
ಕೇಳುಗರಿಂದ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ ಎಂಬುದು ಚಿತ್ರತಂಡದ ಸಂಭ್ರಮದ ಮಾತು. ಈಗಾಗಲೇ ಚಿತ್ರದ ಪೋಸ್ಟರ್‌ಗಳಿಂದ ಸಾಕಷ್ಟುಗಮನ ಸೆಳೆದಿರುವ ವಸಿಷ್ಠ ಸಿಂಹ ಅವರು ಈ ಚಿತ್ರದ ಟೀಸರ್ ಕೂಡ ದೊಡ್ಡ ಮಟ್ಟದಲ್ಲಿ ವೀಕ್ಷಣೆ ಆಗಿದ್ದು, ಹಾಡುಗಳಿಗೂ ಇದೇ ರೀತಿ ಪ್ರತಿಕ್ರಿಯೆ ಬರಲಿದೆ ಎನ್ನುವ ಭರವಸೆಯಲ್ಲಿದೆ ಚಿತ್ರತಂಡ. ಲಾಕ್‌ಡೌನ್‌ಗೂ ಮೊದಲೇ ಸುದೀಪ್ ಅವರ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದರು.
ಮೊಬೈಲ್ ಬಳಸದ ನಟನಿಗೆ ಹುಡುಗಿಯರು ಪ್ರಪೋಸ್ ಮಾಡೋದ್ಹೇಗೆ? ಈ ವಿಡಿಯೋ ನೋಡಿ!
ರಶ್ಮಿ ಫಿಲಂಸ್ ಮೂಲಕ ರಶ್ಮಿ ಕೆ ಅವರು ನಿರ್ಮಿಸಿರುವ ‘ಕಾಲಚಕ್ರ’ ಚಿತ್ರದ ‘ತರಗೆಲೆ’ ಹಾಡಿಗೆ ಕೇಳುಗರಿಂದ ಮೆಚ್ಚುಗೆ ಸಿಗುತ್ತಿದೆ. ಸಂತೋಷ್ ನಾಯಕ್ ಈ ಹಾಡನ್ನು ರಚನೆ ಮಾಡಿದ್ದು, ಗಾಯಕ ಕೈಲಾಶ್ ಕೇರ್ ಅವರ ಕಂಠದಲ್ಲಿ ಹಾಡಿನ ಸಾಲುಗಳು ಮೂಡಿ ಬಂದಿವೆ. ಗುರುಕಿರಣ್ ಅವರು ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಹಿಂದೆ ‘ನಾಣಿ’ ಹೆಸರಿನ ಚಿತ್ರವನ್ನು ನಿರ್ದೇಶಿಸಿದ ಸುಮಂತ್ ಕ್ರಾಂತಿ ಅವರ ಎರಡನೇ ಸಿನಿಮಾ ಈ ‘ಕಾಲಚಕ್ರ’. ವಸಿಷ್ಠ ಸಿಂಹ ಅವರು ಇಲ್ಲಿ ಎರಡು ರೀತಿಯ ಪಾತ್ರ ಮಾಡುತ್ತಿದ್ದಾರೆ. ವಯಸ್ಸಾದ ಅಜ್ಜನಾಗಿ, ಈಗಿನ ಯಂಗ್ ಜನರೇಷನ್ ಪಾತ್ರ ಅವರಿಗೆ ಸಾಕಷ್ಟುಹೆಸರು ತಂದುಕೊಡುತ್ತದೆಂಬ ನಂಬಿಕೆ ನಿರ್ದೇಶಕರದ್ದು. ಸೈಕಲಾಜಿಕಲ… ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಎಲ… ಎಂ ಸೂರಿ ಛಾಯಾಗ್ರಹಣ, ಬಿ ಎ ಮಧು ಸಂಭಾಷಣೆ ಈ ಚಿತ್ರಕ್ಕಿದೆ. ರಕ್ಷ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.