
ಅಮೃತಧಾರೆಯಲ್ಲಿ (Amruthadhaare) ಇದೀಗ ಭಾರಿ ಟ್ವಿಸ್ಟ್ ಬಂದಿದೆ. ಯಾರೂ ಊಹಿಸದ ತಿರುವಿನಲ್ಲಿ ಸೀರಿಯಲ್ ಸಾಗಿದೆ. ಗಂಡನ ಮೇಲೆ ನೊಂದು ಭೂಮಿಕಾ ಮನೆಬಿಟ್ಟಾಗಿದೆ. ಭೂಮಿಕಾಳ ಜೊತೆ ಮಲ್ಲಿಯೂ ಬಂದಿದ್ದಾಳೆ. ಭೂಮಿಕಾಳನ್ನು ಹುಡುಗಿ ಗೌತಮ್ ಎಲ್ಲಾ ಆಸ್ತಿ ಕೊಟ್ಟು ಮನೆಬಿಟ್ಟು ಡ್ರೈವರ್ ಆಗಿದ್ದಾನೆ. ಇದರ ನಡುವೆಯೇ ಐದು ವರ್ಷ ಕಳೆದೇ ಹೋಗಿದೆ. ಡುಮ್ಮಾ ಸರ್ ಗೌತಮ್ ಮಗ ಮರಿಡುಮ್ಮ ಆಕಾಶ್ ಈಗ ಸಕತ್ ತರ್ಲೆ ಆಗಿದ್ದಾನೆ. ಆಗಾಗ್ಗೆ ಅಪ್ಪ-ಮಗನ ಭೇಟಿ ಆಗುತ್ತಿದ್ದರೂ, ಒಂದೇ ಊರಿನಲ್ಲಿ ಗೌತಮ್- ಭೂಮಿಕಾ ಇದ್ದರೂ, ಎಷ್ಟೋ ಸಲ ಅಕ್ಕ-ಪಕ್ಕದಲ್ಲಿಯೇ ಇದ್ದರೂ ಒಬ್ಬರನ್ನು ಒಬ್ಬರು ನೋಡಿಲ್ಲ. ಆದರೆ ಅಪ್ಪ-ಮಗ ಇದಾಗಲೇ ಹಲವು ಸಲ ಮೀಟ್ ಆಗಿದ್ರೂ ಇಬ್ಬರಿಗೂ ಅಸಲಿಯತ್ತು ಗೊತ್ತಿಲ್ಲ.
ಹೀಗೆ ಸಾಗಿದೆ Amruthadhaare Serial. ಅದರ ನಡುವೆಯೇ ಈಗ ಸೀರಿಯಲ್ನಲ್ಲಿ ಗಮನ ಸೆಳೆಯುತ್ತಿರುವುದು ತರ್ಲೆ ಆಕಾಶ್. ಅಸಲಿಗೆ ಈ ಬಾಲಕನ ಹೆಸರು ದುಷ್ಯಂತ್ ಚಕ್ರವರ್ತಿ (Dushyanth Chakravarthi). ಈತ ಇದೇ ಸೀರಿಯಲ್ನ ಗೌತಮ್ನ ಅತ್ಯಾಪ್ತ ಆನಂದ್ (ಅವರ ಅಸಲಿ ಹೆಸರು ಕೂಡ ಆನಂದ್ ಕುಮಾರ್) ಅವರ ರಿಯಲ್ ಮಗ. ಅಷ್ಟಕ್ಕೂ ದುಷ್ಯಂತ್ ಇದಾಗಲೇ ಸೂಪರ್‌ಸ್ಟಾರ್ ಆಗಿದ್ದಾನೆ. ಇದಾಗಲೇ ಕೆಲವು ಸೀರಿಯಲ್‌ಗಳಲ್ಲಿ ಈತ ನಟಿಸಿದ್ದು, ಈಗಲೂ ನಟನಾ ವೃತ್ತಿ ಮುಂದುವರೆಸಿದ್ದಾನೆ.
ಇದನ್ನೂ ಓದಿ: ಭೂಮಿಕಾ-ಗೌತಮ್ ಪುತ್ರನೇ ಆನಂದ್ ರಿಯಲ್ ಮಗ! ಏನಿದು Amruthadhaare Serial ಟ್ವಿಸ್ಟ್?
ಯಾರೀ ತರ್ಲೆ ಆಕಾಶ್?
ಈ ಹಿಂದೆ ದುಷ್ಯಂತ್, ಶ್ರೀಮುರಳಿ ನಟನೆಯ ‘ಮದಗಜ’ ಸಿನಿಮಾದಲ್ಲಿ ಬಾಲನಟನಾಗಿ ದುಷ್ಯಂತ್ ನಟಿಸಿದ್ದ. ಅಷ್ಟೇ ಅಲ್ಲದೆ ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ ‘ರಾಜಕುಮಾರ’ ಸೆಟ್‌ನಲ್ಲಿ ಅಪ್ಪು ಜೊತೆಗೆ ದುಷ್ಯಂತ್ ಒಂದಷ್ಟು ಸಮಯ ಕಳೆದಿದ್ದ. ಅದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. 'ನನ್ನಮ್ಮ ಸೂಪರ್‌ಸ್ಟಾರ್ ಸೀಸನ್ 3' ರಿಯಾಲಿಟಿ ಶೋನಲ್ಲಿ (Nannamma Superstar reality show) ದುಷ್ಯಂತ್ ರನ್ನರ್ ಅಪ್ ಸ್ಥಾನ ಗಳಿಸಿದ್ದಾನೆ. ಈಗ ಆತ, ದಿವ್ಯಾ ಉರುಡುಗ, ರಿತ್ವಿಕ್ ಮಠದ್ ನಟನೆಯ ‘ನಿನಗಾಗಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾನೆ. ಇವನ ಸಂಭಾಷಣೆ ವೀಕ್ಷಕರಿಗೆ ತುಂಬ ಇಷ್ಟ ಆಗಿದೆ. ಮಕ್ಕಳ ಜೊತೆ ಶೂಟಿಂಗ್ ಮಾಡೋದು ಮತ್ತೊಂದು ಖುಷಿ ಎಂದು ದಿವ್ಯಾ ಉರುಡುಗ, ರಿತ್ವಿಕ್ ಮಠದ್ ಕೂಡ ಈ ಹಿಂದೆ ಹೇಳಿದ್ದರು. ದುಷ್ಯಂತ್ ಇದಾಗಲೇ ಅಪ್ಪ ಆನಂದ್ ಜೊತೆಗೂಡಿ ಹಲವು ರೀಲ್ಸ್‌ಗೆ ಸ್ಟೆಪ್ ಹಾಕಿದ್ದಾನೆ.
ಇನ್ನು ನಟ ಆನಂದ್ ಕುರಿತು ಹೇಳುವುದಾದರೆ, ಆನಂದ್ ಅವರು ಪತ್ನಿ ಚೈತ್ರಾ ಜೊತೆಗೆ 'ಜೋಡಿ ನಂ 1 ಸೀಸನ್ 2' ಶೋನಲ್ಲಿ ಭಾಗವಹಿಸಿದ್ದರು. ತೆರೆ ಮೇಲೆ ಎಲ್ಲರನ್ನೂ ಹಾಸ್ಯದ ಕಡಲಿನಲ್ಲಿ ತೇಲಿಸುವ ಅದೆಷ್ಟೋ ನಟರ ಬಾಳಲ್ಲಿ ನೋವಿನ ಸರಮಾಲೆಗಳೇ ಇರುತ್ತವೆ. ಎಷ್ಟೋ ನಟರು ಹಿಂದೊಮ್ಮೆ ತುತ್ತು ಅನ್ನಕ್ಕೂ ಪರದಾಡಿದ್ದು ಇದೆ. ಇನ್ನು ಕೆಲವರು ಬಾಲ್ಯದಿಂದಲೂ ನೋವನ್ನೇ ಹೊತ್ತು ಬಂದಿದ್ದರೆ, ಮತ್ತೆ ಕೆಲವರಿಗೆ ಕಹಿ ಘಟನೆಗಳಿಂದ ಜೀವನ ತತ್ತರಿಸಿ ಹೋಗಿರುವುದೂ ಉಂಟು. ಬಹುತೇಕ ಎಲ್ಲರ ಬಾಳಿನಲ್ಲಿಯೂ ಈ ಏಳು-ಬೀಳುಗಳು ಸಹಜವೇ. ಅದೇ ರೀತಿ ಎಲ್ಲರನ್ನೂ ನಗಿಸುವ ಆನಂದ್ ಅವರ ಜೀವನದಲ್ಲಿಯೂ ಬಹು ದೊಡ್ಡ ಆಘಾತವೇ ನಡೆದಿತ್ತು. ಪತ್ನಿ ಕೊರೋನಾ ಸಂದರ್ಭದಲ್ಲಿ ಸಾವು ಬದುಕಿನ ಬಗ್ಗೆ ಹೋರಾಟ ಮಾಡಿದ್ದರು. ಅದನ್ನು ಆನಂದ್ ಈ ಹಿಂದೆ ನೆನಪಿಸಿಕೊಂಡಿದ್ದರು. ಇದೇ ವೇಳೆ, ನಿಜ ಜೀವನದಲ್ಲಿ ಏಳುಬೀಳು ಕಂಡವರು ಆನಂದ್ ಮತ್ತು ಚೈತ್ರಾ. ಚೈತ್ರಾ ಅವರು ದಪ್ಪ ಇರುವ ಕಾರಣದಿಂದ ಅವರಿಗೆ ಮಕ್ಕಳಾಗುವುದಿಲ್ಲ ಎಂದು ಆನಂದ್ ಅವರ ಮನೆಯವರು ಮದುವೆಗೆ ಒಪ್ಪದಿದ್ದರೆ, ಅವರು ಕಲಾವಿದ ಎಂದು ತಮ್ಮ ಮನೆಯಲ್ಲಿ ಮದುವೆಗೆ ಒಪ್ಪದನ್ನು ನೆನೆದು ಚೈತ್ರಾ ಕಣ್ಣೀರು ಹಾಕಿದ್ದರು. ಅವರಿಗೆ ಈಗ ಕ್ಯೂಟ್ ಮಗ ಹುಟ್ಟಿದ್ದಾನೆ.
ಇದನ್ನೂ ಓದಿ: Lakshmi Nivasa Actress: ಲಕ್ಷ್ಮೀ ನಿವಾಸ ಚೆಲುವಿಗೆ ತಾಳಿ ಕಟ್ಟಿದ ಅಮೃತಧಾರೆ ಆನಂದ್! ಒಲ್ಲದ ಮನಸ್ಸಿನಿಂದ ನಡೆಯಿತು ಮದುವೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.