
ಸೂಪರ್‌ಹಿಟ್ ಚಿತ್ರ "ಧುರಂಧರ್" ತನ್ನ ಕಥೆಗಾಗಿ ಮಾತ್ರವಲ್ಲದೆ, ಅದರ ಸೂಪರ್‌ಹಿಟ್ ಹಾಡುಗಳಿಂದಲೂ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರದ ಎಲ್ಲಾ ಹಾಡುಗಳು ದಾಖಲೆಗಳನ್ನು ನಿರ್ಮಿಸಿದರೂ, ಯೂಟ್ಯೂಬ್‌ನಲ್ಲಿ ಇಂದಿನವರೆಗೆ ಎಲ್ಲೆಡೆ ಸದ್ದು ಮಾಡುತ್ತಿರುವ ಒಂದು ಹಾಡು ಇದೆ.. ಅದೇ "ಶರರತ್ (Shararat)..
ಹಾಡಿನಲ್ಲಿ ಆಯೇಷಾ ಖಾನ್ ಮತ್ತು ಕ್ರಿಸ್ಟಲ್ ಡಿ'ಸೋಜಾ ಅವರ ಜುಗಲ್‌ಬಂದಿ ಎಲ್ಲರ ಹೃದಯ ಗೆದ್ದಿದೆ. ಆದರೆ ತಮ್ಮ ನಟನೆಯಿಂದ, ನೃತ್ಯದಿಂದ ವೀಕ್ಷಕರ ಮನಬೆಳಗಿಸಿದ ಆಯೇಷಾ ಖಾನ್, ಈ ಹಾಡಿನ ಸಮಯದಲ್ಲಿ ತನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಸವಾಲಿನ ಕೆಲಸವಾಗಿತ್ತು ಎಂದು ಹೇಳಿದ್ದು ಬಹುಶಃ ಅನೇಕ ಜನರಿಗೆ ತಿಳಿದಿಲ್ಲದಿರಬಹುದು.
ಆಯೇಷಾ ಖಾನ್, ಇತ್ತೀಚೆಗೆ ಪಿಂಕ್ವಿಲ್ಲಾ ಜೊತೆ ನಡೆಸಿದ ವಿಶೇಷ ಸಂದರ್ಶನವೊಂದರಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿದ್ದಾಗ ತಾನು ಪಿರಿಯಡ್ಸ್ ಆಗಿದ್ದೆ ಎಂಬ ವಿಚಾರ ರಿವೀಲ್ ಮಾಡಿದ್ದಾರೆ. ಆಯೇಷಾ, "ಈ ಹಾಡಿಗಾಗಿ ಎರಡು ದಿನಗಳ ಚಿತ್ರೀಕರಣ ನಡೆಸಲಾಯ್ತು ಮತ್ತು ಬ್ಯುಸಿ ವೇಳಾಪಟ್ಟಿಯಿತ್ತು. ಆ ದಿನದಲ್ಲಿ ಪಿರಿಯಡ್ಸ್ ಆಗಿದ್ದೆ. ಆದ್ದರಿಂದ ನನಗೆ ಹೊಟ್ಟೆ ಉಬ್ಬರ ತರಿಸುತ್ತಿತ್ತು. ದಿ ಬೆಸ್ಟ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ಅನಿಸಿತು. ಏಕೆಂದರೆ ಯಾವುದೇ ಹೆಣ್ಣುಮಕ್ಕಳು ಋತುಚಕ್ರದ ಸಮಯದಲ್ಲಿ ಚೆನ್ನಾಗಿರುವುದಿಲ್ಲ" ಎಂದು ತಿಳಿಸಿದ್ದಾರೆ.
ಆ ಎರಡು ದಿನಗಳಲ್ಲಿ ಕೆಲಸದ ಹೊರೆ ಎಷ್ಟು ತೀವ್ರವಾಗಿತ್ತೆಂದರೆ ಸುತ್ತಲೂ ನೋಡಲು ಸಹ ಸಮಯವಿರಲಿಲ್ಲ ಎಂದು ಆಯೇಷಾ ವಿವರಿಸಿದರು. ಆ ಸಮಯದಲ್ಲಿ ಚಿತ್ರದ ವಿವಾಹದ ಸನ್ನಿವೇಶವನ್ನು ಸಹ ಚಿತ್ರೀಕರಿಸಲು ನಿರ್ಧರಿಸಲಾಗಿತ್ತು. "ನಿರಂತರ ನೃತ್ಯದಿಂದ ನಮ್ಮ ಮೂಳೆಗಳು ನೋಯುತ್ತಿದ್ದವು. ನಾವು ತುಂಬಾ ದಣಿದಿದ್ದೆವು. ಚಿತ್ರೀಕರಣ ಮುಗಿದ ನಂತರ, ನನಗೆ ಕಣ್ಣೀರು ತಡೆದುಕೊಳ್ಳಲಾಗಲಿಲ್ಲ. ನಾನು ತುಂಬಾ ಅಳಲು ಪ್ರಾರಂಭಿಸಿದೆ. ಆ ಕಣ್ಣೀರು ಸಂತೋಷದಿಂದಲೋ ಅಥವಾ ನೋವಿನಿಂದಲೋ? ಇದರ ಹೊರತಾಗಿಯೂ, ನಾನು ಅದನ್ನು ಪೂರ್ಣಗೊಳಿಸಿದೆ" ಎಂದು ಆಯೇಷಾ ಹೇಳಿದ್ದಾರೆ.
ಕ್ರಿಸ್ಟಲ್ ಡಿ'ಸೋಜಾ ಕುರಿತು ಆಯೇಷಾ ಖಾನ್ ಪ್ರತಿಕ್ರಿಯೆ
ಹಾಡಿನ ಬಿಡುಗಡೆಯ ನಂತರ, ಆಯೇಷಾ ಖಾನ್ ಮತ್ತು ಕ್ರಿಸ್ಟಲ್ ಡಿ'ಸೋಜಾ ನಡುವೆ ಬಿರುಕು ಮೂಡಿದೆ ಎಂಬ ವರದಿಗಳು ಕೇಳಿಬಂದವು. ಈ ವದಂತಿಗಳನ್ನು ನಿರಾಕರಿಸಿದ ಆಯೇಷಾ ಕ್ರಿಸ್ಟಲ್ ಅವರನ್ನು ಅಪಾರವಾಗಿ ಹೊಗಳಿದರು. "ಕ್ರಿಸ್ಟಲ್ ನನ್ನ ಹಿರಿಯರು ಮತ್ತು ನನಗಿಂತ ಹೆಚ್ಚು ಕೆಲಸ ಮಾಡಿದ್ದಾರೆ. ಆರಂಭದಲ್ಲಿ, ಅವರು ಕೋಪಗೊಳ್ಳಬಹುದು ಎಂದು ನಾನು ಭಾವಿಸಿದ್ದೆ, ಆದರೆ ಅವರು ನಿಜವಾಗ್ಲೂ ಡಾರ್ಲಿಂಗ್. ಚಿತ್ರೀಕರಣದ ಸಮಯದಲ್ಲಿ ನಾವಿಬ್ಬರೂ ಪರಸ್ಪರ ಪವರ್‌ಫುಲ್ ಆಗಿ ಕೆಲಸ ಮಾಡಿದೆವು." ಎಂದಿದ್ದಾರೆ. ಅಷ್ಟೇ ಅಲ್ಲ, ಕ್ರಿಸ್ಟಲ್ ಅವರ ಸೌಂದರ್ಯವನ್ನು ಹೊಗಳುತ್ತಾ ಆಯೇಷಾ, ಅವರ ಕಣ್ಣುಗಳು ತುಂಬಾ ಸುಂದರವಾಗಿರುವುದರಿಂದ ಅವರು ಮಸೂರಗಳನ್ನು ಧರಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಬಳಕೆದಾರರರಿಂದ ಪ್ರಶಂಸೆ
ಅಭಿಮಾನಿಗಳು ಇದೀಗ ಆಯೇಷಾ ಖಾನ್ ಅವರನ್ನು ಸಿಕ್ಕಾಪಟ್ಟೆ ಹೊಗಳುತ್ತಿದ್ದು, ಆಯೇಷಾ ಅವರ ಈ ಹೇಳಿಕೆ ಕೇಳಿ ಸಾಮಾಜಿಕ ಮಾಧ್ಯಮದಲ್ಲಿ ಅವರ ಧೈರ್ಯವನ್ನು ಶ್ಲಾಘಿಸುತ್ತಿದ್ದಾರೆ. ಓರ್ವ ಬಳಕೆದಾರರು, "ಋತುಚಕ್ರದ ಅಸಹನೀಯ ನೋವಿನಲ್ಲೂ ತುಂಬಾ ಪವರ್‌ಫುಲ್ ನೃತ್ಯ ಮಾಡುವುದು ನಿಜಕ್ಕೂ ಶ್ಲಾಘನೀಯ" ಎಂದು ಬರೆದಿದ್ದಾರೆ. ಮತ್ತೆ ಕೆಲವರು, "ಹ್ಯಾಟ್ಸ್ ಆಫ್! ಒಬ್ಬ ಕಲಾವಿದ ತಮ್ಮ ಕೆಲಸಕ್ಕಾಗಿ ಎಷ್ಟು ಶ್ರಮಿಸುತ್ತಾರೆ ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿ" ಎಂದು ಬರೆದಿದ್ದಾರೆ. ಹಾಗೆಯೇ "ಮೇಡಂ, ನೀವಿಬ್ಬರೂ ಪ್ರಶಂಸೆಗೆ ಅರ್ಹರು; ಆ ಹಾಡು ನಿಜವಾಗಿಯೂ ಸೂಪರ್‌ಹಿಟ್" ಎಂದು ಬರೆದಿರುವುದನ್ನು ನೀವಿಲ್ಲಿ ಗಮನಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.