
ನಟಿ ಖುಷಿ ಮುಖರ್ಜಿ ಕಳೆದ ಕೆಲವು ತಿಂಗಳುಗಳಿಂದ ಭಾರಿ ಸುದ್ದಿ ಮಾಡುತ್ತಿದ್ದಾರೆ. ಸಂಪೂರ್ಣ ದೇಹವನ್ನು ಕಾಣಿಸುವಂತೆ ಬಟ್ಟೆ ಧರಿಸಿ ಇಲ್ಲವೇ ಅರ್ಧಂಬರ್ಧ ಬಟ್ಟೆ ಧರಿಸಿ ಅದನ್ನು ಗಾಳಿಗೆ ಹಾರಲು ಬಿಟ್ಟು ಹಿಡಿದುಕೊಂಡಂತೆ ಮಾಡಿ... ಹೀಗೆ ಒಟ್ಟಿನಲ್ಲಿ ಪಾಪರಾಜಿಗಳಿಂದ ಫೇಮಸ್ ಆಗುತ್ತಿದ್ದಾರೆ. ಗ್ಲಾಮರಸ್ ಲೋಕಕ್ಕೆ ಬಂದ ಮೇಲೆ ಅದು ಬೇಡ, ಇದು ಬೇಡ ಎನ್ನಲು ಆಗಲ್ಲ. ಫೇಮಸ್ ಆಗ್ಬೇಕು ಎಂದೇ ಬಂದಿರುವಾಗ ಇದೆಲ್ಲಾ ಮಾಮೂಲು ಎನ್ನುತ್ತಲೇ ತಮ್ಮ ಡ್ರೆಸ್ನಿಂದ ಇನ್ನಿಲ್ಲದಂತೆ ಟ್ರೋಲ್ ಆಗ್ತಿರೋ ನಟಿ ಖುಷಿ ಮುಖರ್ಜಿ ಓಪನ್ನಾಗಿಯೇ ಹಿಂದೊಮ್ಮೆ ಮಾತನಾಡಿದ್ದರು. ಸದಾ ದೇಹಪ್ರದರ್ಶನದಿಂದಲೇ ಫೇಮಸ್ ಆಗಿರೋ ನಟಿ, ಇದೀಗ ಹಿಂಬದಿ ಹರಿದ ಜೀನ್ಸ್ ಧರಿಸಿ ಪೋಸ್ ಕೊಟ್ಟಿದ್ದರಿಂದ ಸದ್ದು ಮಾಡಿದ್ದೂ ಇದೆ. ಇದಾಗಲೇ ಅತೀ ಎನ್ನಿಸುವಷ್ಟು ದೇಹ ಪ್ರದರ್ಶನ ಮಾಡಿ ಸುದ್ದಿಯಾಗಿದ್ದರೂ, ಹರಿದ ಜೀನ್ಸ್, ಕೊನೆಗೆ ಅತ್ಯಂತ ಕನಿಷ್ಠ ಬಟ್ಟೆ ತೊಟ್ಟು ಸದ್ದು ಮಾಡಿದ್ದರು.
ಆದರೆ, ಇದೀಗ ಒಳ ಉಡುಪು ಬಗ್ಗೆ ಮಾತನಾಡಿ ಹಲ್‌ಚಲ್ ಸೃಷ್ಟಿಸಿದ್ದಾರೆ. ಇದೀಗ ವೈರಲ್ ಆಗಿರೋ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ನೀವು ಒಳ ಉಡುಪು ಏಕೆ ಹಾಕಲಿಲ್ಲ ಎಂದು ನಟಿಯನ್ನು ಪ್ರಶ್ನಿಸಲಾಗಿದೆ. ಅದಕ್ಕೆ ನಟಿ ಮೊದಲಿಗೆ ಜೋರಾಗಿ ನಕ್ಕಿದ್ದಾರೆ. ಕೊನೆಗೆ ಸ್ವಲ್ಪ ಕೋಪದಿಂದ ಅದನ್ನು ಹಾಕದೇ ಯಾರಾದ್ರೂ ಹೊರಕ್ಕೆ ಹೋಗ್ತಾರೆ. ನಾನು ಆ ಉಡುಪು ಹಾಕಿಲ್ಲ ಎನ್ನುವುದು ನಿಮಗೆ ಕಾಣಿಸ್ತಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅಂಕಲ್ಲು ಇಲ್ಲ ಎಂದಾಗ, ಹಾಗಿದ್ದರೆ ಹೇಗೆ ಹೇಳ್ತೀರಿ. ನಾನು ಇಂಥ ಡ್ರೆಸ್‌ಗಾಗಿಯೇ ಇರುವ ಎಲ್ಲಾ ಕಡೆಯ ಒಳ ಉಡುಪುಗಳನ್ನು ಧರಿಸಿದ್ದೇನೆ. ನಿಮಗೆ ಏನು ಹಾಕಿದೆ, ಏನು ಹಾಕಿಲ್ಲ ಎನ್ನೋದು ಕಂಡರಷ್ಟೇ ಮಾತನಾಡಿ, ಅದನ್ನು ಬಿಟ್ಟು ಏನೇನೋ ಹೇಳಬೇಡಿ ಎಂದಿದ್ದಾರೆ.
ಇದೇ ವೇಳೆ ಹಾರಿ ಹೋಗ್ತಿರೋ ಡ್ರೆಸ್ ಅನ್ನು ಹಿಡಿದುಕೊಳ್ತಿರೋ ವಿಡಿಯೋ ನೋಡಿ ಕಮೆಂಟ್‌ಗಳಲ್ಲಿ ಉಪ್ಸ್ ಮೂಮೆಂಟು, ಆಕೆಗೆ ಈ ಡ್ರೆಸ್ ಅನ್‌ಕಮ್‌ಫರ್ಟೆಬಲ್ ಅನ್ನಿಸ್ತಿದೆ ಎಂದೆಲ್ಲಾ ಇರೋದಕ್ಕೂ ಉತ್ತರಿಸಿರೋ ನಟಿ. ನಾನು ನನಗೆ ಕನ್‌ಫರ್ಟ್ ಆಗಿರೋ ಡ್ರೆಸ್ ಅನ್ನಷ್ಟೇ ಹಾಕೋದು. ಗಾಳಿಗೆ ಡ್ರೆಸ್ ಹಾರಿಹೋಗುವಾಗ ಎಲ್ಲವನ್ನೂ ತೋರಿಸಿಕೊಂಡು ಕೂತ್ಕೋಬೇಕಾ? ಅದಕ್ಕೂ ಆಮೇಲೆ ಇನ್ನೇನೋ ಹೇಳ್ತೀರಿ. ಅದಕ್ಕಾಗಿ ಹಿಡಿದುಕೊಂಡೆ ಅಷ್ಟೇ. ಅದೇನೂ uncomfortable ಆಗಿರಲಿಲ್ಲ. ಅಂಥ ಡ್ರೆಸ್ ನಾನು ಹಾಕುವುದಿಲ್ಲ ಎಂದಿದ್ದಾರೆ.
ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಬೋಲ್ಡ್ ಆಗಿಯೇ ಉತ್ತರಿಸೋ ಖುಷಿ, ಗ್ಲಾಮರಸ್ ಇಂಡಸ್ಟ್ರಿಗೆ ಬಂದ ಮೇಲೆ ಫೇಮಸ್ ಆಗಬೇಕು ಎಂದು ಇದೆಲ್ಲಾ ಮಾಡಿದ್ರೆ ತಪ್ಪೇನಿಲ್ಲ ಎಂದಿದ್ದಾರೆ. ಊಟ ನಿಮ್ಮ ಇಚ್ಛೆಯಂತೆ ಮಾಡಿ, ಡ್ರೆಸ್ ಬೇರೆಯವರ ಇಚ್ಛೆಯಂತೆ ಹಾಕಿಕೊಳ್ಳಿ ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ. ನನಗೆ ಇಷ್ಟಬಂದ ಡ್ರೆಸ್ ಹಾಕುವ ಹಕ್ಕು ನನಗೆ ಇದೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ನೀವು ನನ್ನ ಬಗ್ಗೆ ಒಳ್ಳೆಯದ್ದೇ ಹೇಳಿ, ಕೆಟ್ಟದ್ದೇ ಹೇಳಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದೂ ಹೇಳಿದ್ದಾರೆ. ಅಷ್ಟಕ್ಕೂ ನಟಿ ಈ ಹಿಂದೆ ಬೇಕಾದಷ್ಟು ಬಾರಿ ಇಂಥ ಡ್ರೆಸ್ ಹಾಕಿ, ಉದ್ದೇಶಪೂರ್ವಕವಾಗಿ ಆ ಡ್ರೆಸ್ ಹಾರಿಹೋಗುವಂತೆ ಮಾಡಿ, ಪ್ರದರ್ಶನ ಮಾಡಿರೋದು ಇದೆ. ಈಗ ಅವುಗಳ ಬಗ್ಗೆ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.