#METoo ಕಹಿ ಘಟನೆ ನನ್ನ ಜೀವನದಲ್ಲಿ ನಡೆದಿಲ್ಲ : ಜಯಮಾಲಾ

By Web DeskFirst Published Oct 25, 2018, 4:36 PM IST
Highlights

ಮೀ ಟೂ ಹೆಣ್ಣನ್ನು ಹರಾಜು ಹಾಕುವ ಅಭಿಯಾನ ಆಗದಿರಲಿ.  ಹೆಣ್ಣು ಮುಕ್ತವಾಗಿ ಬಂದಾಗ ಬೆಂಬಲ ನೀಡಬೇಕು.  ಹೆಣ್ಣಿಗೆ ರಕ್ಷಣೆ ಕೊಡುವ ನೆಪದಲ್ಲಿ ಗಂಡಸನ್ನು ದೂಷಿಸುವುದು ತಪ್ಪು.  ಹೆಣ್ಣಿನ ಚಿತ್ರಹಿಂಸೆಗೆ ದೌರ್ಜನ್ಯಕ್ಕೆ ಮಿಟೂ ಬಲ ತಂದುಕೊಟ್ಟಿದೆ ಎಂದು ಸಚಿವೆ ಜಯಮಾಲಾ ಹೇಳಿದ್ದಾರೆ. 

ಉಡುಪಿ (ಅ. 25):  ಮಿ ಟೂ ಅಭಿಯಾನದ ಬಗ್ಗೆ ನಟಿ, ರಾಜಕಾರಣಿ ಜಯಮಾಲಾ ಪ್ರತಿಕ್ರಿಯೆ ನೀಡಿದ್ದಾರೆ. 

ಮೀ ಟೂ ಹೆಣ್ಣನ್ನು ಹರಾಜು ಹಾಕುವ ಅಭಿಯಾನ ಆಗದಿರಲಿ.  ಹೆಣ್ಣು ಮುಕ್ತವಾಗಿ ಬಂದಾಗ ಬೆಂಬಲ ನೀಡಬೇಕು.  ಹೆಣ್ಣಿಗೆ ರಕ್ಷಣೆ ಕೊಡುವ ನೆಪದಲ್ಲಿ ಗಂಡಸನ್ನು ದೂಷಿಸುವುದು ತಪ್ಪು.  ಹೆಣ್ಣಿನ ಚಿತ್ರಹಿಂಸೆಗೆ ದೌರ್ಜನ್ಯಕ್ಕೆ ಮಿಟೂ ಬಲ ತಂದುಕೊಟ್ಟಿದೆ ಎಂದು ಹೇಳಿದ್ದಾರೆ. 

"

ಡಾ. ರಾಜ್ ಕುಮಾರ್ ಕಾಲದಲ್ಲಿ ಬೆಳೆದವರು ನಾವು.  ನಮ್ಮ ಕಾಲದಲ್ಲಿ ಚಿತ್ರರಂಗ ಸುವರ್ಣ ಯುಗವಾಗಿತ್ತು.  ಇಂತಹ ದಿನಗಳನ್ನೇ ನಾನು ನೋಡಿಲ್ಲ.  46 ವರ್ಷದಲ್ಲಿ 75 ಸಿನೆಮಾ ಮಾಡಿದ್ದೇನೆ.  ಒಂದೇ ಒಂದು ಕಹಿ ಘಟನೆ ನನ್ನ ಜೀವನದಲ್ಲಿ ನಡೆದಿಲ್ಲ ಎಂದಿದ್ದಾರೆ. 

ಈಗಿನ ಚಿತ್ರರಂಗದ ಬಗ್ಗೆ ನನಗೆ ಗೊತ್ತಿಲ್ಲ.  ನಟ ಅರ್ಜುನ್ ಸರ್ಜಾ ಸರಳ ಸಜ್ಜನ ಹುಡುಗ.  ಸರ್ಜಾ ತಂದೆಯ ಜೊತೆಯೂ ಅಭಿನಯಿಸಿದ್ದೆ.  ವಾಣಿಜ್ಯ ಮಂಡಳಿ ಈ ಬಗ್ಗೆ ತೀರ್ಮಾನಕ್ಕೆ ಬರಲಿದೆ ಎಂದು ಸಚಿವೆ ಜಯಮಾಲಾ ಹೇಳಿಕೆ ನೀಡಿದ್ದಾರೆ. 

click me!