
ಬೆಂಗಳೂರು: ಕಿರಿಕ್ ಪಾರ್ಟಿ ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿ ತಮ್ಮ 'ಪರಂವಾ ಸ್ಟುಡಿಯೋ' ಮೂಲಕ ನಿರ್ಮಿಸುತ್ತಿರುವ '777 ಚಾರ್ಲಿ' ಚಿತ್ರದಲ್ಲಿ ನಟಿಸಲು ಅವಕಾಶವೊಂದಿದೆ.
ಕಿರಣ್ ರಾಜ್ ನಿರ್ದೇಶನದ ಈ ಚಿತ್ರದಲ್ಲಿ ನಟಿಸಲು, ಚಿತ್ರ ತಂಡ ನಟ, ನಟಿಯರ ಹುಡುಕಾಟದಲ್ಲಿದ್ದು, ಆಸಕ್ತರು ತಮ್ಮ ಭಾವಚಿತ್ರ ಹಾಗೂ ವೀಡಿಯೋಗಳನ್ನು ಕಳುಹಿಸಬಹುದು.
ಈ ಬಗ್ಗೆ ಫೇಸ್‌ಬುಕ್ ಸ್ಟೇಟಸ್ ಹಾಕಿರುವ ರಕ್ಷಿತ್, 'contact@777charlie.com'ಗೆ ಮೇಲ್ ಮಾಡಬಹುದು ಎಂದಿದ್ದಾರೆ. ಅಥವಾ ಫೇಸ್‌ಬುಕ್ ಪೇಜ್ 777 Charlieಗೆ ಮೆಸೇಜ್ ಕಳುಹಿಸಬಹುದೆಂದು ತಿಳಿಸಲಾಗಿದೆ. ಅಂದಹಾಗೆ ಡಿ.31 ನಿಮ್ಮ ಪ್ರೊಫೈಲ್ ಕಳುಹಿಸಲು ಕಡೆಯ ದಿನ.
ಚಾರ್ಲಿ ನಾಯಿಯಾಗಿದ್ದು, ಈ ಶ್ವಾನದ ಮೇಲಿನ ಕಥಾ ಹಂದರ ಇರುವ ಚಿತ್ರವಿದೆ ಎಂದು ಹೇಳಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.