Amrutadhare Serial: ಕುತಂತ್ರಿ ಜೈದೇವ- ದಿಯಾಳ ಮದ್ವೆಗೆ ಗ್ರೀನ್​ ಸಿಗ್ನಲ್​ ಕೊಟ್ಟೇಬಿಟ್ಟ ಗೌತಮ್​! ಏನಿದು ಈ ಪರಿ ಟ್ವಿಸ್ಟ್​?

Published : Jun 27, 2025, 01:36 PM ISTUpdated : Jun 27, 2025, 02:11 PM IST
Amrutadhare Jaidevs marriage

ಸಾರಾಂಶ

ಜೈದೇವ ಮನೆಯವರ ಎದುರೇ ದಿಯಾಳಿಗೆ ತಾಳಿ ಕಟ್ಟಲು ಮುಂದಾಗಿದ್ದಾನೆ. ಅಲ್ಲಿಗೆ ಬಂದ ಗೌತಮ್​, ಭೂಮಿಕಾ ಎದುರು ತನ್ನ ಆಟಾಟೋಪ ತೋರಿಸೋಣ ಎಂದುಕೊಂಡರೆ ಮದುವೆಗೆ ಗೌತಮ್​ನೇ ಗ್ರೀನ್​ ಸಿಗ್ನಲ್​ ಕೊಟ್ಟು ಎಲ್ಲರನ್ನೂ ಕಕ್ಕಾಬಿಕ್ಕಿ ಮಾಡಿದ್ದಾನೆ. ಏನಿದು ಟ್ವಿಸ್ಟ್​? 

ಅಮೃತಧಾರೆ ಇದೀಗ ಭಾರಿ ಕುತೂಹಲದ ತಿರುವು ಪಡೆದುಕೊಂಡಿದೆ. ಗಂಡ ಜೈದೇವನನ್ನು ಮೂರು ತಿಂಗಳಿನಲ್ಲಿ ಬದಲು ಮಾಡ್ತೇನೆ ಎಂದು ಮಲ್ಲಿ ಶಪಥ ಮಾಡಿದ್ದಳು. ಆದರೆ ಪರಸ್ತ್ರೀ ವ್ಯಾಮೋಹ ಎಂದರೆ ಅದೇನು ಸಣ್ಣದಲ್ಲವಲ್ಲ, ಇದೀಗ ಮನೆಯವರಿಗೆ ಖುದ್ದು ಇನ್ವಿಟೇಷನ್​ ಕೊಟ್ಟು ಜೈದೇವ ದಿಯಾಳನ್ನು ಮದುವೆಯಾಗಲು ಹೊರಟಿದ್ದಾನೆ. ಭೂಮಿಕಾ ಕೈಯಲ್ಲಿ ಆಮಂತ್ರಣ ಪತ್ರಿಕೆಯನ್ನೂ ಕೊಟ್ಟಿದ್ದಾನೆ. ಆದರೆ ಆ ಸ್ಥಳಕ್ಕೆ ಎಲ್ಲರೂ ಹೋದಾಗ, ದಿಯಾಳನ್ನು ಕರೆದುಕೊಂಡು ಜೈದೇವ ನೇರವಾಗಿ ಮನೆಗೇ ಬಂದಿದ್ದು, ಇಲ್ಲೇ ನಮ್ಮ ಮದುವೆ ನಡೆಯುತ್ತದೆ ಎಂದಿದ್ದಾರೆ. ಮನೆಯಲ್ಲಿರುವ ಪಾರ್ಥ, ಸುಧಾ ಎಲ್ಲರಿಗೂ ಗನ್​ನಿಂದ ಹೆದರಿಸಿ ಮದುವೆಗೆ ರೆಡಿಯಾಗಿದ್ದಾನೆ. ಅಷ್ಟಕ್ಕೇ ಸುಮ್ಮನಾಗದ ಆತ ಅಣ್ಣ ಗೌತಮ್​, ಭೂಮಿಕಾ ಎಲ್ಲರನ್ನೂ ಫೋನ್​ ಮಾಡಿ ಮನೆಗೆ ಕರೆಸಿದ್ದಾನೆ.

ಅದೇ ಇನ್ನೊಂದೆಡೆ, ಜೈದೇವನ ಕುತಂತ್ರ ಎಲ್ಲವೂ ಗೌತಮ್ ಎದುರು ಬಯಲಾಗಿದೆ. ಗೌತಮ್​ ತಾನು ಭೂಪತಿ ಜೊತೆ ಸೇರಿ ಮಾಡಿರುವ ನೀಚಕೃತ್ಯಗಳನ್ನು ಇಬ್ಬರೂ ಮಾತನಾಡುತ್ತಿದ್ದ ಸಮಯದಲ್ಲಿ ಮಲ್ಲಿಯ ತಾತ ಅದನ್ನು ಕೇಳಿಸಿಕೊಂಡಿದ್ದಾನೆ. ಅದನ್ನೆಲ್ಲಾ ಅವನು ಗೌತಮ್​ಗೆ ಬಂದು ಹೇಳಿದ್ದಾನೆ. ಅಷ್ಟರಲ್ಲಿಯೇ ಮದುವೆಯ ಬಗ್ಗೆ ಜೈದೇವ ಕರೆ ಮಾಡಿದ್ದಾನೆ. ಅಷ್ಟಕ್ಕೂ ಭೂಪತಿಯೇ ಮುಂದೆ ನಿಂತು ಜೈದೇವನ ಮದುವೆ ಮಾಡಿಸುತ್ತಿದ್ದಾರೆ. ಆದರೆ ಆತನಿಗೆ ಮಲ್ಲಿ ಅವನದ್ದೇ ಮಗಳು ಎನ್ನುವ ಸತ್ಯ ಇನ್ನೂ ಗೊತ್ತಿಲ್ಲ. ಈ ಸತ್ಯವನ್ನು ಹೇಳಲು ಗೌತಮ್​ ಸಾಕಷ್ಟು ಬಾರಿ ಪ್ರಯತ್ನಿಸಿದ್ದರೂ ಅದು ಯಶಸ್ವಿಯಾಗಲಿಲ್ಲ. ಈಗ ಜೈದೇವ ಮತ್ತು ದಿಯಾಳ ಮದುವೆ ಮಾಡಿಸಿ, ತನ್ನ ಸ್ವಂತ ಮಗಳ ಬಾಳಿಗೆ ಕೊಳ್ಳಿ ಇಡಲು ಹೋಗುತ್ತಿರುವ ವಿಷಯ ಅವನಿಗೆ ತಿಳಿದಿಲ್ಲ.

ಇದೇ ವೇಳೆ ಗೌತಮ್​- ಭೂಮಿಕಾ ಎಲ್ಲರೂ ಮನೆಗೆ ಬಂದಿದ್ದಾರೆ. ಮದುವೆಯನ್ನು ನಿಲ್ಲಿಸಲು ಬಂದು ರಂಪಾಟ ಮಾಡುತ್ತಾನೆ ಎಂದು ಜೈದೇವ ಅಂದುಕೊಂಡಿದ್ದ. ಹೀಗೆ ರಂಪಾಟ ಮಾಡುವ ಮಧ್ಯೆಯೇ ತಾನು ತಾಳಿ ಕಟ್ಟಿ ಮೆರೆಯುವ, ಎಲ್ಲರ ಹೊಟ್ಟೆಯನ್ನೂ ಉರಿಸುವ ಎಂದುಕೊಂಡಿದ್ದ. ಆದರೆ ಆತ ಹೇಳಿಕೇಳಿ ಗೌತಮ್​. ಯಾವಾಗ ಏನು ಮಾಡಬೇಕು ಎನ್ನುವುದು ಚೆನ್ನಾಗಿ ಗೊತ್ತಿದೆ ಅವನಿಗೆ. ದೊಡ್ಡ ಪ್ಲ್ಯಾನ್​ ಅನ್ನೇ ಮಾಡಿಕೊಂಡು ಬಂದಿರೋ ಹಾಗಿದೆ ಗೌತಮ್​. ಇದೇ ಕಾರಣಕ್ಕೆ ನನ್ನ ಎದುರೇ ತಾಳಿ ಕಟ್ಟು ಎಂದು ಜೈದೇವ್​ಗೆ ಹೇಳಿದಾಗ ಅಲ್ಲಿರೋರು ಎಲ್ಲರೂ ಶಾಕ್​. ಜೈದೇವನೂ ಒಮ್ಮೆ ಇದೇನಿದು ಎಂದು ತಲೆಬುಡ ಅರ್ಥವಾಗದೇ ಕುಸಿದಿದ್ದಾನೆ. ಏನೋ ಎಡವಟ್ಟು ಆಗುತ್ತದೆ ಎನ್ನುವುದು ಅವನಿಗೆ ಮನವರಿಕೆ ಆಗಿದೆ. ಆದರೆ ಮದುವೆಗೆ ಗ್ರೀನ್​ ಸಿಗ್ನಲ್​ ಕೊಟ್ಟಿರೋ ಗೌತಮ್​ ಏನು ಮಾಡುತ್ತಾನೆ ಎನ್ನೋದು ಈಗಿರುವ ಪ್ರಶ್ನೆ.

ಅಷ್ಟಕ್ಕೂ ಮಲ್ಲಿ ಪೊಲೀಸರಲ್ಲಿ ದೂರು ಕೊಟ್ಟರೆ ಜೈದೇವ್​ಗೆ ಜೈಲೇ ಗತಿ. ಇನ್ನು ಈಕೆಗೆ ತಾಳಿ ಕಟ್ಟಿದರೆ ನನ್ನೆಲ್ಲಾ ಆಸ್ತಿಯಿಂದ ನಿನ್ನನ್ನು ಬೇರೆ ಮಾಡುತ್ತೇನೆ ಎಂದೇನಾದ್ರೂ ಗೌತಮ್​ ಹೇಳಿದ್ರೆ, ಆಸ್ತಿಗಾಗಿಯೇ ಮದ್ವೆಯಾಗ್ತಿರೋ ದಿಯಾ ಅವನ ಕಡೆ ಕಣ್ಣೆತ್ತಿಯೂ ನೋಡಲಾರಳು. ಇನ್ನು ಇದೇ ವೇಳೆ ಮಲ್ಲಿಯ ಅಸಲಿಯತ್ತನ್ನು ಗೌತಮ್​ ಭೂಪತಿ ಎದುರು ಬಹಿರಂಗಪಡಿಸಿ ಇವಳು ನಿನ್ನದೇ ಮಗಳು ಎಂದರೆ ಈ ಮದುವೆಯನ್ನು ಖುದ್ದು ಭೂಪತಿಯೂ ತಡೆಯಬಹುದು ಹಾಗೂ ಅಷ್ಟು ಆಸ್ತಿಯ ಮಾಲೀಕಳು ಮಲ್ಲಿ ಎನ್ನುವುದು ಗೊತ್ತಾಗಿ ದುಡ್ಡಿನ ಹಿಂದೆ ಬಿದ್ದಿರೋ ಜೈದೇವ್​, ದಿಯಾಳನ್ನು ಅಲ್ಲಿಯೇ ಬಿಟ್ಟು ಮಲ್ಲಿಯ ಬಳಿ ಓಡಿ ಬರಹುದು. ಇಷ್ಟು ಅದರೆ ಅಲ್ಲಿಗೆ ಸೀರಿಯಲ್​ ಮುಗಿದಂತೆ. ಅದರೆ ಇವಿಷ್ಟು ಕಥೆ ಇನ್ನೆಷ್ಟು ದಿನ ಸಾಗುತ್ತದೆಯೋ ಯಾರಿಂದಲೂ ಹೇಳುವುದು ಕಷ್ಟ!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಜೊತೆ ರಾಜಮೌಳಿ ಯಾಕೆ ಸಿನಿಮಾ ಮಾಡಿಲ್ಲ? ಕಾರಣ ಕೇಳಿದ್ರೆ ಆಶ್ಚರ್ಯಪಡ್ತೀರಾ!
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?