ಹಿಂದಿ ಸಿನಿಮಾ ಆಗಲಿದೆ ಇನ್‌ಫೋಸಿಸ್‌ ಸಕ್ಸಸ್‌ ಸ್ಟೋರಿ!

By Web Desk  |  First Published Aug 10, 2019, 10:47 AM IST

ಕನ್ನಡದ ಹೆಮ್ಮೆಯ ಜೋಡಿ ಇನ್‌ಫೋಸಿಸ್‌ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ. ಈ ಜೋಡಿ ಒಂದು ಸಂಸ್ಥೆಯನ್ನು ಕಟ್ಟಿಬೆಳೆಸಿದ ರೀತಿ, ಬದುಕುತ್ತಿರುವ ರೀತಿ ಕೋಟ್ಯಂತರ ಮಂದಿಗೆ ಮಾದರಿ. ಈ ಯಶಸ್ವಿ ಜೋಡಿಯ ಕಡೆಗೆ ಈಗ ಬಾಲಿವುಡ್‌ ಚಿತ್ತ ಹರಿದಿದೆ. ಬರಹಗಾರ್ತಿ, ನಿರ್ದೇಶಕಿ ಅಶ್ವಿನಿ ಅಯ್ಯರ್‌ ತಿವಾರಿ ಈಗ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಬಗ್ಗೆ ಚಿತ್ರ ಮಾಡಲು ಮುಂದಾಗಿದ್ದಾರೆ.


ಗೆದ್ದ ಈ ಜೋಡಿಯ ಬಗ್ಗೆ ಚಿತ್ರ ಮಾಡುವುದು ಸಾಮಾನ್ಯವಾದ ವಿಚಾರ ಎನ್ನಿಸಿದರೂ ಅಶ್ವಿನಿ ತಿವಾರಿ ಅವರು ಚಿತ್ರದಲ್ಲಿ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಲವ್‌ ಸ್ಟೋರಿಯನ್ನು ಮುಖ್ಯವಾಗಿ ಇರಿಸಿಕೊಳ್ಳುವ ಇರಾದೆ ಹೊಂದಿದ್ದಾರೆ ಎನ್ನುವುದು ಇಂಟರೆಸ್ಟಿಂಗ್‌.

ರಿಕ್ಷಾದಲ್ಲಿ ಸುಧಾ ಮೂರ್ತಿಗೆ ಪ್ರಪೋಸ್ ಮಾಡಿದ್ದ ಇನ್ಫೋಸಿಸ್ ಮಾಲೀಕ!

Tap to resize

Latest Videos

ಈಗಾಗಲೇ ಮೂರ್ತಿ-ಸುಧಾ ದಂಪತಿಗಳ ಬಗ್ಗೆ ಎಲ್ಲಾ ಅಗತ್ಯ ಮಾಹಿತಿಗಳನ್ನೂ ಕಲೆ ಹಾಕಿರುವ ನಿರ್ದೇಶಕಿ ಮುಂದಿನ ವರ್ಷದಲ್ಲಿ ಈ ಬಿಗ್‌ ಸಕ್ಸಸ್‌ ಜೋಡಿಯ ಪ್ರೇಮ ಪುರಾಣ, ಗೆಲುವಿನ ಹಾದಿ, ಬದುಕಿನ ತಿರುವುಗಳನ್ನು ತೆರೆಯ ಮೇಲೆ ತಂದು ತೋರಿಸಲಿದ್ದಾರೆ. ಇನ್ನೊಂದೆರಡು ತಿಂಗಳಿನಲ್ಲಿ ಪಾತ್ರಗಳೂ ಫೈನಲ್‌ ಆಗುವ ಸಾಧ್ಯತೆ ಇದೆ.

ರೈತ ಮಹಿಳೆಯಾದ ಇನ್ಫೋಸಿಸ್ ಮಖ್ಯಸ್ಥೆ ಸುಧಾಮೂರ್ತಿ

click me!