ರಲ್ಲಿ ನಿಸ್ಸೀಮರು. ಹೀಗೂ ಫ್ಯಾಷನ್ ಮಾಡಬಹುದು ಎಂದು ಕೆಲವೊಮ್ಮೆ ತೋರಿಸಿಕೊಡುತ್ತಾರೆ.
ದೀಪಿಕಾ ರಿಪೋರ್ಟ್ ಕಾರ್ಡ್ ರಿವೀಲ್; ರಿಮಾರ್ಕ್ ಗೆ ತಮಾಷೆ ಮಾಡಿದ ರಣವೀರ್!
ಇತ್ತೀಚಿಗೆ ಡಬ್ಬಿಂಗ್ ಗಾಗಿ ಮುಂಬೈಗೆ ಭೇಟಿ ನೀಡಿದಾಗ ತಮಾಷೆಯಾದ ಘಟನೆಯೊಂದು ನಡೆದಿದೆ. ರಣವೀರ್ ಸಿಂಗ್ ರನ್ನು ನೋಡಿದ ಕೂಡಲೇ ತಂದೆ- ಮಗಳು ಸೆಲ್ಫಿ ತೆಗೆದುಕೊಳ್ಳಲು ಕಾಯುತ್ತಿದ್ದರು. ರಣವೀರ್ ಮಗುವಿನ ಬಳಿ ಬಂದು ಬೆನ್ನು ತಟ್ಟುತ್ತಾರೆ. ರಣವೀರ್ ವೇಷವನ್ನು ನೋಡಿ ಮಗು ಅಳುವುದಕ್ಕೆ ಶುರು ಮಾಡುತ್ತದೆ. ಕೆಂಪು ಬಣ್ಣದ ಶರ್ಟ್ ಹಾಕಿಕೊಂಡು ದೊಡ್ಡ ಕನ್ನಡಕವನ್ನು ಹಾಕಿಕೊಂಡು ಬಂದಿದ್ದರು. ಪಾಪ ಮಗುವಿಗೇನು ಗೊತ್ತಾಗುತ್ತದೆ? ಅದು ಫ್ಯಾಷನ್ ಎಂದು. ಕೆಂಪು ಬಣ್ಣವನ್ನು ನೋಡಿ ಮಗು ಅಳಲು ಶುರು ಮಾಡಿದೆ.
ನೆಟ್ ಫ್ಲಿಕ್ಸ್ ನ ಸೂಪರ್ ಹಿಟ್ ಸ್ಪಾನಿಶ್ ಸೀರೀಸ್ ಮನಿ ಹೀಸ್ಟ್ ನಿಂದ ಇನ್ಸ್ಪೈರ್ ಆಗಿ ರಣವೀರ್ ಅದನ್ನು ಕಾಪಿ ಮಾಡಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ರಣವೀರ್ ಸಿಂಗ್ IIFA ಅವಾರ್ಡ್ ಕಾರ್ಯಕ್ರಮದಲ್ಲಿ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸದ್ಯ '83' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಣವೀರ್ ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.