
ಅಮೃತಧಾರೆ ಸೀರಿಯಲ್ ನೋಡೋ ವೀಕ್ಷಕರ ಕಣ್ಣಿಂದ ಈಗ ಕಣ್ಣೀರು ಧಾರೆ ಹರೀತಿದೆ. ವಿಲನ್ ಸೂಸೈಡ್ ಮಾಡ್ಕೊಂಡಿರೋದಕ್ಕೆ ಜನ ಅಳೋದು ಮೋಸ್ಟ್‌ಲಿ ಸೀರಿಯಲ್ ಇತಿಹಾಸದಲ್ಲಿ ಇದೇ ಮೊದಲಿರಬಹುದು. ಆದರೆ ಜನರಿಗೆ ಭೂಪತಿ ಪಾತ್ರದ ಮೇಲೆ ಒಂದ್ ನಮೂನಿ ಅಟ್ರಾಕ್ಷನ್ ಇತ್ತು. ಆ ಪಾತ್ರ ಬಂದಾಗ ಬರೋ ಬ್ಯೌಗ್ರೌಂಡ್ ಮ್ಯೂಸಿಕ್ ಪಾತ್ರದ ಕ್ರೂರತೆಯನ್ನ ಕಡಿಮೆ ಮಾಡಿತ್ತು ಅನಿಸುತ್ತೆ. ಇರಲಿ, ಈಗ ಸೀರಿಯಲ್‌ನಲ್ಲಿ ವಿಲನ್ ಭೂಪತಿ ಶೂಟ್ ಮಾಡಿಕೊಂಡು ಇಹಲೋಕ ತ್ಯಜಿಸಿದ್ದಾರೆ. ತಾನು ನ್ಯಾಯಯುತವಾಗಿ ಸಂಪಾದಿಸಿರೋ ಆಸ್ತಿ ಎಲ್ಲ ಮಗಳು ಮಲ್ಲಿಗೆ ಹೋಗಬೇಕು ಅಂತ ವಿಲ್ ಬರ್ದಿಟ್ಟಿದ್ದಾರೆ. ಅನ್ಯಾಯದಲ್ಲಿ ಸಂಪಾದಿಸಿದ್ದನ್ನು ಅನಾಥಾಶ್ರಮಕ್ಕೆ ದಾನ ಮಾಡಲು ಹೇಳಿದ್ದಾರೆ. ಒಂದು ಕಾಲದ ಮುಗ್ಧೆ, ಜೈದೇವ್ ಕಾಮವನ್ನೇ ಪ್ರೇಮವೆಂದು ನಂಬಿ ಅವನ ಮಗುವಿಗೆ ತಾಯಾಗುವ ಹಂತದಲ್ಲೇ ಮಗುವನ್ನು ಕಳೆದಕೊಂಡ ನತದೃಷ್ಟ ಹುಡುಗಿ ಇವಳು. ಈಗ ಅಂತೂ ಇವಳ ಗಂಡ ಜೈದೇವ ಇವಳ ಕಣ್ಣೆದುರಿಗೇ ದಿಯಾಗೆ ತಾಳಿ ಕಟ್ಟಿದ್ದಾನೆ.
ಒಬ್ಬ ಹೆಂಡ್ತಿ ಇರುವಾಗ ಇನ್ನೊಬ್ಳನ್ನ ಹೇಗೆ ಕಟ್ಟಿಕೊಂಡ ಅಂತೆಲ್ಲ ಪ್ರಶ್ನೆ ಮಾಡೋ ಹಾಗಿಲ್ಲ. ಈ ಮದುವೆ ಮಾಡಿಸಿದ್ದು ಮಲ್ಲಿಯ ನಿಜವಾದ ತಂದೆ ಭೂಪತಿ. ಆತನಿಗೆ ವಿಷಯ ಗೊತ್ತಾಗುವಾಗ ಹೊತ್ತಾಗಿತ್ತು. ಮಗಳು ಕ್ಷಮಿಸಲ್ಲ ಅಂದಿದ್ದಳು, ಅವಳ ಗಂಡ ಜೈದೇವ ಭೂಪತಿ ಕಣ್ಣೆದುರೇ ಅವನ ಕುತಂತ್ರದಿಂದಲೇ ದಿಯಾಗೆ ತಾಳಿ ಕಟ್ಟಿದ್ದ. ಭೂಪತಿ ದಾರಿ ಕಾಣದೆ ಆಸ್ತಿಯನ್ನು ಮಗಳ ಹೆಸರಿಗೆ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋ ಆಸ್ತಿ ಎಲ್ಲ ಮಲ್ಲಿಗೆ ಬಂದಿದೆ. ಜೈದೇವ ಹಲ್ಲು ಕಿತ್ತ ಹಾವಾಗಿದ್ದಾನೆ. ಮುಂದ? ಮುಂದ ಏನು ಅನ್ನೋದು ಈ ಸೀರಿಯಲ್ ಸ್ಕ್ರಿಪ್ಟ್ ಬರಿಯೋರಿಗೂ ಅಂದಾಜಿರಲಿಕ್ಕಿಲ್ಲ. ಇರಲಿ ಸೀರಿಯಲ್‌ನಲ್ಲಿ ಮಲ್ಲಿಗೆ ಆಸ್ತಿ ಬಂದಿದೆ.
ಹೆಸರಿಗೆ ಬ್ರಹ್ಮಗಂಟು ಆದ್ರೆ, ಅಣ್ಣ-ತಂಗಿ ಸಂಬಂಧಕ್ಕೆ ಬೆಲೆನೇ ಇಲ್ವೇ! ಚಿರು-ಸಂಜನಾ ರೊಮ್ಯಾನ್ಸ್‌ಗೆ ಆಕ್ರೋಶ
ಈಗ ಮಲ್ಲಿ ಪಾತ್ರ ಮಾಡೋ ಅನ್ವಿತಾ ದುಡ್ಡಿನ ಬಗ್ಗೆ ಮಾತಾಡಿದ್ದು ಸುದ್ದಿಯಾಗಿದೆ. 'ಮದುವೆ ಆಗಲಿಲ್ಲ ಅಂದರೂ ಪರವಾಗಿಲ್ಲ. ಈಗ ಒಳ್ಳೆಯ ದುಡ್ಡು ಮಾಡಬೇಕು ಹಾಗೂ ಸೆಟಲ್ ಆಗಬೇಕು ಜೊತೆಗೆ ಟ್ರಾವೆಲ್ ಮಾಡಬೇಕು. ಆಸ್ತಿ ಅನ್ನೋದಕ್ಕಿಂತ ಗದ್ದೆ ಗಿದ್ದೆ ಮಾಡಿಕೊಂಡು ಇರಬೇಕು. ಮದುವೆ ಮಕ್ಕಳಿಂದ ದೂರ ಇರಬೇಕು' ಅನ್ನೋ ಮಾತನ್ನು ಅನ್ವಿತಾ ಹೇಳಿದ್ದಾರೆ. ಸೋ ಅವರು ಈ ಜೈದೇವ್ ಥರದವ್ರ ಸಾವಾಸನೇ ಬೇಡ ಅಂತ ಲೈಫ್‌ಲಾಂಗ್ ಸಿಂಗಲ್ ಸಿಂಡ್ರೆಲ್ಲಾ ಆಗಿಯೇ ಇರ್ತಾರಂತೆ. 'ಸಿಂಗಲ್ ಆಗಿರೋದೇ ಒಳ್ಳೇದಲ್ವಾ? ಲವ್ವು, ಮದುವೆ ಅಂತ ಹೋದರೆ ಪದೇ ಪದೇ ಹರ್ಟ್ ಆಗಿ ಡಿಪ್ರೆಶನ್‌ಗೆ ಹೋಗಬೇಕಾಗುತ್ತೆ. ಅದರ ಬದಲು ನಾನು ಹೀಗೆ ಇರುತ್ತೇನೆ' ಅಂದಿದ್ದಾರೆ.
ಲಕ್ಷ್ಮೀ ನಿವಾಸದಿಂದ ಹೊರ ಬಂದ ಮತ್ತೊಬ್ಬ ಸ್ಟಾರ್ ನಟ: ತಂಗಿ ಹಿಂದೆಯೇ ಹೋದ ಅಣ್ಣ!
ಸೀರಿಯಲ್‌ನಲ್ಲಿ ಏಕಾಏಕಿ ಯದ್ವಾತದ್ವಾ ಆಸ್ತಿ ಕೊಳ್ಳೆಹೊಡೆದಂಗೆ ಬಂದಿರೋ ಟೈಮಲ್ಲೇ ಅನ್ವಿಕಾ ಆಡಿರೋ ಈ ಮಾತು ಸಖತ್ ಸೌಂಡ್ ಮಾಡಿದೆ. ಇವರಿಗೆ ಒಬ್ರು ಅಣ್ಣ ಇದ್ದಾರೆ. ಅಣ್ಣ, ತಂಗಿ ಇಬ್ರೂ ಸಲ್ಮಾನ್ ಖಾನ್ ಫ್ಯಾನ್ಸ್ ಅಂತೆ. ಸೋ ಲೈಫ್ ಇಡೀ ಸಲ್ಮಾನ್ ಖಾನ್ ಮದುವೆ ಆಗೋ ಲಕ್ಷಣ ಕಾಣ್ತಿಲ್ಲ. ನಮ್ ಮಲ್ಲಿ ಅಲ್ಲಲ್ಲ ಅನ್ವಿತಾ ಕೂಡ ಸಿಂಗಲ್ಲಾಗೇ ಇದ್ದು, ತನ್ನ ಫೇವರಿಟ್ ಹೀರೋ ದಾರಿಲೇ ನಡೀಬೇಕು ಅಂತ ನಿರ್ಧರಿಸಿದ ಹಾಗಿದೆ. 'ಮಲ್ಲಿಯಾಗಿ ಜೀ ಕನ್ನಡಕ್ಕೆ ನಾನು ಕಂಬ್ಯಾಕ್ ಮಾಡಿದ್ದೇನೆ. ಜೀಯಲ್ಲಿ ವಾಪಾಸ್ ಬರಬೇಕು ಅನ್ನೋ ಆಸೆ ಇತ್ತು. ಇನ್ನೊಬ್ಬರು ಬಿಟ್ಟ ಪಾತ್ರ ಆಗಿರುವುದರಿಂದ ಜನ ಹೇಗೆ ತೆಗೆದುಕೊಳ್ತಾರೆ ಅಂತ ಸಣ್ಣ ಡೌಟ್ ಇತ್ತು. ಆದರೆ ಜನ ನನಗೆ ತೋರಿಸುತಿರುವಂತಹ ಪ್ರೀತಿ ನನಗೆ ಖುಷಿ ಕೊಟ್ಟಿದೆ' ಅನ್ನೋ ಮಾತನ್ನೂ ಅನ್ವಿತಾ ಸಾಗರ್ ಹೇಳಿದ್ದಾರೆ. ಸೋ ಸೀರಿಯಲ್‌ನಲ್ಲಿ ತಾನು ಮಾಡಿರೋ ಪಾತ್ರಕ್ಕೆ ಹಣದ ಹೊಳೆ ಬಂದಿರೋ ಹೊತ್ತಲ್ಲೇ ಅನ್ವಿಕಾನೂ ದುಡ್ಡು ಮಾಡೋ ಕನಸಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.