ರಾಕಿಂಗ್​ ಸ್ಟಾರ್​ಗೆ ಡಿಪ್ರೆಷನ್ ಅಲ್ಲ, ಡೆಡಿಕೇಷನ್..! ಜೂನ್ 4ಕ್ಕೆ ಉತ್ತರ ಕೊಡ್ತಿನಿ ಅಂದ್ರು ಯಶ್..!

Published : Mar 14, 2026, 01:02 PM IST
Yash

ಸಾರಾಂಶ

ತೆಲುಗು ಜ್ಯೋತಿಷಿ ವೇಣುಸ್ವಾಮಿ, ನಟ ಯಶ್ ಕೆಜಿಎಫ್ ನಂತರದ ಒತ್ತಡದಿಂದ ಡಿಪ್ರೆಷನ್‌ಗೆ ಜಾರಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಯಶ್ ಅವರ ಮೌನವು ಡಿಪ್ರೆಷನ್‌ನಿಂದಲ್ಲ, ಬದಲಾಗಿ ಅವರ ಮುಂದಿನ 'ಟಾಕ್ಸಿಕ್' ಚಿತ್ರದ ಮೇಲಿನ ಡೆಡಿಕೇಷನ್‌ನಿಂದಾಗಿದೆ ಎಂದು ಈ ಲೇಖನವು ಸ್ಪಷ್ಟಪಡಿಸುತ್ತದೆ.

ಬೆಂಗಳೂರು: ಸೆಲೆಬ್ರಿಟಿಗಳ ಬಗ್ಗೆ ಸದಾ ವಿವಾದಾತ್ಮಕ ಭವಿಷ್ಯ ಹೇಳೋ ತೆಲುಗು ಜ್ಯೋತಿಷಿ ವೇಣುಸ್ವಾಮಿ, ಈಗ ಯಶ್ ಬಗ್ಗೆ ಶಾಕಿಂಗ್ ವಿಷ್ಯ ಹೇಳಿದ್ದಾರೆ. ಯಶ್ ಡಿಪ್ರೆಷನ್‌ಗೆ ಹೋಗಿದ್ದಾರೆ ಅಂತ ತೆಲುಗು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಯಶ್ ವರ್ಷಗಳಿಂದ ಸೈಲೆಂಟ್ ಆಗಿರೋದು ನಿಜ, ಆದ್ರೆ ಅದು ಡಿಪ್ರೆಷನ್ನಾ ಅಥವಾ​ ಅ ಡೆಡಿಕೇಷನ್ನಾ? ಇಲ್ಲಿದೆ ನೋಡಿ ಆ ಕುರಿತ ಎಕ್ಸ್‌ಕ್ಲೂಸಿವ್ ಸ್ಟೋರಿ.

ಡಿಪ್ರೆಷನ್‌ಗೆ ಜಾರಿದ್ರಾ ರಾಕಿಂಗ್ ಸ್ಟಾರ್ ಯಶ್?

ಯೆಸ್ ಟಾಲಿವುಡ್ ತಾರೆಯರ ಬಗ್ಗೆ ಶಾಕಿಂಗ್ ಭವಿಷ್ಯ ಹೇಳ್ತಾ ಫೇಮಸ್ ಆದ ವೇಣುಸ್ವಾಮಿ, ನಮ್ಮ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದಾನೆ. ಕನ್ನಡದ ಹೀರೋ ಯಶ್ ಸದ್ಯ ಡಿಪ್ರೆಷನ್‌ಗೆ ಹೋಗಿದ್ದಾರೆ. ಅವರ ಸಮಯ ಈಗ ಹಾಗಿದೆ ಹೀಗಿದೆ ಅಂತ ತೆಲುಗು ಸಂದರ್ಶನವೊಂದರಲ್ಲಿ ಬಡಬಡಿಸಿದ್ದಾನೆ. ನಿಜ ಹೇಳಬೇಕು ಅಂದ್ರೆ ರಾಕಿಂಗ್ ಸ್ಟಾರ್ ಬಗ್ಗೆ ತೆಲುಗು ಆಡಿಯನ್ಸ್ ಗೆ ದೊಡ್ಡ ಕುತೂಹಲ ಇದೆ. ಕೆಜಿಎಫ್ 1 & 2 ನೋಡಿ ಯಾರೀ ಹೀರೋ. ನಮ್ಮ ಟಾಲಿವುಡ್ ಸ್ಟಾರ್​ಗಳನ್ನ ಮೀರಿಸೋ ಮಾಸ್ ಹೀರೋ ಅಂತ ಇಷ್ಟಪಟ್ಟಿದ್ರು ತೆಲುಗು ಜನ.

ತೆಲುಗು ಸಿನಿಪ್ರಿಯರು ಹೇಳಿ ಕೇಳಿ ಆಕ್ಷನ್ ಪ್ರಿಯರು. ಸೋ ಕೆಜಿಎಫ್ ನೋಡಿ ಥ್ರಿಲ್ ಆಗಿರೋ ತೆಲುಗು ಆಡಿಯನ್ಸ್ ರಾಕಿಯ ಹೊಸ ಸಿನಿಮಾ ನೋಡೋದಕ್ಕೆ ಕಾಯ್ತಾ ಇದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡಿರೋ ಈ ಜ್ಯೋತಿಷಿ ರಾಕಿ ಬಗ್ಗೆ ಶಾಕಿಂಗ್ ಭವಿಷ್ಯ ಹೇಳಿದ್ದಾನೆ.

ಯಶ್ ಅಂತ ಒಬ್ಬ ಹೀರೋ ನೋಡಿ, ಆತ ಕನ್ನಡ ಹೀರೋ ಆದ್ದರಿಂದ ಮಾತನಾಡ್ತಿನಿ. ತೆಲುಗು ಹೀರೋಗಳ ಬಗ್ಗೆ ನಾನು ಮಾತನಾಡಲ್ಲ. ಅವರ ಕಂಡೀಷನ್ ಈಗ ಹೇಗಿದೆ ಗೊತ್ತಾ..? ಅವರು ಡಿಪ್ರೆಷನ್​ನಲ್ಲಿದ್ದಾರೆ. ಯಾಕೆ ಅಂದರೆ ಅವರು ಮಾಡಿದ ಎರಡು ಸಿನಿಮಾಗಳು ದೊಡ್ಡ ಹಿಟ್ ಆದವು. ಈಗ ಕೆಜಿಎಫ್​ಗಿಂತ ದೊಡ್ಡ ಸಿನಿಮಾ ಮಾಡೋದು ಹೇಗೆ ಅಂತ ಅವರು ಒತ್ತಡಕ್ಕೆ ಸಿಲುಕಿದ್ದಾರೆ. ಆ ಸಬ್ಜೆಕ್ಟ್ ಹ್ಯಾಂಡಲ್ ಮಾಡೋದಕ್ಕೆ ಆಗೋದಿಲ್ಲ. ಜನರ ಎಕ್ಸ್​ಪೆಕ್ಟೇಷನ್ ನೋಡಿ ಅವರು ಹುಚ್ಚ ಆಗಿಬಿಟ್ಟಿದ್ದಾರೆ. ಸೆಲೆಬ್ರಿಟಿ ಆದ ಮೇಲೆ ಅದನ್ನು ಕ್ಯಾರಿ ಮಾಡೋದು ಕೂಡ ಕಷ್ಟವೇ.

 

ಯೆಸ್ ವೇಣುಸ್ವಾಮಿ ಹೇಳೋ ಪ್ರಕಾರ ಯಶ್ ಡಿಫ್ರೆಷನ್​ಗೆ ಹೋಗಿದ್ದಾರಂತೆ. ಕೆಜಿಎಫ್ ಮೀರಿಸೋ ಸಿನಿಮಾ ಮಾಡೋದು ಹೇಗೆ ಅಂತ ಹುಚ್ಚ ಆಗಿದ್ದಾರಂತೆ. ಇಂಥದ್ದೊಂದು ಹುಚ್ಚು ಹೇಳಿಕೆ ಕೊಟ್ಟಿದ್ದಾನೆ ಈ ಕಳ್ಳ ಜ್ಯೋತಿಷಿ.

ರಾಕಿಂಗ್​ ಸ್ಟಾರ್‌ಗೆ ಡಿಪ್ರೆಷನ್ ಅಲ್ಲ, ಡೆಡಿಕೇಷನ್..!

ಹೌದು ಕೆಜಿಎಫ್ 1 & 2 ವರ್ಲ್ಡ್ ವೈಡ್ ಹಿಟ್ ಆದ ಮೇಲೆ , ಬಂದ ಅವಕಾಶನೆಲ್ಲಾ ಒಪ್ಪಿಕೊಂಡು ಯಶ್ ಹಣ ಮಾಡೋದಕ್ಕೆ ನಿಲ್ಲಲಿಲ್ಲ. ಕೆಜಿಎಫ್ ನೂ ಮೀರಿಸೋ ಸಾಮ್ರಾಜ್ಯ ಕಟ್ಟೋ ಕನಸು ಕಂಡರು ಅದರ ಫಲವೇ ಟಾಕ್ಸಿಕ್. ದೊಡ್ಡ ಕನಸು ಕಂಡಾಗ ಅದನ್ನ ಈಡೇರಿಸಿಕೊಳ್ಳೋದಕ್ಕೆ ದೊಡ್ಡ ಸಮಯವೇ ಬೇಕು. ಅಂತೆಯೇ ಯಶ್ ಟಾಕ್ಸಿಕ್ ಮೇಲೆ ಬರೊಬ್ಬರಿ 4 ವರ್ಷಗಳನ್ನ ಸ್ಪೆಂಡ್ ಮಾಡಿದ್ದಾರೆ. ತಡವಾಗಿದೆ. ಬೇಸರ ಆಗಿದೆ. ಆದ್ರೆ ಅದು ಡಿಪ್ರೆಷನ್ ಅಲ್ಲ ಡೆಡಿಕೇಷನ್.

ಅಸಲಿಗೆ ಈ ವೇಣುಸ್ವಾಮಿ ಅನ್ನೋ ಜ್ಯೋತಿಷಿ ಅದೆಷ್ಟು ಖತರ್ನಾಕ್ ಅಂದ್ರೆ ತೆಲುಗು ತಾರೆಯರಿಗೆ ಸುಳ್ಳು ಭವಿಷ್ಯ ಹೇಳ್ತಾ ಅವರನ್ನ ಮಂಗ ಮಾಡಿದ್ದ. ಒಂದೊಮ್ಮೆ ರಶ್ಮಿಕಾ ಮಂದಣ್ಣ ಕೂಡ ಈತನ ಕಚೇರಿಗೆ ಹೋಗಿ ಪೂಜೆ ಮಾಡಿಸಿ ಬಂದಿದ್ರು. ಆದ್ರೆ ಕಳೆದ ಬಾರಿ ಆಂಧ್ರ ಚುನಾವಣೆ ವೇಳೆ ಈತ ಹೇಳಿದ್ದ ಭವಿಷ್ಯ ಒಂದೂ ನಿಜವಾಗಲಿಲ್ಲ. ಆಗ ಜನರು ಈತನಿಗೆ ಛೀಮಾರಿ ಹಾಕಿದ್ರು. ಇನ್ಮುಂದೆ ನಾನು ಭವಿಷ್ಯ ಹೇಳಲ್ಲ ಅಂತ ಕಣ್ಮರೆಯಾಗಿದ್ದ ಈ ಭೂಪ ಈಗ ಮತ್ತೆ ಪ್ರತ್ಯಕ್ಷ ಆಗಿದ್ದಾನೆ. ಈ ಸಾರಿ ಕನ್ನಡ ಸ್ಟಾರ್‌ಗಳ ಹಿಂದೆ ಬಿದ್ದಿದ್ದಾನೆ.

ಮಾರ್ಚ್ 19ಕ್ಕೆ ಬರಬೇಕಿದ್ದ ಟಾಕ್ಸಿಕ್ ಸಿನಿಮಾ ಪೋಸ್ಟ್ ಪೋನ್ ಆದ ಮೇಲೆ ಇಂಥವರು ಮಾತನಾಡೋದು ಜಾಸ್ತಿಯಾಗಿದೆ. ಆದ್ರೆ ಅದೆಷ್ಟು ಆಡ್ಕೋತಿರೋ ಆಡ್ಕೊಳಿ. ನಾನು ಬಂದ ದಿನ ಪ್ರಳಯ ಆಗುತ್ತೆ ನೆನಪಿಟ್ಕೊಳ್ಳಿ ಅಂತಿದ್ದಾರೆ ರಾಕಿಂಗ್ ಸ್ಟಾರ್.

ಅಮೀತ್ ದೇಸಾಯಿ, ಏಷ್ಯಾನೆಟ್ ಸುವರ್ಣ ನ್ಯೂಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಹಾರ ವೈಯಕ್ತಿಕ ಆಯ್ಕೆ.. ಆದ್ರೆ ಮಾಂಸಾಹಾರ ತ್ಯಜಿಸಿ ಸಸ್ಯಾಹಾರಕ್ಕೆ ಬದಲಾದ ಸ್ಟಾರ್ ನಟ-ನಟಿಯರಿವರು; ಕಾರಣ ಇದು!
ಅಯ್ಯಯ್ಯೋ ರಶ್ಮಿಕಾ, ಇದೇನಮ್ಮಾ? ಕನ್ನಡದ ಮೊದಲ ಆಡಿಷನ್​ ವಿಡಿಯೋ ನೋಡಿ ಸುಸ್ತಾದ ಫ್ಯಾನ್ಸ್