
ಈ ಚೆಲುವೆ ನಿಮಗೆ ನೆನಪಿರಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರ್ಷ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದಾಗಿನಿಂದ, ಅಭಿಮಾನಿಗಳ ಸಂಖ್ಯೆ ಉತ್ತುಂಗಕ್ಕೇರಿದೆ. ಆ ಅಭಿಮಾನಿಗಳಲ್ಲಿ ಒಬ್ಬಳು ಬೇಬಿಡಾಲ್ ಆರ್ಚಿ ಎಂದು ಜನಪ್ರಿಯವಾಗಿರುವ ಅರ್ಚಿತಾ ಫುಕನ್. ಇವಳು ಅಸ್ಸಾಮಿನವಳು. ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್. ತನ್ನ ಹಾಟ್ ಹಾಟ್ ಚಿತ್ರಗಳಿಂದ ಬಹು ಬೇಡಿಕೆಯಲ್ಲಿರುವಾಕೆ. ಲಕ್ಷಾಂತರ ಫಾಲೋವರ್ಸ್ ಈಕೆಗೆ ಇದ್ದಾರೆ. ತಾನು ಈ ಹಿಂದೆ ಮೈಮಾರಿಕೊಂಡು ಬದುಕುತ್ತಿದ್ದೆ, ವೇಶ್ಯೆಯಾಗಿದ್ದೆ ಎಂದು ಯಾವ ಭಿಡೆಯಿಲ್ಲದೆ ಈಕೆ ಹೇಳಿಕೊಂಡಿದ್ದುಂಟು. ಈಕೆ ಆರ್‌ಸಿಬಿ ಟೀಮ್‌ನ ಯುನಿಫಾರಂ ಧರಿಸಿ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಕಿಕೊಂಡಿದ್ದಳು. ಇದೀಗ ಮತ್ತೆ ನೆಟಿಜೆನ್‌ಗಳ ಗಮನ ಸೆಳೆಯುತ್ತಿದೆ. ಅದಕ್ಕೆ ಕಾರಣವೂ ಇದೆ.
ಅರ್ಚಿತಾ ಫುಕನ್ ಮತ್ತೆ ಸುದ್ದಿಯಲ್ಲಿದ್ದಾಳೆ. ಇತ್ತೀಚೆಗೆ ಆಕೆ ವಯಸ್ಕರ ಚಿತ್ರಗಳಲ್ಲಿ ನಟಿಸುವ ನಟಿ ಕೇಂಡ್ರಾ ಲಸ್ಟ್ ಜೊತೆಗಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾಳೆ. ಈ ಹಿಂದೆಯೂ ಆಕೆ ಲಸ್ಟ್ ಜೊತೆಗಿನ ಫೋಟೋ ತೆಗೆಸಿಕೊಂಡು ಹಾಕಿಕೊಂಡಿದ್ದುಂಟು. ಅಂದರೆ ಈಕೆಗೆ ಕೇಂಡ್ರಾ ಜೊತೆಗೆ ಸಂಪರ್ಕ ಇದೆಯೆಂಬುದು ಖಚಿತ. "ಕೇಂಡ್ರಾ ಅವರನ್ನು ಮೊದಲ ಬಾರಿಗೆ ಭೇಟಿಯಾಗುವುದು ನಿಜಕ್ಕೂ ಮರೆಯಲಾಗದ ಅನುಭವ! ಅವರ ಆತ್ಮವಿಶ್ವಾಸ, ವೃತ್ತಿಪರತೆ ಮತ್ತು ಯಶಸ್ಸಿನಿಂದ ನಾನು ಪ್ರೇರಿತಳಾಗಿರುವೆ. ಅವಳು ಇನ್ನಷ್ಟು ಉತ್ತಮ ಜೀವನದತ್ತ ನನ್ನ ಪ್ರಯಾಣವನ್ನು ಸಾಗಿಸುವ ಕುರಿತು ಅಮೂಲ್ಯವಾದ ಅಭಿಪ್ರಾಯಗಳನ್ನು ಹಂಚಿಕೊಂಡರು. ಇಂತಹ ಐಕಾನ್‌ನ ಸಂಪರ್ಕ ಹೊಂದಲು ಮತ್ತು ಅವಳಿಂದ ಕಲಿಯುವ ಅವಕಾಶ ಪಡೆದುದಕ್ಕಾಗಿ ಕೃತಜ್ಞಳಾಗಿದ್ದೇನೆ" ಎಂದು ಅರ್ಚಿತಾ ಬರೆದುಕೊಂಡಿದ್ದಳು.
ಮುಂದುವರಿದು ಆಕೆ ಬರೆದಿರುವುದು- ʼಕೇಂಡ್ರಾ ಜೊತೆಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿರುವೆ. ಒಪ್ಪಂದ ಓದದೇ ಸಹಿ ಹಾಕಿದ್ದೇನೆ. ಇದೊಂದು ಹೊಸ ಆರಂಭʼ ಎಂದಿದ್ದಾಳೆ. ಜೊತೆಗೆ, ಅರ್ಚಿತಾ ಅಡಲ್ಟ್ ಚಿತ್ರಲೋಕಕ್ಕೆ ಹೋಗ್ತಾಳೆ ಎಂಬ ಸುದ್ದಿಗಳ ಕಟಿಂಗ್ಸ್ ಕೂಡ ಹಂಚಿಕೊಂಡಿದ್ದಾಳೆ. ಆದರೆ ಇದನ್ನು ನಿರಾಕರಿಸಿಯೂ ಇಲ್ಲ, ಅಥವಾ ಸಮ್ಮತಿಸಿಯೂ ಇಲ್ಲ. ʼಕೆಲವು ಸಂಗತಿಗಳನ್ನು ನೇರವಾಗಿ ಹೇಳಲಾಗುವುದಿಲ್ಲ, ಹೇಳಬೇಕಿಲ್ಲʼ ಎಂದಿದ್ದಾಳೆ. ಅಲ್ಲಿಗೆ ಆಕೆ ವಯಸ್ಕರ ಚಿತ್ರಗಳಿಗೆ ಹೋಗುವುದು ಖಚಿತ. ಹೋದರೆ ಏನಾಗುತ್ತೆ ಅಂದ್ರಾ? ಬಹುಶಃ ಆಕೆ ಸನ್ನಿ ಲಿಯೋನ್ ನಂತರದ ಭಾರತದ ಬಹು ಬೇಡಿಕೆಯ ನೀಲಿ ತಾರೆ ಆದರೂ ಆಗಬಹುದು.
ಇದರರ್ಥ ಏನು ಎಂದು ನೆಟಿಜೆನ್‌ಗಳು ಕೇಳ್ತಿದಾರೆ. ಹಾಗಾದರೆ ಅರ್ಚಿತಾ ನೀಲಿ ಚಿತ್ರಗಳಲ್ಲಿ ನಟಿಸ್ತಾಳಾ ಎಂಬುದೀಗ ನೆಟಿಜನ್‌ಗಳ ಮುಂದಿರುವ ಪ್ರಶ್ನೆ. ನಟಿಸಿದರೂ ಆಶ್ಚರ್ಯವಿಲ್ಲ. ಯಾಕೆಂದರೆ ಈಕೆಗೆ ಇದು ಹೊಸತಲ್ಲ. 2023ರಲ್ಲಿ, ಅಸ್ಸಾಮಿನ ಈಕೆ ತನ್ನ ಭೂತಕಾಲದ ಬಗ್ಗೆ ಬಾಯಿಬಿಟ್ಟು ಎಲ್ಲರನ್ನೂ ಆಘಾತಕ್ಕೀಡು ಮಾಡಿದಳು. ಹಿಂದೊಮ್ಮೆ ತಾನು ವೇಶ್ಯಾವಾಟಿಕೆ ಎಂಬ ಕರಾಳ ಜಗತ್ತಿನ ಭಾಗವಾಗಿದ್ದೆ ಎಂದಳು. ಆರು ವರ್ಷಗಳ ಕಾಲ ವೇಶ್ಯೆಯಾಗಿ ಕೆಲಸ ಮಾಡುವಂತೆ ತನ್ನನ್ನು ಮಾಡಲಾಯಿತು. ಕಡೆಗೆ 25 ಲಕ್ಷ ರೂಪಾಯಿಗಳನ್ನು ಪಾವತಿಸಿ ತನ್ನ ಸ್ವಾತಂತ್ರ್ಯವನ್ನು ಖರೀದಿಸಬೇಕಾಯಿತು ಎಂದು ಫುಕನ್ ಬಹಿರಂಗಪಡಿಸಿದ್ದಾಳೆ. ಆದರೆ ಆಕೆ ಯಾರಿಗೆ ಹಣವನ್ನು ಪಾವತಿಸಿದಳು ಅಥವಾ ವೇಶ್ಯಾವಾಟಿಕೆಗೆ ಹೋದದ್ದು ಹೇಗೆ ಎಂಬುದರ ಕುರಿತು ವಿವರಗಳನ್ನು ನೀಡಿಲ್ಲ.
40 ವರ್ಷ ವಯಸ್ಸು ದಾಟಿದರೂ ಮದುವೆಯಾಗದ ದಕ್ಷಿಣ ಭಾರತದ ನಟಿಯರು!
ಅರ್ಚಿತಾ ಫುಕನ್ ಅವಳ ಸಾಮಾಜಿಕ ಮಾಧ್ಯಮ ಖಾತೆಯ ಪ್ರಕಾರ, ಆಕೆ ಅಸ್ಸಾಂ ಮೂಲದವಳು ಆದರೆ ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಮತ್ತು ಎಕ್ಸ್‌ನಲ್ಲಿ ಸುಮಾರು 21,000 ಫಾಲೋವರ್ಸ್ ಹೊಂದಿದ್ದಾಳೆ. ನವೆಂಬರ್ 2022ರಲ್ಲಿ ತಾನು ಪ್ಲೇಬಾಯ್ ಲಿಂಗರೀ ಮಾಡೆಲ್ ಆಗಿ ಆಯ್ಕೆಯಾಗಿದ್ದೆ ಎಂದಿದ್ದಾಳೆ. ಕೆಲವೊಬ್ಬರು, ಇಂಥ ವ್ಯಕ್ತಿಯೇ ಅಸ್ತತ್ವದಲ್ಲಿಲ್ಲ ಅಂತಲೂ, ಇದೊಂದು ಎಐ ವಿರಚಿತ ವ್ಯಕ್ತಿ ಅಂತಲೂ ಭಾವಿಸಿದ್ದಾರೆ.
ನನಗೆ ಈಗಾಗಲೇ ಮದುವೆ ಆಗಿದೆ, ಗೌರಿ ಸ್ಪ್ರಾಟ್ ಜೊತೆಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಆಮೀರ್ ಖಾನ್ ಮಾತು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.