
ನಾಣ್ಯ ಸಂಗ್ರಹ ಮಾಡುವ ಟಾಸ್ಕ್ ರೋಚಕವಾಗಿತ್ತು. ಅಂತಿಮವಾಗಿ ವಿಶೇಷ ನಾಣ್ಯ ಹೊಂದಿದ್ದ ಆ್ಯಂಡಿ ಬೇರೆಯವರ ಅಂಕ ತಮ್ಮದಾಗಿಸಿಕೊಂಡು ಮೊದಲನೆಯವರಾಗಿ ಹೊರಹೊಮ್ಮಿದರು. ಇನ್ನೊಂದು ಕಡೆ ಅತಿ ಕಡಿಮೆ ಅಂಕ ದಾಖಲಿಸಿದ ಸಲಿಂಗಿ ಅದಂ ಮತ್ತು ಮನೆಯವರಿಂದ ಕಳಪೆ ಪ್ರದರ್ಶನದ ಹಣೆಪಟ್ಟಿ ಗಳಿಸಿಕೊಂಡ ನಯನಾ ಕಾರಾಗೃಹ ಸೇರಿದರು. ನ್ಯಾಣ್ಯ ಸಂಗ್ರಹ ಟಾಸ್ಕ್ ನಲ್ಲಿ ಗೆದ್ದು ಆ್ಯಂಡಿ, ಸ್ನೇಹ ಮತ್ತು ಬಾಡಿ ಬಿಲ್ಡರ್ ರವಿ ಈ ವಾರದ ಕ್ಯಾಪ್ಟನ್ ಆಗಲು ಅರ್ಹತೆ ಪಡೆದುಕೊಂಡರು.
ಬಿಗ್‌ಬಾಸ್‌ಗೆ ತುಳಸಿ ಪ್ರಸಾದ್ ಬಾರದಿರಲು ಅಸಲಿ ಕಾರಣ!
ಅಡುಗೆ ವಿಚಾರದಲ್ಲಿ ಜಟಾಪಟಿ: ಮಾಡಿದ್ದ ಅಡುಗೆ ಖಾರ ಖಾರ ವಾಗಿತ್ತು ಎಂಬ ಮಾತು ಮನೆಯಲ್ಲಿ ಕೇಳಿಬಂತು. ಅಡುಗೆ ಜವಾಬ್ದಾರಿ ವಹಿಸಿಕೊಂಡಿದ್ದ ರಶ್ಮಿ ಮತ್ತು ಜಯಶ್ರೀ ಬೇಸರಕ್ಕೆ ಇದು ಕಾರಣವಾಯಿತು. ಕವಿತಾ ಗೌಡ ರನ್ನು ಟಾರ್ಗೆಟ್ ಮಾಡಿದ ಇಬ್ಬರೂ ಕವಿತಾ ಬಳಿ ನೀವೆ ಅಡುಗೆ ಮಾಡಿ ಎಂದು ಹೇಳಿದರು. ಈ ವಿಚಾರ ತುಂಬಾ ಚರ್ಚೆಯಾಯಿತು.
ಇನ್ನೂ ಮನೆಯ ಕ್ಯಾಪ್ಟನ್ ಆಯ್ಕೆ ಆಗಿಲ್ಲ. 11 ಜನ ನಾಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಸೀಸನ್ 6 ರ ಮನೆಯಲ್ಲಿ ಮೊದಲ ಲಕ್ಸುರಿ ಟಾಸ್ಕ್ ಮುಕ್ತಾಯವಾಗಿದೆ. ಹಲವಾರು ಟ್ವಿಸ್ಟ್ ಗಳನ್ನು ಇಟ್ಟಿದ್ದ ಬಿಗ್ ಬಾಸ್ ಮೇಲೆಯೇ ಚರ್ಚೆ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.