6 ರೂ ಚಿತ್ರಾನ್ನದಲ್ಲಿ ಗೋಲ್ಡನ್ ಸ್ಟಾರ್‌ ಗಣೇಶ್‌ಗೆ ಸಿಕ್ಕ ನಿಧಿ..ರಿಯಲ್ ಸ್ಟೋರಿ

Published : Dec 09, 2018, 11:32 PM ISTUpdated : Dec 09, 2018, 11:38 PM IST
6 ರೂ ಚಿತ್ರಾನ್ನದಲ್ಲಿ ಗೋಲ್ಡನ್ ಸ್ಟಾರ್‌ ಗಣೇಶ್‌ಗೆ ಸಿಕ್ಕ ನಿಧಿ..ರಿಯಲ್ ಸ್ಟೋರಿ

ಸಾರಾಂಶ

ಕಳೆದ ವಾರ ಮನೆಯಿಂದ ಹೊರಬಿದ್ದಿದ್ದ ಆನಂದ್ ಮತ್ತು ಈ ವಾರ ಮನೆಯಿಂದ ಹೊರಬಂದ ಸೋನು ಪಾಟೀಲ್ ಇಬ್ಬರನ್ನು ಸುದೀಪ್ ಮಾತನಾಡಿಸಿ ಅವರ ಮನೆಯೊಳಗಿನ ಜರ್ನಿಯ ಬಗ್ಗೆ ಮಾತನಾಡಿ ಕಳುಹಿಸಿದರು.  ಆದರೆ ಇದೆಲ್ಲದಕ್ಕಿಂತ ಮಜಾ ಕೊಟ್ಟಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಎಂಟ್ರಿ..ಗಣೇಶ್ ಹಂಚಿಕೊಂಡ ಕೆಲ ನೆನಪುಗಳು ಗತಕಾಲವನ್ನು ನೆನಪಿಸಿದವು.  

ನಿಮಗೆ ಪಂಚತಾರಾ ಹೊಟೇಲ್‌ನ ಬಿರಿಯಾನಿ ಇಷ್ಟವೋ, ಬೀದಿ ಬದಿಯ ಚಿತ್ರಾನ್ನವೋ ಎಂದು ಸುದೀಪ್ ಗಣೇಶ್ ಅವರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಗಣೇಶ್ ನನಗೆ ಬೀದಿ ಬದಿಯ ಚಿತ್ರಾನ್ನವೇ ಬೆಸ್ಟ್ ಎಂದರು. ಅಲ್ಲದೇ ಅದಕ್ಕೆ ಕಾರಣವನ್ನು ಹೇಳಿದರು.

ಕಿಸೆಯಲ್ಲಿ ಕೇವಲ 6 ರೂ. ಇದ್ದಾಗ ನಾನು ಮತ್ತು ನನ್ನ ಸ್ನೇಹಿತರು ಹಾಫ್ ಚಿತ್ರಾನ್ನ ತಿನ್ನುವ ತೀರ್ಮಾನ ಮಾಡಿ ಬೀದಿ ಬದಿ ಚಿತ್ರಾನ್ನ ಪಾರ್ಸಲ್ ತೆಗೆದುಕೊಂಡು ಬಂದಿದ್ದೇವು. ಅದನ್ನು ಓಪನ್ ಮಾಡಿ ಹಂಚಿಕೊಂಡು ತಿನ್ನಬೇಕಿದ್ದರೆ ಚಿತ್ರಾನ್ನದಲ್ಲಿ 5 ರೂ. ನಾಣ್ಯವೊಂದು ಸಿಕ್ಕಿತ್ತು. ಅದನ್ನು ಊಟದ ನಂತರದ ‘ಕೆಲಸಕ್ಕೆ’ ಬಳಸಿಕೊಂಡೆವು ಎಂದು ಗಣೇಶ್ ಉತ್ತರಿಸಿದರು.

‘ಮುಂಗಾರು ಮಳೆಗೆ’ ಭಟ್ಟರು ಮೊದಲು ಇಟ್ಟ ಹೆಸರೇನಾಗಿತ್ತು? ಗಣೇಶ್ ಬಿಚ್ಚಿಟ್ಟ ಸತ್ಯ

ಈಗಲೂ ಚಿತ್ರಾನ್ನ ನೋಡಿದರೆ ಮತ್ತೆ 5 ರೂ. ಕಾಯಿನ್ ಸಿಗಬಹುದೋ? ಎಂದು ಅನಿಸುತ್ತದೆ. ಹಾಗಾಗಿ ಅಂದಿನ ಕಷ್ಟದ ದಿನಗಳನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ತಮ್ಮ ಸಿನಿಮಾ ಜಗತ್ತಿನ ನೆನಪುಗಳನ್ನು ಹಂಚಿಕೊಂಡರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ತೂಗುದೀಪ The Devil Movie ವಿಮರ್ಶೆ ಮಾಡೋ ಹಾಗಿಲ್ಲ, ಕಾಮೆಂಟ್ಸ್‌ ಮಾಡಂಗಿಲ್ಲ: ಕೋರ್ಟ್‌ನಿಂದ ತಡೆ
The Devil Movie Review: ದರ್ಶನ್‌ ತೂಗುದೀಪ 'ಡೆವಿಲ್‌' ಹೇಗಿದೆ? ಡೆವಿಲ್‌ನಲ್ಲೂ ಗಿಲ್ಲಿ ನಟನ ಭರ್ಜರಿ ಕಾಮಿಡಿ