
ಮೊನ್ನೆಯಷ್ಟೆ ‘ಗಾಳಿಪಟ 2’ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು ಭಟ್ಟರು. ಶರಣ್, ಪವನ್ ಕುಮಾರ್, ರಿಷಿ ಚಿತ್ರದ ನಾಯಕರು. ಹಾಗೆ ಚಿತ್ರದಲ್ಲಿ ಐವರು ನಾಯಕಿಯರೂ ಇದ್ದಾರೆ. ಈಗಾಗಲೇ ಶರ್ಮಿಳಾ ಮಾಂಡ್ರೆ, ಸೋನಾಲ್ ಮಾಂತೇರಿಯೋ ಆಯ್ಕೆಯಾಗಿದ್ದು, ಉಳಿದ ಮೂವರು ನಾಯಕಿಯರಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಮೂವರ ಪೈಕಿ ಚೈನಾ ನಟಿಯೊಬ್ಬಳು ಕನ್ನಡದ ‘ಗಾಳಿಪಟ 2’ ಹಾರಿಸಲಿಕ್ಕೆ ಬರಲಿದ್ದಾರೆ ಎಂಬುದು ಸದ್ಯದ ಹಾಟ್ ಟಾಪಿಕ್.
ಟ್ರಾಫಿಕ್ ಪೊಲೀಸ್ ಆದ್ರು ಯೋಗರಾಜ್ ಭಟ್ರು
ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಜತೆಯಾಗಿ ಕತೆ ಮಾಡುತ್ತಿರುವ ಈ ಚಿತ್ರದ್ದು, ಬೇರೆ ಬೇರೆ ಪ್ರದೇಶಗಳಿಂದ ಬಂದ ಮೂವರ ಹುಡುಗರ ಕತೆ. ಈ ಕಾರಣಕ್ಕೆ ಚಿತ್ರದಲ್ಲಿ ನಾಯಕಿಯರ ಜಾಗದಲ್ಲಿ ಒಬ್ಬರು ಅಂತಾರಾಷ್ಟ್ರೀಯ ಮಟ್ಟದ ಮಾಡೆಲ್ ಹಾಗೂ ಮತ್ತೊಬ್ಬರು ಚೈನಾ ನಟಿ ಕೂಡ ಇರಲಿದ್ದಾರೆ. ಸದ್ಯಕ್ಕೆ ಆ ನಟಿ ಯಾರು ಮತ್ತು ಯಾವ ಚಿತ್ರಗಳಲ್ಲಿ ನಟಿಸಿದ್ದಾರೆಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ನಿರ್ದೇಶಕ ಯೋಗರಾಜ್ ಭಟ್ ಅವರು ಚೈನಾ ನಟಿಯನ್ನು ಆಮದು ಮಾಡಿಕೊಳ್ಳುವ ಜಾಗತೀಕರಣ ನೀತಿಗೆ ತಮ್ಮ ‘ಗಾಳಿಪಟ 2’ ಚಿತ್ರವನ್ನು ತೆರೆದಿಟ್ಟಿದ್ದಾರೆ. ಉಳಿದಂತೆ ಚಿತ್ರದಲ್ಲಿ ಹಿರಿಯ ನಟ ಅನಂತ್‌ನಾಗ್, ರಂಗಾಯಣ ರಘು ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಇದೆ. ಬೆಳಗಾವಿ ಮೂಲದ ಮಹೇಶ್ ದಾನಣ್ಣನವರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಮುಂಗಾರು ಮಳೆಯೇ... 12 ವರ್ಷದ ಬಳಿಕವೂ ಏನು ನಿನ್ನ ಲೀಲೆ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.