
ಅಮೃತಧಾರೆ ಸೀರಿಯಲ್ (Amruthadhaare Serial) ಅಂತ್ಯ ಕಾಣುತ್ತಿದೆ. ಇದಾಗಲೇ ಸಾಕಷ್ಟು ಬಾರಿ ಈ ಸೀರಿಯಲ್ ಅಂತ್ಯವಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ ಹಲವಾರು ಬಾರಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ತಂದು ಸೀರಿಯಲ್ ಮುಂದೂಡಲಾಗಿತ್ತು. ಇದಕ್ಕೆ ಕಾರಣ, ಈ ಸೀರಿಯಲ್ ಟಿಆರ್ಪಿ ಹೆಚ್ಚಿಗೆ ಇದ್ದುದು.ಕೊನೆಯವರೆಗೂ ಜನರನ್ನು ಹಿಡಿದಿಟ್ಟುಕೊಂಡ ಕೆಲವೇ ಕೆಲವು ಸೀರಿಯಲ್ಗಳಲ್ಲಿ ಅಮೃತಧಾರೆಯೂ ಒಂದು. ಇದೀಗ ಇದರ ಅಂತ್ಯವಾಗುತ್ತಿದೆ ಎನ್ನುವುದು ತಿಳಿದರೂ, ನಿರ್ದೇಶಕರು ಇದನ್ನು ಮತ್ತಷ್ಟು ಮುಂದೂಡಬಹುದು ಎನ್ನುವ ಗುಮಾನಿ ಕೂಡ ಜನರಲ್ಲಿ ಇತ್ತು.
ಆದರೆ ಇದೀಗ ಖುದ್ದು ಡುಮ್ಮಾ ಸರ್, ಗೌತಮ್ ದಿವಾನ್ ಎಂದೇ ಫೇಮಸ್ ಆಗಿರುವ ನಟ ರಾಜೇಶ್ ನಟರಂಗ (Rajesh Nataranga) ಅವರು ಲೈವ್ನಲ್ಲಿ ಬಂದು ಸೀರಿಯಲ್ ಮುಗಿಯುತ್ತಿರುವ ಬಗ್ಗೆ ತಿಳಿಸಿದ್ದಾರೆ. ನಿನ್ನೆ ಅಮೃತಧಾರೆ ಸೀರಿಯಲ್ ಚಿತ್ರೀಕರಣ ಮುಗಿದಿದೆ. ಎಲ್ಲವೂ ಎಕ್ಸ್ಪೈರಿ ಡೇಟ್ ಒಂದಿಗೆ ಇರುತ್ತದೆ. ಹಾಗಾಗಿ ಅಮೃತಧಾರೆ ಸೀರಿಯಲ್ ಎಕ್ಸ್ಪೈರಿ ಡೇಟ್ ಕೂಡ ಫಿಕ್ಸ್ ಆಗಿದೆ. ಇನ್ನು ಕೆಲವೇ ಕಂತುಗಳು ಇವೆ ಎಂದು ನಟ ರಾಜೇಶ್ ನಟರಂಗ ತಿಳಿಸಿದ್ದಾರೆ.
ಯಾರು ಕೂಡ ಬೇಜಾರು ಮಾಡಿಕೊಳ್ಳಬೇಡಿ. ನೀವು ಸೀರಿಯಲ್ ಬದುಕಿಸಿದ್ದ ರೀತಿಗೆ ನಾನು ಋಣಿ. ರಾಜೇಶ ನಟರಂಗ ಆಗಿ ನಾನು ಮೊದಲೂ ಆ್ಯಕ್ಟ್ ಮಾಡಿದ್ದೆ ನಿಜ. ಆದರೆ ಕಳೆದ ಮೂರೂವರೆ ವರ್ಷಗಳಿಂದ ಗೌತಮ್ ದಿವಾನ್ ಆಗಿ ನನ್ನನ್ನು ಬದುಕಿಸಿದ ಗೌತಮ್ಗೆ ಧನ್ಯವಾದ. ಈ ಸೀರಿಯಲ್ನ ಎಲ್ಲಾ ಹಿರಿ-ಕಿರಿಯ ಕಲಾವಿದರಿಗೆ ಧನ್ಯವಾದ. ಮುಖ್ಯವಾಗಿ ಭೂಮಿಕಾ ಪಾತ್ರ ಮಾಡಿದ ಛಾಯಾ ಸಿಂಗ್ ಅವರಿಗೂ ಧನ್ಯವಾದ ಎಂದಿದ್ದಾರೆ ನಟ ರಾಜೇಶ್ ನಟರಂಗ. 20 ವರ್ಷಗಳ ಮೇಲೆ ಇಷ್ಟು ಸುದೀರ್ಘ ಕಿರುತೆರೆಯ ಪ್ರಯಾಣ ಮಾಡುತ್ತೇನೆ ಎಂದು ನನಗೂ ಅನ್ನಿಸಿರಲಿಲ್ಲ. ಜನ ನನ್ನನ್ನು ಹೇಗೆ ಸ್ವೀಕರಿಸುತ್ತಾರೆಯೋ ಎನ್ನುವ ಭಯವಿತ್ತು. ಆದರೆ ತುಂಬಾ ಪ್ರೀತಿ ಕೊಟ್ಟಿರುವುದಕ್ಕೆ ಮಾತುಗಳೇ ಇಲ್ಲ ಎಂದಿದ್ದಾರೆ.
ಐದಾರು ಸೆಕೆಂಡ್ಗಳ ರೀಲ್ಸ್ನ ಈ ಕಾಲದಲ್ಲಿ, 20 ಲಕ್ಷಕ್ಕೂ ಹೆಚ್ಚು ಸೆಕೆಂಡ್ ನಮ್ಮ ಜೊತೆ ಕಳೆದಿದ್ದೀರಿ. ನಿಮ್ಮ ಆಯಸ್ಸಿನ ಭಾಗವನ್ನು ನಮಗೆ ಕೊಟ್ಟಿದ್ದೀರಿ. ಚೆನ್ನಾಗಿದ್ದಾಗ ಹೊಗಳಿದ್ದೀರಿ, ಇಲ್ಲದಾಗ ಬೈದಿದ್ದೀರಿ, ಟೀಕೆ ಮಾಡಿದ್ದೀರಿ. ಎಲ್ಲರೂ ನಮಗೆ ಪಾಠ ಕಲಿಸಿದ್ದೀರಿ. ಹೊರ ರಾಜ್ಯಗಳಿಂದ ಮಾತ್ರವಲ್ಲದೆ ಹೊರ ದೇಶಗಳಿಂದಲೂ ಜನರು ಪ್ರೀತಿ ಕೊಟ್ಟಿದ್ದಾರೆ. ಮೆಸೇಜ್ ಮಾಡಿದ್ದಾರೆ. ಇಷ್ಟು ದೊಡ್ಡ ಪ್ರೀತಿ ಕೊಟ್ಟಿದ್ದಕ್ಕೆ ಧನ್ಯವಾದ ಎಂದಿದ್ದಾರೆ ನಟ. ಅದೇ ರೀತಿ ಇನ್ನೊಂದು ಪ್ರಾಜೆಕ್ಟ್ ಜೊತೆ ಮರಳಿ ಬರುವೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.