
ಆಮಿರ್ ಖಾನ್ ಅಭಿನಯಿಸಿದ ಇತ್ತೀಚಿನ ಸಿನಿಮಾ “ಸೀತಾರೆ ಜಮೀನ್ ಪರ್” ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಮೆಚ್ಚುಗೆ ಗಳಿಸಿದೆ. ಆರ್.ಎಸ್. ಪ್ರಸನ್ನ ನಿರ್ದೇಶನದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಚೆನ್ನಾಗಿ ಪ್ರದರ್ಶನ ನೀಡಿ, ಭಾರತದಲ್ಲಿ ರೂ. 150 ಕೋಟಿ ನಿವ್ವಳವಾಗಿ ಮತ್ತು ಜಾಗತಿಕವಾಗಿ ರೂ. 235 ಕೋಟಿ ಗಳಿಸಿದೆ. ವೈಯಕ್ತಿಕ ಜೀವನದಲ್ಲೂ ಆಮಿರ್ ಖಾನ್ ಸಂತೋಷದಲ್ಲಿದ್ದಾರೆ. ಅವರು ಈಗ ಗೌರಿ ಸ್ಪ್ರಾಟ್ ಜೊತೆ ಸಂಬಂಧದಲ್ಲಿದ್ದಾರೆ. ಲಗಾನ್ ನಟನಿಗೆ ಮೊದಲು ಇಬ್ಬರು ಪತ್ನಿಯರಿದ್ದರು. ಮೊದಲ ಪತ್ನಿ ರೀನಾ ದತ್ತಾ ಮತ್ತು ಎರಡನೆಯವರು ಕಿರಣ್ ರಾವ್. ಇಬ್ಬರ ಜೊತೆಗೂ ವಿಚ್ಛೇದನ ಆಗಿದ್ದರೂ, ಅವರಿಬ್ಬರ ಜೊತೆಗೆ ಉತ್ತಮ ಬಾಂಧವ್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಇತ್ತೀಚೆಗೆ ಇಂಡಿಯನ್ ಎಕ್ಸ್‌ಪ್ರೆಸ್ ಸ್ಕ್ರೀನ್‌ಗೆ ನೀಡಿದ ಸಂದರ್ಶನದಲ್ಲಿ, ಆಮಿರ್ ತಮ್ಮ ಮದುವೆ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಗೌರಿ ಮತ್ತು ನಾನು ಪರಸ್ಪರ ಗಂಭೀರವಾಗಿದ್ದೇವೆ. ನಾವು ಬದ್ಧತೆಯ ಸಂಬಂಧದಲ್ಲಿ ಇದ್ದೇವೆ. ನಾವು ಇಬ್ಬರೂ ಪಾಲುದಾರರು, ಒಟ್ಟಿಗೆ ಇದ್ದೇವೆ. ನನ್ನ ಹೃದಯದಲ್ಲಿ ಈಗಾಗಲೇ ಮದುವೆ ನಡೆದಿದೆ. ಅದನ್ನು ಔಪಚಾರಿಕಗೊಳಿಸಬೇಕೇ ಅಥವಾ ಬೇಡವೇ ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸುತ್ತೇವೆ ಎಂದಿದ್ದಾರೆ.
ಇನ್ನು ಚಿತ್ರರಂಗದ ಕೆಲಸಗಳ ಬಗ್ಗೆ ಮಾತನಾಡುತ್ತಾ ನಾನು ಆಗಸ್ಟ್ ತಿಂಗಳಿಂದ ಮಹಾಭಾರತದ ಮೇಲೆ ಕೆಲಸ ಆರಂಭಿಸುತ್ತಿದ್ದೇನೆ. ಅದು ಚಿತ್ರಗಳ ಸರಣಿಯಾಗಿ ಬರುತ್ತದೆ, ಏಕೆಂದರೆ ಒಂದೇ ಚಿತ್ರದಲ್ಲಿ ಮಹಾಭಾರತವನ್ನು ಹೇಳಲು ಸಾಧ್ಯವಿಲ್ಲ. ಮಹಾಭಾರತ ನನಗೆ ತುಂಬಾ ಹತ್ತಿರವಾದ ವಿಷಯ. ಅದನ್ನು ಹೇಳದೇ ನನ್ನಿಂದ ಇರಲು ಸಾಧ್ಯವಿಲ್ಲ. ಆದರೆ, ಅದರಲ್ಲಿ ಯಾವ ಪಾತ್ರವನ್ನು ನಾನು ಮಾಡುತ್ತೇನೆ ಎಂಬುದನ್ನು ನಾನು ಇನ್ನೂ ನಿರ್ಧರಿಸಿಲ್ಲ. ನನಗೆ ಹೊಸ ಮುಖಗಳು ಬೇಕು. ಪಾತ್ರಗಳೇ ಸ್ಟಾರ್‌ಗಳು ಎಂದು ನಾನು ನಂಬುತ್ತೇನೆ ಎಂದರು.
ಮಹಾಭಾರತಕ್ಕೂ ಮುನ್ನ ಆಮಿರ್ ಖಾನ್ ಇನ್ನೂ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 14ರಂದು ಬಿಡುಗಡೆಯಾಗುತ್ತಿರುವ ಲೋಕೇಶ್ ಕನಕರಾಜ್ ನಿರ್ದೇಶನದ ಮತ್ತು ರಜನಿಕಾಂತ್ ಅಭಿನಯದ “ಕೂಲಿ” ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. 2026ರ ಕೊನೆಯಲ್ಲಿ ಅವರು ಲೋಕೇಶ್ ಕನಕರಾಜ್ ಅವರೊಂದಿಗೆ ಮತ್ತೊಂದು ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲೂ ಕೆಲಸ ಮಾಡಲಿದ್ದಾರೆ. ಅದೇ ಸಮಯದಲ್ಲಿ, ಆಮಿರ್ ಖಾನ್ ದಾದಾಸಾಹೇಬ್ ಫಾಲ್ಕೆ ಅವರ ಜೀವನ ಚರಿತ್ರಾಧಾರಿತ ಚಿತ್ರಕ್ಕಾಗಿ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಜೊತೆ ಸಹಕಾರ ಮಾಡಲಿದ್ದಾರೆ. ಖಾನ್ ಮತ್ತು ಹಿರಾನಿ ಈ ಹಿಂದೆ ಬ್ಲಾಕ್‌ಬಸ್ಟರ್ ಚಿತ್ರಗಳಾದ “3 ಈಡಿಯಟ್ಸ್” ಮತ್ತು “ಪಿಕೆ” ನಿರ್ಮಿಸಿದ್ದವರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.