Radha Bhagavati: ಕಣ್ಣಲ್ಲೇ ಕೊಲ್ಲುತ್ತಾ ಸೀರೆಯಲ್ಲಿಯೇ ಕ್ಯಾಟ್​ವಾಕ್​ ಮಾಡಿ ಗಮನ ಸೆಳೆದ ಭಾರ್ಗವಿ!

Published : Jun 07, 2025, 05:12 PM IST
Radha Bhagavati Rampwalk

ಸಾರಾಂಶ

ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ ನಟಿ ರಾಧಾ ಭಗವತಿ ಅವರು ಸೀರೆಯಲ್ಲಿ ಕ್ಯಾಟ್​ವಾಕ್​ ಮಾಡುತ್ತಾ ಬಂದಿರುವ ವಿಡಿಯೋ ವೈರಲ್​ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

ಕ್ಯಾಟ್​ವಾಕ್​, rampwalk ಎಂದೆಲ್ಲಾ ಬಂದಾಗ ಬೇರೆಯದ್ದೇ ರೀತಿಯ ಡ್ರೆಸ್​ಗಳ ಕಣ್ಣೆದುರು ಬರುತ್ತವೆ. ಅದರಲ್ಲಿಯೂ ಹೆಚ್ಚಾಗಿ ಅರೆಬರೆ ಡ್ರೆಸ್​, ತುಂಡುಡುಗೆಗಳು, ಚಿತ್ರ-ವಿಚಿತ್ರ ಎನ್ನಿಸುವಂಥ ಬಟ್ಟೆ, ಅತೀ ಎನಿಸುವ ದೇಹ ಪ್ರದರ್ಶನ, ನೆಲವನ್ನು ಗುಡಿಸುತ್ತಾ ಹೋಗುವ ಭಾರಿ ಬಟ್ಟೆಗಳು, ಹೈಹೀಲ್ಸ್​ ಧರಿಸಿ ಕೆಲವೊಮ್ಮೆ ಪರದಾಡುವ ನಟಿಯರು... ಹೀಗೆ ಏನೇನೋ ಕಲ್ಪನೆ ಬರುವುದು ಸಹಜ. ಆದರೆ ಸೀರೆ ಧರಿಸಿ ಅಪ್ಪಟ ಭಾರತೀಯ ನಾರಿಯಂತೆ ಕ್ಯಾಟ್​ವಾಕ್​ ಮಾಡಿದಾಗ ಅದು ಹಲವರಿಗೆ ಅದೇನೋ ಮುದ ನೀಡುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಅದೇ ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ನ ನಾಯಕಿ ರಾಧಾ ಭಗವತಿ ಅವರದ್ದು. ಅಮೃತಧಾರೆಯ ಪೆದ್ದು ಮಲ್ಲಿಯಿಂದ ಈಗ ನಟಿ ಭಾರ್ಗವಿಯಾಗಿ ಖಡಕ್​ ಪಾತ್ರ ಮಾಡುತ್ತಿದ್ದಾರೆ. ಯುವತಿಯೊಬ್ಬಳಿಗೆ ನ್ಯಾಯ ಕೊಡಿಸಲು ಹೋಗಿ ಅಮ್ಮನಿಂದಲೇ ಈಗ ಭಾರಿ ಅವಮಾನ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ ಭಾರ್ಗವಿಗೆ.

ಇದು ಕಲರ್ಸ್​ ಕನ್ನಡದಲ್ಲಿ ಬರುವ ಸೀರಿಯಲ್​ ಕಥೆಯಾದರೆ ಅಸಲಿಗೆ ರಾಧಾ ಭಗವತಿ ಅವರು ರ್ಯಾಂಪ್​ವಾಕ್​ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಕಣ್ಣಲ್ಲಿಯೇ ಕೊಲ್ಲುವ ನಟಿ ಎಂದು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ, ರಾಧಾ ಅವರು ನಟಿ ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ಜೀ ಕನ್ನಡದ ಅಮೃತಧಾರೆಯ ಮಲ್ಲಿ ಭಾರ್ಗವಿ ಎಲ್​ಎಲ್​ಬಿಯ ಭಾರ್ಗವಿ ಆಗಿ ಬಹಳ ದಿನಗಳೇ ಕಳೆದು ಬಿಟ್ಟಿವೆ. ಪೆದ್ದು ಪೆದ್ದು ಮಲ್ಲಿ ಈಗ ಫುಲ್​ ಉಲ್ಟಾ ಭಾರ್ಗವಿಯಾಗಿ ಮಿಂಚುತ್ತಿದ್ದಾಳೆ. ಹೌದು. ಇದು ನಟಿ ರಾಧಾ ಭಗವತಿ ಸ್ಟೋರಿ. ಅಮೃತಧಾರೆಯಲ್ಲಿ ಮಲ್ಲಿಯ ಪಾತ್ರ ಬದಲಾದರೂ ರಾಧಾ ಅವರ ಅಭಿಮಾನಿಗಳು ಅವರನ್ನೇ ಇಂದಿಗೂ ನೆನಪಿಸಿಕೊಳ್ಳುವುದು ಇದೆ. ಪೆದ್ದುಪೆದ್ದಾಗಿ ಮಾತನಾಡುತ್ತಿದ್ದ ರಾಧಾ ಅವರು ಜನರ ಮನಸ್ಸಿಗೆ ಹತ್ತಿರವಾಗಿದ್ದರು. ಅಷ್ಟಕ್ಕೂ ಒಂದು ಪಾತ್ರವನ್ನು ಮೊದಲಿನಿಂದಲೂ ನೋಡಿದವರಿಗೆ ಆ ಪಾತ್ರಧಾರಿ ಇಷ್ಟವಾಗುವುದು ಸಹಜವೇ. ಆದರೆ ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ನಲ್ಲಿ ನಾಯಕಿ ರೋಲ್​ ಸಿಕ್ಕಿದ್ದರಿಂದ ರಾಧಾ ಭಗವತಿ ಅವರು ಅಮೃತಧಾರೆ ಬಿಟ್ಟು ಹೋದರು. ಅಲ್ಲಿ ಅವರು ರಾಧಾ ಪಾತ್ರಕ್ಕೆ ತದ್ವಿರುದ್ಧ ಆಗಿರೋ ಖಡಕ್​ ನಾಯಕಿ ರೋಲ್​ ಮಾಡುತ್ತಿದ್ದಾರೆ. ಆದರೂ ಅಮೃತಧಾರೆಯಲ್ಲಿ ರಾಧಾ ಅವರನ್ನು ಇಂದಿಗೂ ಜನರು ಮಿಸ್​ ಮಾಡಿಕೊಳ್ಳುತ್ತಿದ್ದಾರೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!
ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌