ಸುಶಾಂತ್ ಆತ್ಮಹತ್ಯೆ: ಕರಣ್, ಸಲ್ಮಾನ್ ಖಾನ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ

By Suvarna News  |  First Published Jul 10, 2020, 12:57 PM IST

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಲ್ಮಾನ್‌ ಖಾನ್ ಹಾಗೂ ಕರಣ್ ಜೋಹರ್ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಬಿಹಾರ ಹೈಕೋರ್ಟ್ ವಜಾಗೊಳಿಸಿದೆ.


ಸ್ಥಳೀಯ ವಕೀಲ ಸುಧೀರ್ ಕುಮಾರ್ ಈ ಸಂಬಂಧ ಅರ್ಜಿ ಸಲ್ಲಿಸಿ ಸುಶಾಂತ್ ಆತ್ಮಹತ್ಯೆಗೆ ಪ್ರೇರೇಪಿಸಿದ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಹಾಗೂ ಕರಣ್ ಜೋಹರ್ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಕೇಳಿಕೊಂಡಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಮುಜಾಫರ್ಪುರದ ಮುಖ್ಯ ಮ್ಯಾಜಿಸ್ಟ್ರೇಟ್ ಮುಕೇಶ್ ಕುಮಾರ್ ಅರ್ಜಿ ವಜಾಗೊಳಿಸಿದ್ದು, ಇದು ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದಿದ್ದಾರೆ.

Tap to resize

Latest Videos

ಯಾರೊಂದಿಗೂ ಮಾತನಾಡುವುದಿಲ್ಲ ಎಂದ ಕರಣ್‌ ಜೋಹಾರ್‌ ಈಗ ರಣ್ಬೀರ್ ಕಪೂರ್ ಪಾರ್ಟಿಯಲ್ಲಿ ಪ್ರತ್ಯಕ್ಷ !

ಸುಶಾಂತ್ ಆತ್ಮಹತ್ಯೆಯ ಮೂರು ದಿನಗಳ ನಂತರ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ನಟಿ ಕಂಗನಾ ರಣಾವತ್ ಅವರನ್ನು ನಮೂದಿಸಲಾಗಿತ್ತು. ಆತ್ಮಹತ್ಯೆ ನಡೆದ ಕೆಲವೇ ದಿನಗಳಲ್ಲಿ ಕಂಗನಾ ಬಾಲಿವುಡ್ ನೆಪೊಟಿಸಂನ್ನು ಟೀಕಿಸಿ ಸರಣಿ ವಿಡಿಯೋ ಪೋಸ್ಟ್ ಮಾಡಿದ್ದರು.

ಸುಶಾಂತ್ ಸಾವಿನ ನಂತರ ಕರಣ್, ಆಲಿಯಾ, ಸೋನಂಗೆ ಎಂಥಾ ದುಸ್ಥಿತಿ ಬಂತು!

ನಾನು ಈ ತೀರ್ಪನ್ನು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇನೆ. ಬಿಹಾರ ಸುಶಾಂತ್ ಸಾವಿನ ನೋವಿನಲ್ಲಿದೆ. ಯುವ ನಟನನ್ನು ಆತ್ಮಹತ್ಯೆಗೆ ಪ್ರೇರೇಪಿಸಿದವರನ್ನು ಶಿಕ್ಷಿಸಲು ನಾವು ಕೆಲಸ ಮಾಡಬೇಕು ಎಂದು ವಕೀಲ ತಿಳಿಸಿದ್ದಾರೆ.

click me!