
ಬೆಂಗಳೂರು: ಬಿಗ್ ಬಾಸ್ ಮನೆಗೆ ಹೋಗಿ ವಾರ ಎರಡಾಗಿಲ್ಲ, ನಟಿ ಸಂಯುಕ್ತಾ ಹೆಗಡೆ ಮಾಡಿದ ಕಿರಿಕ್ ಅಷ್ಟಿಷ್ಟಲ್ಲ. ಸಹಸ್ಪರ್ಧಿ ಸಮೀರ್ ಆಚಾರ್ಯ ಮೇಲೆ ಈಕೆ ಕೈ ಮಾಡಿದ್ದು, ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಕಲಾವಿದರೂ ಸಂಯುಕ್ತಾ ವರ್ತನೆಯನ್ನು ಖಂಡಿಸಿದ್ದು, ಹಿರಿಯ ನಟ ಜಗ್ಗೇಶ ಸಹ ಸಂಯುಕ್ತಾಳೊಂದಿಗೆ, ಪೋಷಕರೂ ಮಕ್ಕಳಿಗೆ ಯಾವ ಸಂಸ್ಕಾರ ಕಲಿಸಬೇಕೆಂದು ಬುದ್ಧಿ ಹೇಳಿದ್ದಾರೆ.
ಗುರುಹಿರಿಯರು,ಸಮಾಜಕ್ಕೆ ಗೌರವ ಕೊಡುವ ಗುಣವನ್ನು ಮಕ್ಕಳಿಗೆ ಬಾಲ್ಯದಿಂದಲೇ ಪೋಷಕರು ಕಲಿಸಬೇಕು! ಬಾಲ್ಯದಲ್ಲಿ ನಾನು ಏಕವಚನ ಪ್ರಯೋಗಿಸಿದ್ದಕ್ಕೆ ನನ್ನ ತಂದೆ ಸಾರ್ವಜನಿಕವಾಗಿ ಅವರ ಬೂಟಲ್ಲಿ ಹೊಡೆದಿದ್ದರು! ಅಂದಿನ ಭಯ ಈಗಲೂ ನನ್ನನ್ನು ಎಚ್ಚರಿಸಿದೆ! ಆ ಕ್ಷಣದಲ್ಲಿ ಕೋಪ ಬಂದರೂ, ಇಂದು ತಂದೆ ಮಾಡಿದ್ದು ಸರಿ ಎನಿಸುತ್ತಿದೆ, ನನ್ನ ಮಕ್ಕಳಿಗೆ ಆಸ್ತಿಗಿಂತ ಉತ್ತಮ ನಡೆ ಕಲಿಸಿದೆ,' ಎಂದು ಟ್ವೀಟ್ ಮಾಡಿದ್ದಾರೆ.
ಶ್ರೀ ಸಾಮಾನ್ಯನಾಗಿ ಬಿಗ್ ಬಾಸ್ ಮನೆ ಪ್ರವೇಶ ಪಡೆದ ಸಮೀರ ಆಚಾರ್ಯ ಅವರ ನಡೆಗೆ ಎಲ್ಲರಿಂದಲೂ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಚಾರ್ಯ ಅವರ ಸಹನೆಗೆ ಭೇಷ್ ಎಂದ ಜಗ್ಗೇಶ್ ಮತ್ತೊಂದು ಟ್ವೀಟ್‌ನಲ್ಲಿ, 'ಆಚಾರ್ಯರ ತಾಳ್ಮೆ ನೋಡಿ ಇದ್ದ ಅಲ್ಪ ಕೋಪದ ಗುಣ ನನ್ನಿಂದ ದೂರವಾಯಿತು! ಅವರ ಮೇಲೆ ಕೈ ಮಾಡಿದ ನಟಿ ಕ್ಷಮೆಗೆ ಅನರ್ಹ! ಸ್ತ್ರೀ ಕುಲಕ್ಕೆ ಈಕೆ ಕಳಂಕ! ಬಹುಶಃ ಈಕೆ ಬೆಳೆದ ವಾತಾವರಣ ಸರಿಯಿಲ್ಲ!' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಮನೆಗೆ ಪ್ರವೇಶಿಸಿದಾಗಿನಿಂದಲೂ ಸಹ ಸ್ಪರ್ಧಿಗಳ ವಿರುದ್ಧ ಸಂಯುಕ್ತಾ ಹರಿಹಾಯುತ್ತಲೇ ಇದ್ದಾಳೆ. ಈ ನಟಿಯ ವರ್ತನೆ ಬಗ್ಗೆ 'ವೀಕೆಂಡ್ ವಿತ್ ಕಿಚ್ಚ'ದಲ್ಲಿ ಸುದೀಪ್ ಸಹ ಸೂಚ್ಯವಾಗಿ ತಿದ್ದಿಕೊಳ್ಳಲು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.