'ಮುಂಗಾರು ಮಳೆ' ಸುದೀಪ್ ಮಾಡಿದ್ದರೆ ಏನಾಗುತ್ತಿತ್ತು? ಕಿಚ್ಚ ಹೇಳಿದ ಉತ್ತರ

Published : Dec 09, 2018, 11:08 PM IST
'ಮುಂಗಾರು ಮಳೆ' ಸುದೀಪ್ ಮಾಡಿದ್ದರೆ ಏನಾಗುತ್ತಿತ್ತು? ಕಿಚ್ಚ ಹೇಳಿದ ಉತ್ತರ

ಸಾರಾಂಶ

ಕಳೆದ ವಾರ ಮನೆಯಿಂದ ಹೊರಬಿದ್ದಿದ್ದ ಆನಂದ್ ಮತ್ತು ಈ ವಾರ ಮನೆಯಿಂದ ಹೊರಬಂದ ಸೋನು ಪಾಟೀಲ್ ಇಬ್ಬರನ್ನು ಸುದೀಪ್ ಮಾತನಾಡಿಸಿ ಅವರ ಮನೆಯೊಳಗಿನ ಜರ್ರನಿಯ ಬಗ್ಗೆ ಮಾತನಾಡಿ ಕಳುಹಿಸಿದರು.  ಆದರೆ ಇದೆಲ್ಲದಕ್ಕಿಂತ ಮಜಾ ಕೊಟ್ಟಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಎಂಟ್ರಿ..

ಮನೆಯ ಕನ್ಫೆಶನ್ ರೂಂ ನಲ್ಲಿ ಕುಳಿತ ಗಣೇಶ್ ಬಿಗ್ ಬಾಸ್ ಧ್ವನಿಯಲ್ಲಿ ಆದೇಶ ನೀಡುತ್ತ ಹೋದರು. ಮನೆ ಮಂದಿ ಬಿಗ್ ಬಾಸ್ ಕಡೆಯಿಂದಲೇ ಆದೇಶ ಬರುತ್ತಿದೆ ಎಂದು ಭಾವಿಸಿದರು. ಇದಾದ ಮೇಲೆ ಗಣೇಶ್ ಬಿಗ್‌ಬಾಸ್ ವೇದಿಕೆಗೆ ಬಂದರು.

ಗಣೇಶ್ ಮತ್ತು ಸುದೀಪ್ ಮಾತನಾಡುತ್ತ ನಮ್ಮ ನಮ್ಮ ಸಿನಿಮಾ ಎಕ್ಸ್ ಚೆಂಜ್ ಮಾಡಿಕೊಳ್ಳುವುದಾದರೆ ಯಾವುದನ್ನು ಮಾಡಿಕೊಳ್ಳಬಹುದು ಎಂಬ ಮಾತು ಬಂತು. ಇದಕ್ಕೆ ಗಣೇಶ್ ನಾನು ನಿಮ್ಮ ಸ್ವಾತಿಮುತ್ತು ಮತ್ತು ನಲ್ಲ ಸಿನಿಮಾ ಮಾಡಬಹುದಿತ್ತು ಎಂದರು.ಇದಾದ ಮೇಲೆ ಗಣೇಶ್ ಗೆ ಸುದೀಪ್ ತಮಗೆ ಒಂದು ಸಿನಿಮಾ ಸೂಚಿಸಲು ಕೇಳಿದರು.

ಆದರೆ ಗಣೇಶ್ ಹೇಳಲಿಲ್ಲ ಅಂತಿಮವಾಗಿ ಒತ್ತಾಯ ಮಾಡಿದ ಮೇಲೆ ಮುಂಗಾರು ಮಳೆಯನ್ನೇ ಮಾಡಬಹುದಿತ್ತು ಎಂದರು. ಇದಕ್ಕೆ ಸುದೀಪ್ ನಾನು ಮುಂಗಾರು ಮಳೆ ಮಾಡಿದಿದ್ದರೆ ಅಟ್ಟರ್ ಫ್ಲಾಪ್ ಆಗಿರುತ್ತಿತ್ತು.. ಆ ಪಾತ್ರಕ್ಕೆ ನಿಮಗಿಂತ ಬೇರೆಯವರಿಂದ ಜೀವ ತುಂಬಲು ಅಸಾಧ್ಯ.. ಸಿನಿಮಾ ನನಗೆ ಇಷ್ಟವಾಯಿತು.. ಆದರೆ ಕ್ಲೈಮಾಕ್ಸ್ ಹಿಡಿಸಲಿಲ್ಲ ಎಂದು ಹೇಳಿದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಟೈಮ್‌ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ಚಕ್ರಬಡ್ಡಿ ಸಮೇತ ವಾಪಸ್‌ ಕೊಟ್ಟ ಗಿಲ್ಲಿ ನಟ
ಪಡೆಯಪ್ಪ 'ನೀಲಾಂಬರಿ'ಗೆ ಮೊದಲ ಆಯ್ಕೆ ಐಶ್ವರ್ಯಾ ರೈ; ಶ್ರೀದೇವಿ-ಮಾಧುರಿಯನ್ನೂ ರಮ್ಯಾ ಕೃಷ್ಣನ್ ಬದಿಗೆ ಸರಿಸಿದ್ದು ಹೇಗೆ?