
ಅಮೃತಧಾರೆ ಸೀರಿಯಲ್ (Amruthadhaare Serial) ಮೂಲಕ ಎಲ್ಲರ ಮನೆಮಾತಾಗಿದ್ದ ಡುಮ್ಮಾ ಸರ್ ಗೌತಮ್ ದಿವಾನ್ ಅರ್ಥಾತ್ ರಾಜೇಶ್ ನಟರಂಗ ಅವರನ್ನು ಪ್ರತಿನಿತ್ಯವೂ ನೋಡುತ್ತಿದ್ದ ವೀಕ್ಷಕರಿಗೆ ಈಗ ತುಂಬಾ ಬೇಸರವಾಗಿದೆ. ಅಮೃತಧಾರೆ ಸೀರಿಯಲ್ ಮುಗಿಯುತ್ತಿದ್ದಂತೆಯೇ ಗೌತಮ್-ಭೂಮಿಕಾರನ್ನು ವೀಕ್ಷಕರು ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ಸೀರಿಯಲ್ಗೆ ಕೊಟ್ಟಿರುವ ಪ್ರೀತಿ ನೋಡಿ, ಅಮೃತಧಾರೆ ಪಾರ್ಟ್-2 ಬರುತ್ತದೆ ಎಂದು ಇದಾಗಲೇ ಅನೌನ್ಸ್ ಕೂಡ ಮಾಡಿಯಾಗಿದೆ. ಆದರೆ ಅದು ಯಾವಾಗ, ಎತ್ತ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಇದರ ನಡುವೆಯೇ ನಟ ರಾಜೇಶ್ ನಟರಂಗ ಅವರು ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿರುವ ವೆಬ್ ಸಿರೀಸ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ಹೆಸರು ಪೊಲೀಸ್ ಫೈಲ್ಸ್ (Police Files). ಹಾಗೆಂದು ಈ ವೆಬ್ ಸಿರೀಸ್ ಅಮೃತಧಾರೆ ಮುಗಿದ ಮೇಲೆ ಮಾಡಿದ ಚಿತ್ರೀಕರಣವಲ್ಲ. ಬದಲಿಗೆ ಇದು ಆಗಿದ್ದು 2024ರಲ್ಲಿ. ಆದರೆ ಅಮೃತಧಾರೆಯ ಬಳಿಕ ನಟ ರಾಜೇಶ್ ನಟರಂಗ ಅವರ ಜನಪ್ರಿಯತೆ ಇನ್ನೂ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಹುಡುಕುತ್ತಿರುವವರ ಸಂಖ್ಯೆಯೂ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಹಳೆಯ ವೆಬ್ ಸಿರೀಸ್ ಈಗ ಮತ್ತೆ ವೈರಲ್ ಆಗುತ್ತಿದೆ. ಈ ಸಿರೀಸ್ ನೋಡದವರು ಮತ್ತೊಮ್ಮೆ ನೋಡುವಂತೆ ಮಾಡುತ್ತಿದೆ.
ಇದರ ಹೆಸರು ಪೊಲೀಸ್ ಫೈಲ್ಸ್. ಇದರಲ್ಲಿ ರಾಜೇಶ್ ನಟರಂಗ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೂರಜ್ ಬೋಳಾರ್ ನಿರ್ದೇಶನದ ಈ ವೆಬ್ ಸರಣಿ 2024ರಲ್ಲಿ ಬಿಡುಗಡೆಯಾಗಿದೆ. ರಾಜೇಶ್ ನಟರಂಗ ಅವರ ಜೊತೆ, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಬಾಲ ರಾಜವಾಡಿ, ರಘು ಪಾಂಡೇಶ್ವರ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
ಇದರ ಚುಟುಕು ಕಥೆ ಹೇಳುವುದಾದರೆ, ನಿವೃತ್ತಿಯ ಅಂಚಿನಲ್ಲಿರುವ, ಸ್ವಂತ ನಿರ್ಧಾರ ಕೈಗೊಳ್ಳುವ ಪೊಲೀಸ್ ಇನ್ಸ್‌ಪೆಕ್ಟರ್ ಹೊಸ ಠಾಣೆಗೆ ವರ್ಗಾವಣೆಯಾಗುತ್ತಾರೆ. ಆ ಠಾಣೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 'ಪನಿಷ್ಮೆಂಟ್ ಪೋಸ್ಟಿಂಗ್' ಮೇಲೆ ಬಂದ ಸಿಬ್ಬಂದಿ ಇರುತ್ತಾರೆ. ಅಲ್ಲಿ ಏನೇನು ನಡೆಯುತ್ತದೆ ಎನ್ನುವ ಕುತೂಹಲ ಇದರಲ್ಲಿದೆ. ಈ ಸರಣಿಯ ಸಂಚಿಕೆಗಳು ಮತ್ತು ತುಣುಕುಗಳು ಟಾಕೀಸ್ ಕನ್ನಡ (Talkies Kannada) ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು, ಹೆಚ್ಚಿನ ವಿವರಗಳನ್ನು Police File ಪುಟದಲ್ಲಿ ಮತ್ತು POLICE FILE ಪ್ಲೇಲಿಸ್ಟ್‌ನಲ್ಲಿ ವೀಕ್ಷಿಸಬಹುದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.