
ಬಿಗ್ ಬಾಸ್ ಪ್ರೇಮಿಗಳೇ.. ಕುಳಿತಲ್ಲಿಂದ ಎದ್ದು ನಿಂತು ಶಿಳ್ಳೆ ಹೊಡೆಯಲು ರೆಡಿಯಾಗಿ! ಇತಿಹಾಸದಲ್ಲೇ ಮೊದಲ ಬಾರಿಗೆ ದಕ್ಷಿಣ ಭಾರತದ ಕಿರುತೆರೆಯ ಅತಿದೊಡ್ಡ 'ರಿಯಾಲಿಟಿ ಹಬ್ಬ' ಶುರುವಾಗುತ್ತಿದೆ. ಅಷ್ಟಕ್ಕೂ ಸೋಷಿಯಲ್ ಮೀಡಿಯಾದಲ್ಲಿ ಈಗ ಯಾಕೆ ಇಷ್ಟೊಂದು ಸಂಚಲನ? ಅದಕ್ಕೆ ಕಾರಣ 'ಬಿಗ್ ಬಾಸ್ ಸೌತ್ ಕ್ರಾಸ್‌ಓವರ್' (Bigg Boss South Crossover)!
ಹೌದು, ನೀವು ಕೇಳುತ್ತಿರುವುದು, ಓದುತ್ತಿರುವುದು ನಿಜ. ಕನ್ನಡದ ಹೆಮ್ಮೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಮಲಯಾಳಂನ ಕಂಪ್ಲೀಟ್ ಆಕ್ಟರ್ ಮೋಹನ್ ಲಾಲ್, ತೆಲುಗಿನ ಮನ್ಮಥ ನಾಗಾರ್ಜುನ ಮತ್ತು ತಮಿಳಿನ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಇದೇ ಮೊದಲ ಬಾರಿಗೆ ಒಂದೇ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಜಿಯೋ ಸ್ಟಾರ್ (JioStar) ಬಿಡುಗಡೆ ಮಾಡಿರುವ ಈ ಸ್ಪೆಷಲ್ ಪ್ರೋಮೋ ಈಗ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದೆ!
ಈ ಪ್ರೋಮೋ ಬರೀ ಆಕ್ಷನ್ ಅಲ್ಲ, ಇದರಲ್ಲಿ ಫುಲ್ ಎಂಟರ್ಟೈನ್ಮೆಂಟ್ ಇದೆ. ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ವಿಭಿನ್ನ ರುಚಿಯಾದ ಆಹಾರದ (Food Culture) ಸುತ್ತ ಈ ಪ್ರೋಮೋ ಸಾಗುತ್ತದೆ. ನಮ್ಮ ಸುದೀಪ್, ಮೋಹನ್ ಲಾಲ್, ನಾಗಾರ್ಜುನ ಮತ್ತು ಸೇತುಪತಿ ಒಬ್ಬರ ರಾಜ್ಯದ ಖಾದ್ಯವನ್ನು ಇನ್ನೊಬ್ಬರು ಬದಲಾಯಿಸಿಕೊಂಡು ಮಾಡುವ ಫನ್ನಿ ಕಾನ್ವರ್ಸೇಷನ್ ನೋಡಲು ಎರಡು ಕಣ್ಣು ಸಾಲದು. ಸ್ಟಾರ್‌ಗಳ ನಡುವಿನ ಈ ಜುಗಲ್‌ಬಂದಿ ಬಿಗ್ ಬಾಸ್ ಅಖಾಡಕ್ಕೆ ರಂಗು ತಂದಿದೆ.
ಇನ್ನೊಂದು ಬಿಗ್ ನ್ಯೂಸ್ ಅಂದರೆ, ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಎಲ್ಲಾ ನಾಲ್ಕು ಭಾಷೆಗಳ (ಕನ್ನಡ, ತಮಿಳು, ತೆಲುಗು, ಮಲಯಾಳಂ) ಬಿಗ್ ಬಾಸ್ ಸೀಸನ್‌ಗಳು ಒಂದೇ ದಿನ, ಅಂದರೆ 2026ರ ಸೆಪ್ಟೆಂಬರ್ 6ರಂದು ಅದ್ದೂರಿಯಾಗಿ ಲಾಂಚ್ ಆಗಲಿವೆ!
ಕೇವಲ ದಕ್ಷಿಣ ಅಷ್ಟೇ ಅಲ್ಲ, ಬಾಲಿವುಡ್ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್ ಬಾಸ್ ಸೀಸನ್ 20 ಕೂಡ ಅದೇ ದಿನ ಶುರುವಾಗಲಿದೆ. ಅಂದರೆ ಸೆಪ್ಟೆಂಬರ್ 6 ರಂದು ಇಡೀ ಭಾರತವೇ ಬಿಗ್ ಬಾಸ್ ಮಯವಾಗಲಿದೆ!
ಈ ಬಾರಿ ನಿಮ್ಮ ನೆಚ್ಚಿನ ಶೋಗಳು ಜಿಯೋ ಸ್ಟಾರ್ ಟಿವಿ ಚಾನೆಲ್‌ಗಳಲ್ಲಿ ಮತ್ತು ಜಿಯೋ ಹಾಟ್‌ಸ್ಟಾರ್ (JioHotstar) ಒಟಿಪಿಯಲ್ಲಿ ಬಿತ್ತರವಾಗಲಿವೆ. ಈ ಬಗ್ಗೆ ಮಾತನಾಡಿರುವ ಜಿಯೋ ಸ್ಟಾರ್ ಸೌತ್ ಎಂಟರ್ಟೈನ್ಮೆಂಟ್ ಹೆಡ್ ಕೃಷ್ಣನ್ ಕುಟ್ಟಿ, ಈ ನಾಲ್ವರು ಸ್ಟಾರ್‌ಗಳಿಗೆ ತಮ್ಮದೇ ಆದ ಬೃಹತ್ ಫ್ಯಾನ್ ಬೇಸ್ ಇದೆ. ಇವರನ್ನು ಒಂದೇ ಸ್ಕ್ರೀನ್ ಮೇಲೆ ತರುವುದು ನಮಗೆ ಹೆಮ್ಮೆಯ ವಿಚಾರ ಎಂದಿದ್ದಾರೆ. ಸೋ.. ಬಿಗ್ ಬಾಸ್ ಅಭಿಮಾನಿಗಳೇ, ಸೀಟ್ ಬೆಲ್ಟ್ ಹಾಕಿಕೊಳ್ಳಿ! ಮನೆಯಲ್ಲಿ ಯಾರು ಕಿತ್ತಾಡ್ತಾರೆ? ಯಾರು ಸೈಲೆಂಟ್ ಇರ್ತಾರೆ? ಕಿಚ್ಚ ಸುದೀಪ್ ಯಾರಿಗೆ ಕ್ಲಾಸ್ ತಗೋತಾರೆ? ಇದೆಲ್ಲವನ್ನೂ ನೋಡಲು ಇನ್ನು ಕೆಲವೇ ದಿನಗಳು ಬಾಕಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.