ಯಾವತ್ತೂ ಅಂಡರ್‌ ಎಸ್ಟಿಮೇಟ್ ಮಾಡ್ಬೇಡಿ .. ರಶ್ಮಿಕಾ ಮಂದಣ್ಣಗೆ ಮೂಗುದಾರ ಹಾಕೋಕ್ ಹೋಗ್ಬೇಡಿ..!

Published : Jun 27, 2025, 12:57 PM IST
ಯಾವತ್ತೂ ಅಂಡರ್‌ ಎಸ್ಟಿಮೇಟ್ ಮಾಡ್ಬೇಡಿ .. ರಶ್ಮಿಕಾ ಮಂದಣ್ಣಗೆ ಮೂಗುದಾರ ಹಾಕೋಕ್ ಹೋಗ್ಬೇಡಿ..!

ಸಾರಾಂಶ

ರಶ್ಮಿಕಾ ಮಂದಣ್ಣ ನಟಿಸಿರೋ 'ಮೈಸಾ' ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದೆ. ರಿಲೀಸ್ ಆಗಿರೋ ಪೋಸ್ಟರ್‌ನಲ್ಲಿ ರಶ್ಮಿಕಾ ತುಂಬಾ ಖಡಕ್ ಆಗಿ ಕಾಣಿಸ್ತಿದ್ದಾರೆ. ರಶ್ಮಿಕಾ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. 

ರಶ್ಮಿಕಾ ಮಂದಣ್ಣ 'ಮೈಸಾ' ಚಿತ್ರದ ಫಸ್ಟ್ ಲುಕ್: ಸೌತ್ ಜೊತೆಗೆ ಬಾಲಿವುಡ್‌ನಲ್ಲೂ ಸೈ ಎನಿಸಿಕೊಂಡಿರೋ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಮುಂದಿನ ಸಿನಿಮಾ ಬಗ್ಗೆ ಸುದ್ದಿಯಲ್ಲಿದ್ದಾರೆ. ಗುರುವಾರ ತಮ್ಮ ಹೊಸ ಸಿನಿಮಾ ಬಗ್ಗೆ ಹಿಂಟ್ ಕೊಟ್ಟಿದ್ರು. ಇದೀಗ ಶುಕ್ರವಾರ ರಶ್ಮಿಕಾ ನಟಿಸಿರೋ 'ಮೈಸಾ' ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದೆ. ರಿಲೀಸ್ ಆಗಿರೋ ಪೋಸ್ಟರ್‌ನಲ್ಲಿ ರಶ್ಮಿಕಾ ತುಂಬಾ ಖಡಕ್ ಆಗಿ ಕಾಣಿಸ್ತಿದ್ದಾರೆ. ಮೂಗುತಿ, ಕೈಯಲ್ಲಿ ಖಡ್ಗ, ಕಣ್ಣಲ್ಲಿ ಕೋಪ ಇಟ್ಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಫ್ಯಾನ್ಸ್ ಲುಕ್ ನೋಡಿ ಫಿದಾ ಆಗಿದ್ದಾರೆ. ರಶ್ಮಿಕಾ ಲುಕ್ ಜೊತೆಗೆ ಸಿನಿಮಾ ಬಗ್ಗೆ ಬೇರೆ ಯಾವ ಮಾಹಿತಿಯನ್ನೂ ಹಂಚಿಕೊಂಡಿಲ್ಲ.

ರಶ್ಮಿಕಾ ಮಂದಣ್ಣ 'ಮೈಸಾ' ಫಸ್ಟ್ ಲುಕ್ ಶೇರ್

ರಶ್ಮಿಕಾ ಮಂದಣ್ಣ 'ಮೈಸಾ' ಚಿತ್ರದ ಫಸ್ಟ್ ಲುಕ್‌ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. 'ನಾನು ಯಾವಾಗಲೂ ನಿಮಗೆ ಹೊಸ, ವಿಭಿನ್ನ, ರೋಮಾಂಚಕಾರಿ ಏನನ್ನಾದರೂ ಕೊಡಲು ಪ್ರಯತ್ನಿಸುತ್ತೇನೆ ಮತ್ತು ಇದು ಅವುಗಳಲ್ಲಿ ಒಂದು. ನಾನು ಮೊದಲು ಎಂದಿಗೂ ನಿರ್ವಹಿಸದ ಪಾತ್ರ. ನಾನು ಎಂದಿಗೂ ಕಾಲಿಟ್ಟಿರದ ಪ್ರಪಂಚ ಮತ್ತು ನಾನು ಇನ್ನೂ ಭೇಟಿಯಾಗದ ನನ್ನ ಒಂದು ರೂಪ, ಇದು ಭಯಾನಕ. ನಾನು ತುಂಬಾ ಉತ್ಸುಕಳಾಗಿದ್ದೇನೆ, ನಾವು ಏನು ಮಾಡುತ್ತಿದ್ದೇವೆಂದು ನೀವು ನೋಡಲು ನಾನು ಕಾಯಲು ಸಾಧ್ಯವಿಲ್ಲ.. ಇದು ಕೇವಲ ಆರಂಭ' ಅಂತ ಬರೆದುಕೊಂಡಿದ್ದಾರೆ. #Mysaa @unformulafilms @rawindrapulle.

ರಶ್ಮಿಕಾ ಲುಕ್ ನೋಡಿ ಫ್ಯಾನ್ಸ್‌ಗೆ ಅನುಷ್ಕಾ ನೆನಪು

ರಶ್ಮಿಕಾ ಮಂದಣ್ಣ 'ಮೈಸಾ' ಚಿತ್ರದ ಲುಕ್ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಅಷ್ಟೇ ಅಲ್ಲ, ಅನುಷ್ಕಾ ಶೆಟ್ಟಿ ನೆನಪಾಗ್ತಿದೆ ಅಂತ ಕಮೆಂಟ್ ಮಾಡ್ತಿದ್ದಾರೆ. ಅನುಷ್ಕಾ ಹುಟ್ಟುಹಬ್ಬದಂದು ಅವರ 'ಘಾಟಿ' ಚಿತ್ರದ ಲುಕ್ ರಿಲೀಸ್ ಆಗಿತ್ತು. ರಶ್ಮಿಕಾ ಲುಕ್ ಕೂಡ ಇದಕ್ಕೆ ತುಂಬಾ ಹೋಲುತ್ತೆ. 'ಸಿನಿಮಾ ನೋಡೋಕೆ ಕಾಯ್ತಾ ಇದ್ದೀವಿ', 'ರಶ್ಮಿಕಾ ಬೆಂಕಿ ಇಟ್ಟಿದ್ದಾರೆ', 'ಇನ್ನೊಂದು ಬ್ಲಾಕ್‌ಬಸ್ಟರ್ ಸಿನಿಮಾ ರೆಡಿ', 'ನೀವು ಯಾವಾಗಲೂ ಮಿತಿಗಳನ್ನು ಮೀರುತ್ತೀರಿ, ಮತ್ತು #Mysaa ನಿಮ್ಮ ಇಲ್ಲಿಯವರೆಗಿನ ಅತ್ಯಂತ ಪ್ರಬಲ ಪಾತ್ರವೆಂದು ತೋರುತ್ತದೆ. ಈ ರೀತಿಯ ಪಾತ್ರವನ್ನು ನಿರ್ವಹಿಸಿದ್ದಕ್ಕಾಗಿ ನಿಮ್ಮ ಬಗ್ಗೆ ಹೆಮ್ಮೆ ಇದೆ. ಕಾಯಲು ಸಾಧ್ಯವಿಲ್ಲ' ಅಂತೆಲ್ಲಾ ಕಮೆಂಟ್‌ಗಳು ಬರ್ತಿವೆ. ಅನೇಕರು ರಶ್ಮಿಕಾಗೆ ಅಭಿನಂದನೆ ಸಲ್ಲಿಸಿದ್ರೆ, ಇನ್ನು ಕೆಲವರು ಹಾರ್ಟ್ ಮತ್ತು ಬೆಂಕಿ ಎಮೋಜಿಗಳನ್ನು ಶೇರ್ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಮುಂದಿನ ಚಿತ್ರಗಳು

ರಶ್ಮಿಕಾ ಮಂದಣ್ಣ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. 'ಅನಿಮಲ್', 'ಪುಷ್ಪ 2' ಮತ್ತು 'ಛಾವಾ' ಚಿತ್ರಗಳು ಭರ್ಜರಿ ಪ್ರದರ್ಶನ ಕಂಡಿವೆ. ಆದ್ರೆ, ಈ ವರ್ಷ ಬಿಡುಗಡೆಯಾದ ಸಲ್ಮಾನ್ ಖಾನ್ ಜೊತೆಗಿನ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಫ್ಲಾಪ್ ಆಯ್ತು. 'ಮೈಸಾ' ರಶ್ಮಿಕಾ ಅವರ ಪ್ಯಾನ್ ಇಂಡಿಯಾ ಸಿನಿಮಾ. ಇದಲ್ಲದೆ, ರಾಹುಲ್ ರವೀಂದ್ರನ್ ನಿರ್ದೇಶನದ 'ದಿ ಗರ್ಲ್‌ಫ್ರೆಂಡ್' ಮತ್ತು ಶಾಂತರೂಬನ್ ಅವರ 'ರೇನ್‌ಬೋ' ಚಿತ್ರಗಳಲ್ಲಿ ನಟಿಸಲಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ