ಮನೆ ಬಿಡಲು ಸಿದ್ಧವಾದ ಅಕ್ಷತಾ, ಗುಂಪುಗಳ ಒಳಜಗಳ ಇನ್ಯಾರಿಗೋ ಲಾಭ

Published : Dec 10, 2018, 10:29 PM ISTUpdated : Dec 10, 2018, 10:40 PM IST
ಮನೆ ಬಿಡಲು ಸಿದ್ಧವಾದ ಅಕ್ಷತಾ, ಗುಂಪುಗಳ ಒಳಜಗಳ ಇನ್ಯಾರಿಗೋ ಲಾಭ

ಸಾರಾಂಶ

ಅರ್ಧ ಶತಕವನ್ನು ಮುಗಿಸಿದ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ನಾಮಿನೇಶನ್ ಪ್ರಕ್ರಿಯೆ ಮುಗಿದಿದೆ. ಸ್ಪರ್ಧಿಗಳು ಎಲ್ಲಿದ್ದಾರೋ ಅಲ್ಲಿಂದಲೇ ನಾಮಿನೇಶನ್ ಮಾಡುವಂತೆ ಬಿಗ್ ಬಾಸ್ ಸೂಚಿಸಿದ್ದರು.

ಮನೆಯಿಂದ ಕಳಿಸಿಬಿಡಿ ಎಂದು ನಾನು ಕನ್ಫೆಶನ್ ರೂಂಗೆ ಹೋಗುವ ತೀರ್ಮಾನ ಮಾಡಿದ್ದೆ. ನಮ್ಮ ಅಮ್ಮ ಕೂಡ ಅದೇ ಮಾತು ಹೇಳಿದ್ದರು ಎಂದು ಅಕ್ಷತಾ ಆ್ಯಂಡಿ ಬಳಿ ಅಳಲು ತೋಡಿಕೊಂಡರು.

ಒಟ್ಟಿನಲ್ಲಿ ರಾಕೇಶ್‌, ಶಶಿ, ಅಕ್ಷತಾ, ಕವಿತಾ, ಜಯಶ್ರೀ, ನಯನಾ, ಧನರಾಜ್‌ ನಾಮಿಮೇಟ್ ಆದರು. ನಂತರ ಉತ್ತಮರು, ಅಧಮರು ಎಂಬುದನ್ನು ನಿರ್ಧರಿಸಲು ಬಿಗ್‌ ಬಾಸ್‌ ತಿಳಿಸಿದ್ದು, ಸ್ಪರ್ಧಿಗಳು ಖುಷಿಯಿಂದಲೇ ಆಡಿದರು.

'ಮುಂಗಾರು ಮಳೆ' ಸುದೀಪ್ ಮಾಡಿದ್ದರೆ ಏನಾಗುತ್ತಿತ್ತು? ಕಿಚ್ಚ ಹೇಳಿದ ಉತ್ತರ

ಈ ಮಧ್ಯೆ ನಾಮಿನೇಶನ್‌ಗೆ ಗುರಿಯಾದವರು ಈಜುಕೋಳದಲ್ಲಿ ಮುಳುಗಿ ಎದ್ದರು. ಇತ್ತ ನಾಮಿನೇಶನ್‌ಗೆ ಗುರಿಯಾದವರು ಈಗ ಆ್ಯಕ್ಟೀವ್‌ ಆಗಿದ್ದಾರೆ ಎಂದು ಆ್ಯಂಡಿ ಟಾಂಗ್ ಕೊಟ್ಟರು. ಒಟ್ಟಿನಲ್ಲಿ ಮನೆಯ ಒಳಗಿನ ಗ್ರೂಪ್‌ಗಳಿಂದ ಅತ್ತಲ್ಲೂ ಇಲ್ಲದ ಇತ್ತಲೂ ಇಲ್ಲದ ಆ್ಯಂಡಿ, ನಯನಾ ಮತ್ತು ಮುರಳಿ ಅವರಿಗೆ ಲಾಭ ಆಗುತ್ತಿರುವುದೆಂತೂ ಸತ್ಯ..

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ
Untold Love Story: ಸ್ಟಾರ್ ನಟನ ಎರಡನೇ ಪತ್ನಿಯ ಲವ್‌ನಲ್ಲಿ ಬಿದ್ದು ಒದ್ದಾಡಿದ್ದ ರಜನಿಕಾಂತ್!