ಅಪ್ಪು ಜೊತೆ ನಟಿಸಿದ ಸ್ಯಾಂಡಲ್‌ವುಡ್‌ ಬ್ಯೂಟಿ ದಿಢೀರ್‌ ನಾಪತ್ತೆ! ಕುಡಿದು ಗಲಾಟೆ ಮಾಡಿದ ಬಳಿಕ ಎಲ್ಲಿ ಹೋದ್ರು ಅನು

Published : Nov 24, 2026, 07:59 PM IST
Puneeth Rajkumar and Anuradha Mehta

ಸಾರಾಂಶ

ಪುನೀತ್ ರಾಜ್‌ಕುಮಾರ್ ಮತ್ತು ನೆನಪಿರಲಿ ಪ್ರೇಮ್ ಅವರಂತಹ ನಾಯಕರೊಂದಿಗೆ ನಟಿಸಿದ್ದ ನಟಿ ಅನು ಮೆಹ್ತಾ 2008ರ ಹೊಂಗನಸು ಚಿತ್ರದ ನಂತರ ದಿಢೀರ್ ನಾಪತ್ತೆಯಾಗಿದ್ದಾರೆ. ಚೆನ್ನೈ ರೆಸಾರ್ಟ್ ವಿವಾದದ ನಂತರ ಅವರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಅವರ ಕಣ್ಮರೆಗೆ ಕಾರಣಗಳೇನು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಸೂಪರ್‌ ಸ್ಟಾರ್‌ಗಳಾದ ಪುನೀತ್‌ ರಾಜ್‌, ನೆನಪಿರಲಿ ಪ್ರೇಮ್‌ ಸೇರಿದಂತೆ ಹಲವು ನಟರ ಜೊತೆ ಗುರುತಿಸಿಕೊಂಡು, ಮನೆಮಾತಾಗಿದ್ದ ನಟಿ ಅನು ಮೆಹ್ತಾ (ಅನುರಾಧಾ ಮೆಹ್ತಾ) ದಿಢೀರ್‌ ಕಣ್ಮರೆಯಾಗಿ ವರ್ಷಗಳೇ ಗತಿಸಿ ಹೋಗಿವೆ. 2008ರ ಹೊಂಗನಸು ಕನ್ನಡ ಚಲನಚಿತ್ರದ ಬಳಿಕ ನಟಿ ಕಣ್ಮರೆಯಾಗಿದ್ದು, ಅವರೆಲ್ಲಿ ಇದ್ದಾರೆ ಎನ್ನುವ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ. ಒಮ್ಮೆ ಚೆನ್ನೈನ ರೆಸಾರ್ಟ್‌ನಲ್ಲಿ ಸ್ನೇಹಿತರ ಜೊತೆ ನಟಿ ತೆರಳಿದ್ದ ಸಂದರ್ಭದಲ್ಲಿ, ಅವರ ಸ್ನೇಹಿತರ ಜೊತೆ ಕುಡಿದು ರೆಸಾರ್ಟ್‌ನವರ ಜೊತೆ ಜಗಳ ಆಡಿದ್ದರು ಎನ್ನುವ ಸುದ್ದಿ ಭಾರಿ ಸದ್ದು ಮಾಡಿತ್ತು. ಆ ಸಂದರ್ಭದಲ್ಲಿ, ರೆಸಾರ್ಟ್ ಮ್ಯಾನೇಜರ್ ಇವರ ಸ್ನೇಹಿತರ ಮೇಲೆ ದೂರು ದಾಖಲು ಮಾಡಿದ್ದರು. ಆ ಘಟನೆ ಬಳಿಕ ಅನು ನಾಪತ್ತೆಯಾಗಿದ್ದು, ಅವರು ಎಲ್ಲಿದ್ದಾರೆ ಎನ್ನುವ ಬಗ್ಗೆ ಈಗ ಚರ್ಚೆ ಶುರುವಾಗಿದೆ.

ಅಂದಹಾಗೆ, ಅನು ಮೆಹ್ತಾ ಆಂಧ್ರ ಪ್ರದೇಶದ ಮೂಲಕವರು. ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಫೇಮಸ್‌ ಆಗಿದ್ದ ನಟಿ ಮೊದಲ ಬಾರಿಗೆ ನಟಿಸಿದ್ದ ಸಿನಿಮಾ 'ಆರ್ಯ'. 2004ರಲ್ಲಿ ತೆರೆಕಂಡ ಈ ಸಿನಿಮಾವನ್ನು ಮೊದಲ ಬಾರಿಗೆ ಸುಕುಮಾರ್ ನಿರ್ದೇಶನ ಮಾಡಿದ್ದರು. ಅಲ್ಲು ಅರ್ಜುನ್ ಜೊತೆಗೆ ಅನು ಮೆಹ್ತಾ, ಶಿವ ಬಾಲಾಜಿ ಈ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಹಾಡುಗಳು ಇಂದಿಗೂ ಕೂಡ ಪ್ರಸ್ತುತ. ಈ ಸಿನಿಮಾ ಅಲ್ಲುಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಈ ಚಿತ್ರದಲ್ಲಿ ಅವರ ಡಾನ್ಸ್, ಮ್ಯಾನರಿಸಂ ಎಲ್ಲವೂ ಯುವಜನತೆಯನ್ನು ಸೆಳೆದಿತ್ತು. ಈ ಚಿತ್ರ ಎಷ್ಟು ಹಿಟ್ ಆಯ್ತು ಅಂದರೆ ಬೆಂಗಾಳಿ, ಓಡಿಯಾ, ಸಿಂಹಳ, ತಮಿಳಿನಲ್ಲಿಯೂ ಈ ಚಿತ್ರವನ್ನು ತಯಾರಿಸಿ ರಿಲೀಸ್ ಮಾಡಲಾಯ್ತು. ಅಲ್ಲು ಅರ್ಜುನ್ ಅಭಿನಯದೊಂದಿಗೆ 'ಆರ್ಯ 2' ಕೂಡ ಬಂತು. ದಿಲ್ ರಾಜು ಈ ಚಿತ್ರ ನಿರ್ಮಿಸಿದ್ದರು. ಇದನ್ನು ಮಣಿರತ್ನಂ ಅವರ ಸಿನಿಮಾಕ್ಕೂ ಕೂಡ ಹೋಲಿಕೆ ಮಾಡಲಾಯ್ತು. ಎಮೋಶನ್, ಸೆಂಟಿಮೆಂಟ್, ಕ್ರೀಜಿನೆಸ್, ಸಾಹಸ, ಲವ್ ಮುಂತಾದ ಅಂಶಗಳನ್ನು ಹೊಂದಿರುವ ಫುಲ್ ಪವರ್ ಪ್ಯಾಕ್ ಸಿನಿಮಾ 'ಆರ್ಯ' ಎಂದು ಬಣ್ಣಿಸಲಾಯ್ತು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿತು.

ಅನಿರೀಕ್ಷಿತವಾಗಿ ಸಿನಿಮಾಕ್ಕೆ

ದೆಹಲಿಯಲ್ಲಿಯೇ ಓದಿ, ಮಾಡೆಲ್ ಆಗಿದ್ದ ಅವರು ಅನಿರೀಕ್ಷಿತವಾಗಿ ಸಿನಿಮಾಕ್ಕೆ ಬಂದವರು. ತೆಲುಗು ಮತ್ತು ಕನ್ನಡದಲ್ಲಿ ನಟಸಿದರು. . ಇವರ ಎರಡನೇ ಸಿನಿಮಾ 'ನುವ್ವಂಟೆ ನಾಕಿಷ್ಟಂ'. ಈ ಚಿತ್ರದಲ್ಲಿ ಆರ್ಯನ್ ರಾಜೇಶ್ ಹೀರೋ ಆಗಿ ನಟಿಸಿದ್ದರು. 2005ರಲ್ಲಿ ತೆರೆ ಕಂಡ ಈ ಸಿನಿಮಾ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ನೀನಂದ್ರೆ ಇಷ್ಟ' ಸಿನಿಮಾದ ರಿಮೇಕ್ ಆಗಿತ್ತು. ಇವರ ನಟನೆ ನೋಡಿ ಸಾಕಷ್ಟು ಅವಕಾಶಗಳು ಕೂಡ ಅರಸಿ ಬಂದಿದ್ದವರು.

ಅನು ಮೆಹ್ತಾ ಮೂರನೇ ಸಿನಿಮಾ 'ಅಜಯ್'. ಮೂರನೇ ಚಿತ್ರದ ಮೂಲಕ ಅನು ಕನ್ನಡಕ್ಕೂ ಕಾಲಿಟ್ಟರು. ಈ ಚಿತ್ರದ ಹೀರೋ ಪುನೀತ್ ರಾಜ್‌ಕುಮಾರ್. ತೆಲುಗು ಸಿನಿಮಾ 'ಒಕ್ಕುಡು'ದ ರಿಮೇಕ್ ಆಗಿತ್ತು. 'ಒಕ್ಕುಡು'ನಲ್ಲಿ ಮಹೇಶ್ ಬಾಬು, ಭೂಮಿಕಾ ಚಾವ್ಲಾ ನಟಿಸಿದ್ದರು. ಈ ಚಿತ್ರ ಕೂಡ ಒಳ್ಳೆಯ ಯಶಸ್ಸು ಪಡೆದಿತ್ತು. ಪ್ರಕಾಶ್ ರಾಜ್, ಶ್ರೀನಾಥ್, ದೊಡ್ಡಣ್ಣ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು. ಕನ್ನಡಿಗರು ಈ ಚಿತ್ರದ ಮೂಲಕ ಅನುರನ್ನು ಸ್ಯಾಂಡಲ್‌ವುಡ್‌ ನಟಿಯಂತೆ ಭಾವಿಸಿದರು. ಸಹಜವಾಗಿ, ಸೈಲೆಂಟ್ ಆಗಿರುವ ಪಾತ್ರಗಳಲ್ಲಿಯೇ ಅನು ಮಿಂಚಿರೋದು ಆಶ್ಚರ್ಯ. ಅನು ಮಾಡಿರುವ ಪಾತ್ರಗಳಲ್ಲಿ ಹಲವು ಸಾಂಪ್ರದಾಯಿಕವುಳ್ಳವಾಗಿವೆ. ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆದವು.

ವಿವಿಧ ಸಿನಿಮಾಗಳಲ್ಲಿ ನಟನೆ

ಅನು ಆಮೇಲೆ ತೆಲುಗಿನಲ್ಲಿ 'ಮಹರಾಜಶ್ರೀ', 'ವೇದುಕ' ಸಿನಿಮಾದಲ್ಲಿ ನಟಿಸಿದರು. ಆಮೇಲೆ ಕನ್ನಡದಲ್ಲಿ 'ಹೊಂಗನಸು' ಸಿನಿಮಾದಲ್ಲಿ ನಟಿಸಿದರು. ಈ ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಹೀರೋ ಆಗಿದ್ದರು. ಈ ಚಿತ್ರದಲ್ಲಿ ಅನಂತ್‌ನಾಗ್ ಕೂಡ ತುಂಬ ಮುಖ್ಯವಾದ ಪಾತ್ರ ನಿಭಾಯಿಸಿದ್ದರು. 'ಗಜ', 'ಗಾಳಿಪಟ' ಸಿನಿಮಾ ಬ್ಲಾಕ್ ಬಸ್ಟರ್ ಆದ ವಾರದ ನಂತರದಲ್ಲಿ ಈ ಚಿತ್ರ ರಿಲೀಸ್ ಆದರೂ ಕೂಡ ಥೀಯೇಟರ್‌ನಲ್ಲಿಯೂ ಜಾಸ್ತಿ ದಿನ ಉಳಿಯಲಿಲ್ಲ, ಒಳ್ಳೆಯ ವಿಮರ್ಶೆ ಕೂಡ ಪಡೆಯಲಿಲ್ಲ. 'ನಾದಬ್ರಹ್ಮ' ಹಂಸಲೇಖ ಈ ಚಿತ್ರಕ್ಕೆ ಸಂಗೀತ ನೀಡಿದ್ದರು. ಇದು ಬ್ಲಾಕ್ ಬಸ್ಟರ್ ಆಗದೆ ಡಿಸಾಸ್ಟರ್ ಆಗಿದ್ದು ಮಾತ್ರ ಬೇಸರದ ವಿಷಯ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ಚಂದ್ರಮುಖಿ’ ಚಿತ್ರಕ್ಕೆ ಜ್ಯೋತಿಕಾ ಮೊದಲ ಆಯ್ಕೆ ಆಗಿರಲಿಲ್ಲ...3 ದಿನ ಶೂಟಿಂಗ್ ಬಳಿಕ ಸಿಮ್ರಾನ್ ಏಕಾಏಕಿ ಔಟ್ ಆಗಿದ್ದೇಕೆ?
ನಾನು ಶ್ರೀರಾಮಚಂದ್ರ, ನನ್ನ ಹುಡುಗಿ ಹೀಗಿರಬೇಕು: ಕನಸಿನ ಕನ್ಯೆ ಕುರಿತು ಗೌರಿ ಪುತ್ರ ಹೀರೋ ರಿತ್ವಿಕ್‌ ಓಪನ್​ ಟಾಕ್​