ಬಿಗ್‌ಬಾಸ್‌ಗೆ ತುಳಸಿ ಪ್ರಸಾದ್ ಬಾರದಿರಲು ಅಸಲಿ ಕಾರಣ!

Published : Dec 11, 2019, 07:05 PM IST
ಬಿಗ್‌ಬಾಸ್‌ಗೆ ತುಳಸಿ ಪ್ರಸಾದ್ ಬಾರದಿರಲು ಅಸಲಿ ಕಾರಣ!

ಸಾರಾಂಶ

ಬಿಗ್ ಬಾಸ್ ಕನ್ನಡದ ಮನೆ ತೆರೆದುಕೊಂಡಿದೆ. ಒಟ್ಟು ಹದಿನೆಂಟು ಸ್ಪರ್ಧಿಗಳು ಮನೆ ಪ್ರವೇಶ ಮಾಡಿದ್ದಾರೆ. ಆದರೆ ಈ ಬಾರಿ ಬಿಗ್ ಬಾಸ್ ಮನೆ ಸೇರಲಿದ್ದಾರೆ ಎಂದು ಬಹುತೇಕರು ಭಾವಿಸಿದ್ದ ತುಳಸಿ ಪ್ರಸಾದ್‌ ಗೆ ಎಂಟ್ರಿ ಸಿಕ್ಕಿಲ್ಲ.. ಕಾರಣ?

ವಿಚಿತ್ರ ಡಬ್ ಸ್ಮಾಶ್ ಗಳ ಮೂಲಕ ಬೇಡದ ರೀತಿಯ ಜನಪ್ರಿಯತೆ ಪಡೆದುಕೊಂಡಿದ್ದ ಡಬ್ ಸ್ಮಾಶ್ ಸ್ಟಾರ್ ತುಳಸಿ ಪ್ರಸಾದ್ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿಲ್ಲ. ಈ ಹಿಂದೆ ಹುಚ್ಚ ವೆಂಕಟ್ ಮತ್ತು ಪ್ರಥಮ್ ನಂಥವರನ್ನು ಸೇರಿಸಿಕೊಂಡಿದ್ದ ಮನೆಗೆ ಈ ಬಾರಿ ತುಳಸಿ ಪ್ರಸಾದ್ ಸೇರಿಲ್ಲ.

ಆದರೆ ಈ ಬಾರಿ ಬಿಗ್ ಬಾಸ್ ಹೊಸ ಸಾಹಸ ಮಾಡಿದ್ದು ಇದೇ ಮೊದಲ ಸಾರಿಗೆ ಗೇ ಒಬ್ಬರು ಪ್ರವೇಶ ಮಾಡಿದ್ದಾರೆ. 377 ನೇ ನಿಯಮಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಮಾನ ತೆಗೆದುಕೊಂಡ ಮೇಲೆ ಬಿಗ್ ಬಾಸ್ ಕನ್ನಡ ಸಹ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ.

ಸೋಶಿಯಲ್ ಮೀಡಿಯಾದಲ್ಲಿ ತುಳಸಿ ಪ್ರಸಾದನ ಹಸ್ತಮೈಥುನದ ವಿಕೃತಿ

ಆ್ಯಡಂ ಪಾಶಾ ಎನ್ನುವ 35 ವರ್ಷದ ಗೇ ಪ್ರವೇಶ ಮಾಡಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಹೊರದೇಶದಲ್ಲಿ ಬೆಳೆದ ಆದರೆ ನೃತ್ಯವನ್ನೇ ತಮ್ಮ ಉಸಿರಾಗಿರಿಸಿಕೊಂಡಿರುವ ಪಾಶಾ ಪ್ರವೇಶ ಮಾಡಿದ್ದಾರೆ.  ಇನ್ನುಳಿದಂತೆ ಸೆಮಿ ಸೆಲಬ್ರಿಟಿಗಳ ಸಂಖ್ಯೆ ಜಾಸ್ತಿ ಇದೆ.  ಹಾಗಾದರೆ ಯಾವ ಕಾರಣಕ್ಕೆ ತುಳಸಿ ಪ್ರಸಾದ್ ಗೆ ಅವರಕಾಶ ಸಿಕ್ಕಿಲ್ಲ...

ಡಬ್ ಸ್ಮಾಶ್ ಸ್ಟಾರ್ ಹಾಗೆ ಮಾಡ್ಕೊಳ್ಳಲು ಕಾರಣವಾದಾಕೆ ಯಾರು? ಫೋನ್ ಕಾಲ್ ಬಿಚ್ಚಿಟ್ಟ ಅಸಲಿಯತ್ತು!

ತುಳಸಿ ಪ್ರಸಾದ್ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂದಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಒಂದು ವೇಳೆ ಅವಕಾಶ ಕೊಟ್ಟರೆ ಅದು ಫ್ಯಾಮಿಲಿ ಶೋ ಆಗಿ ಉಳಿಯುವುದಿಲ್ಲ ಎಂಬ ಆತಂಕವನ್ನು ಜಾಲತಾಣಿಗರು ವ್ಯಕ್ತಪಡಿಸಿದ್ದರು. ಹಾಗಾಗಿ ಹೊಸ ರಿಸ್ಕ್ ತೆಗೆದುಕೊಳ್ಳದಿರಲು ಬಿಗ್ ಬಾಸ್ ಮುಂದಾಗಿದ್ದು ಕಂಟೆಸ್ಟೆಂಟ್ ಗಳ ಪಟ್ಟಿಯಲ್ಲಿ ತುಳಸಿ ಪ್ರಸಾದ್ ಹೆಸರು ಅಂತಿಮ ಆಗಿಲ್ಲ.

ಬಿಗ್ ಬಾಸ್ ಕನ್ನಡ ಮನೆ ಪ್ರವೇಶ ಮಾಡಿದವರು ಯಾರ್ಯಾರು?

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!