ಅಬ್ಬಬ್ಬಾ ಒಬ್ಬೊಬ್ರೇ ಹತ್ತಿಪ್ಪತ್ತು ಕಾರ್‌ಗಳನ್ನಿಟ್ಟುಕೊಂಡು ಏನು ಮಾಡುವುದು? ನಾವಾದ್ರೆ ಕಾರು ಮಾರಾಟ ಅಂಗಡಿ ತೆರೆದುಕೊಂಡು ಕೂರ್ತಿದ್ವೇನೋ... ಆದರೆ, ಸಿಕ್ಕಾಪಟ್ಟೆ ಹಣವಿರುವವರಿಗೆ ಅದೇನೋ ಕಾಸ್ಲ್ಟಿ ಕಾರ್‌ಗಳ ಕ್ರೇಜ್. ಅವರು ಹೊಸ ಹೊಸ ಲಕ್ಷುರಿ ಕಾರ್‌ಗಳು ಮಾರುಕಟ್ಟೆಗೆ ಬಂದಂತೆಲ್ಲ ಅದನ್ನು ತಮ್ಮದಾಗಿಸಿಕೊಳ್ಳುವ ತವಕದಲ್ಲಿ ತೊಯ್ದಾಡುತ್ತಾರೆ. ಬಾಲಿವುಡ್ ಸೆಲೆಬ್ರಿಟಿಗಳ ಬಳಿ ಯಾವೆಲ್ಲ ಕಾರುಗಳಿವೆ ಗೊತ್ತಾ?
ದೊಡ್ಡ ಎಂಬ ಪದ ಕೂಡಾ ಸಣ್ಣದೆನಿಸುವಷ್ಟು ಬೃಹತ್ ಬಂಗಲೆಗಳು, ಲಕ್ಷ ಕೋಟಿಯಲ್ಲಿ ಬೆಲೆ ಬಾಳುವ ವಸ್ತ್ರಗಳು, ಸಾಮಾನ್ಯ ಜನರ ಕನಸಿನಲ್ಲಿ ಬರಲೂ ಹೆದರುವ ಕಾಸ್ಟ್ಲಿ ಕಾರುಗಳು, ವೈಭವೋಪೇತ ಜೀವನ... ಬಾಲಿವುಡ್ ನಟರು ಭೂಮಿಯ ಮೇಲಿನ ದೇವಲೋಕ ನಿವಾಸಿಗಳಂತೆ ಬದುಕುತ್ತಿದ್ದಾರೆ. ಹಾಗಾಗಿಯೇ ಅವರು ನಿಂತರೂ ಸುದ್ದಿ, ಕುಂತರೂ ಸುದ್ದಿ, ಕೆಮ್ಮಿದರೂ ಸುದ್ದಿ... ಅಂದ ಮೇಲೆ ಇಂಥ ಈ ಸೆಲೆಬ್ರಿಟಿಗಳ ಬಳಿ ಯಾವ ಯಾವ ಕಾರುಗಳಿವೆ ಎಂದು ತಿಳಿದುಕೊಳ್ಳೋ ಕುತೂಹಲ ಇರೋದಿಲ್ವಾ ? ಯಾರ ಬಳಿ ಯಾವ ಕಾರಿದೆ ಎಂದು ನಾವು ಹೇಳ್ತೀವಿ ಕೇಳಿ.
ಅಮಿತಾಭ್ ಬಚ್ಚನ್
undefined
ಬಿಗ್ ಬಿ ಎಂದ ಮೇಲೆ ಕಾರ್ ಕಲೆಕ್ಷನ್ ಕೂಡಾ ಬಿಗ್ ಆಗಿರಲೇಬೇಕು. ಜಾಗತಿಕವಾಗಿ ಅತ್ಯಂತ ಲಕ್ಷುರಿ ಕಾರ್ ಎನಿಸಿಕೊಂಡ ರೋಲ್ಸ್ ರಾಯ್ಸ್ ಫ್ಯಾಂಟಮ್ ಲಕ್ಸೋಬಾರ್ಜ್ ಬಚ್ಚನ್ ಬಳಿ ಇರುವುದು ಕಾರಿನ ಹೆಮ್ಮೆಯೋ, ಈ ಮೇರು ನಟನ ಹೆಮ್ಮೆಯೋ ನೀವೇ ನಿರ್ಧರಿಸಿ. ಇದಲ್ಲದೆ, ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ಮರ್ಸಿಡಸ್ ಬೆಂಜ್ ಎಸ್-ಕ್ಲಾಸ್, ಆಡಿ ಎ8, ಟೊಯೋಟಾ ಲ್ಯಾಂಡ್‌ಕ್ರೂಸರ್, ಪೋಶೆ ಕೆಮ್ಯಾನ್ ಎಸ್, ರೇಂಜ್ ರೋವರ್ ಹಾಗೂ ಹತ್ತು ಹಲವು ಕಾರುಗಳು ಅಮಿತಾಬ್ ಹಾಗೂ ಮಗ ಅಭಿಷೇಕ್ ಕಾರ್ ಕಲೆಕ್ಷನ್‌ನಲ್ಲಿವೆ.
ಮನೆ ಕೆಲಸದವನ ಮೃತದೇಹ ಹೊತ್ತು ಮಾನವೀಯತೆ ಮೆರೆದ ಅಮಿತಾಬ್ ಕುಟುಂಬ
ಇತ್ತೀಚೆಗಷ್ಟೇ ಮಿನಿ ಕೂಪರ್ ಎಸ್ ಕೂಡಾ ಬಚ್ಚನ್ ಕುಟುಂಬಕ್ಕೆ ಸೇರ್ಪಡೆಯಾಗಿದೆ. ಸೀನಿಯರ್ ಬಚ್ಚನ್‌ನ ಕನಸಿನ ಕಾರೆಂದರೆ ಲ್ಯಾಂಬೋರ್ಗಿನಿ ಎಲ್‌ಎಂ002 ಆಗಿದ್ದು, ಇಟಾಲಿಯನ್ ಕಾರ್ ತಯಾರಿಕಾ ಸಂಸ್ಥೆ ತಯಾರಿಸಿದ ಏಕೈಕ ಎಸ್‌ಯುವಿ ಇದಾಗಿದೆ. ಮೂಲಗಳ ಪ್ರಕಾರ, ಬಚ್ಚನ್ ಲಂಡನ್‌ನಲ್ಲಿ ಈ ಕಾರು ಹೊಂದಿದ್ದಾರೆ.
ಸಂಜಯ್ ದತ್
ಬಾಲಿವುಡ್‌ನಲ್ಲಿ ಬಾಬಾ ಎಂದೇ ಕರೆಸಿಕೊಳ್ಳುವ ಸಂಜಯ್ ದತ್ ಫೆರಾರಿ 599ಜಿಟಿಬಿ ಹೊಂದಿದ ಮೊದಲ ಬಿಟೌನ್ ಸೆಲೆಬ್ರಿಟಿ. ಎರಡೇ ಸೀಟು ಹೊಂದಿದ ಈ ಕಾರು ಗಂಟೆಗೆ 330 ಕಿಲೋಮೀಟರ್ ಚಲಿಸುವ ಗರಿಷ್ಠ ವೇಗ ಹೊಂದಿದೆ. ಇದಲ್ಲದೆ, ಆಡಿ ಆರ್8 ಸೂಪರ್ ಕಾರ್, ಆಡಿ ಎ8 ಡಬ್ಲೂ 12 ಲಕ್ಷುರಿ ಸೆಡಾನ್, ರಾಲ್ಸ್ ರಾಯ್ಸ್ ಘೋಸ್ಟ್, ಆಡಿ ಕ್ಯೂ7 ಕೂಡಾ ದತ್ ಬಳಿ ಇವೆ.
ಸಲ್ಲು ಬಾಯ್ ಬಾಯಲ್ಲಿ ಕನ್ನಡದ ಮಾತು! ವಿಡಿಯೋ ವೈರಲ್
ಈತನಿಗೆ ದುಬಾರಿ ಬೈಕ್‌ಗಳ ಮೇಲೆ ಕೂಡಾ ಮೋಹವಿದ್ದು, ಹ್ಯಾರ್ಲಿ ಡೇವಿಡ್‌ಸನ್ ಫ್ಯಾಟ್‌ಬಾಯ್ ಹಾಗೂ ಶಾರುಖ್ ಗಿಫ್ಟ್ ನೀಡಿದ ಡುಕಾಟಿ ಮಲ್ಟಿಸ್ಟ್ರಾಡಾ ಸಂಜಯ್ ದತ್ ಬಳಿ ಇವೆ.
ಸಲ್ಮಾನ್ ಖಾನ್
ಬಾಲಿವುಡ್‌ನ ಬ್ಯಾಡ್‌ಬಾಯ್ ಎನಿಸಿಕೊಂಡೂ ಸಿಕ್ಕಾಪಟ್ಟೆ ಜನಪ್ರಿಯನಾಗಿರುವ ಸಲ್ಮಾನ್ ಕಾರ್ ಕಲೆಕ್ಷನ್‌ನಲ್ಲಿ ಸಿಡಾನ್‌ನಿಂದ ಹಿಡಿದು ಎಸ್‌ಯುವಿವರೆಗೆ ಹಲವು ಕಾರ್‌ಗಳಿವೆ. ಅವುಗಳಲ್ಲಿ ಅತಿ ಬೆಲೆ ಬಾಳುವಂಥದ್ದು ಆಡಿ ಆರ್‌ಎಸ್7. ಇದು ವಿಶ್ವದಲ್ಲೇ ಅತಿ ಬಲವಾದ ಸಿಡಾನ್ ಕಾರ್. ಇದಲ್ಲದೆ ಸಲ್ಮಾನ್ ಖಾನ್ ಬಳಿ ಮರ್ಸಿಡಸ್ ಬೆಂಜ್ ಎಸ್ ಕ್ಲಾಸ್, ಮರ್ಸಿಡಸ್ ಬೆಂಜ್ ಜಿಎಲ್ 350ಸಿಡಿಐ, ಬಿಎಂಡಬ್ಲೂ 7 ಸಿರೀಸ್, ರೇಂಜ್ ರೋವರ್, ರೇಂಜ್ ರೋವರ್ ಸ್ಪೋರ್ಟ್ ಹಾಗೂ ರೆನಾಲ್ಟ್ ಕೊಲಿಯೋಸ್ ಇವೆ. ಸುಜುಕಿ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿರುವ ಸಲ್ಮಾನ್ ಖಾನ್ ಬಲಿ ಇಂಟ್ರೂಡರ್, ಹಯಾಬುಸಾ, ಜಿಎಸ್ಎಕ್ಸ್ಆರ್-1000 ಹಾಗೂ ಹಯಾಬುಸಾ ಸೂಪರ್‌ಬೈಕ್‌ಗಳಿವೆ.
ಆಮೀರ್ ಖಾನ್
ಬಾಲಿವುಡ್ನ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಚಿತ್ರಗಳ ಆಯ್ಕೆಯಲ್ಲಿ ಮಾತ್ರವಲ್ಲ, ಕಾರ್‌ಗಳ ಆಯ್ಕೆಯಲ್ಲೂ ಉತ್ತಮ ಟೇಸ್ಟ್ ಹೊಂದಿದ್ದಾರೆ. ಆಮೀರ್‌ಗೆ ಕೂಡಾ ಲಕ್ಷುರಿ ಕಾರ್‌ಗಳ ಮೇಲೆ ಎಲ್ಲಿಲ್ಲದ ಪ್ರೀತಿ ಎಂಬುದು ಅವರ ಬಳಿ ಇರುವ ಜಾಗತಿಕವಾಗಿ ಬೆಸ್ಟ್ ಲಕ್ಷುರಿ ಸೆಡಾನ್‌ಗಳೆನಿಸಿಕೊಂಡಿರುವ ಬೆಂಟ್ಲಿ ಫ್ಲೈಯಿಂಗ್ ಸ್ಪರ್, ರೋಲ್ಸ್ ರಾಯ್ಸ್ ಗೋಸ್ಟ್ ನೋಡಿದರೆ ತಿಳಿಯುತ್ತದೆ.
ಅಮೀರ್ ಖಾನ್ ಮಗಳು ಅದೆಷ್ಟು ಬೋಲ್ಡ್ ಇದ್ದಾಳೆ ನೋಡಿ!
ಇತ್ತೀಚೆಗೆ ಬೆದರಿಕೆಗಳು ಬಂದ ಬಳಿಕ ಮರ್ಸಿಡಸ್ ಬೆಂಜ್ ಎಸ್ ಗಾರ್ಡನ್ನು ಕೂಡಾ ಖರೀದಿಸಿದ್ದಾರೆ. ಟೊಯೋಟಾ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿರುವ ಆಮಿರ್ ಖಾನ್, ಆಗಾಗ ಟೊಯೋಟಾ ಇನ್ನೋವಾ ಹಾಗೂ ಲ್ಯಾಂಡ್‌ಕ್ರೂಸರ್ಗಳಲ್ಲಿ ಮುಂಬೈ ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.
ಶಾರುಖ್ ಖಾನ್
ಬಾಲಿವುಡ್‌ನ ಬಾದ್ ಶಾಹ್ ಬಿಎಂಡಬ್ಲೂ ಫ್ಯಾನ್. ಅವರ ಬಳಿ ಬಿಎಂಡಬ್ಲೂನ ವಿವಿಧ ಜೆನರೇಶನ್‌ಗಳ 7 ಸಿರೀಸ್ ಲಕ್ಷುರಿ ಕಾರ್‌ಗಳಿವೆ. ಜೊತೆಗೆ ಬಿಎಂಡಬ್ಲೂ 6 ಸಿರೀಸ್ ಕನ್ವರ್ಟಿಬಲ್, 5 ಸಿರೀಸ್ ಹಾಗೂ ಎಕ್ಸ್3 ಎಸ್‌ಯುವಿಗಳಿವೆ. ಶಾರುಖ್‌ನ ದೆಲ್ಲಿ ನಿವಾಸದಲ್ಲಿ ರೋಲ್ಸ್ ರಾಯ್ಸ್ ಇದೆ. ಇತ್ತೀಚೆಗೆ ಶಾರುಖ್ ಬಿಎಂಡಬ್ಲೂನಿಂದ ಮರ್ಸಿಡಸ್ ಬೆಂಜ್‌ಗೆ ಶಿಫ್ಟ್ ಆಗಿದ್ದು, ಹೊಸತಾಗಿ ಎರಡು ಮರ್ಸಿಡಸ್ ಬೆಂಜ್ ಎಸ್ ಕ್ಲಾಸ್ ಲಕ್ಷುರಿ ಸೆಡಾನ್ ಹಾಗೂ ಜಿಎಲ್- ಕ್ಲಾಸ್ ಎಸ್‌ಯುವಿಗಳನ್ನು ಕೊಂಡಿದ್ದಾರೆ. ಹುಂಡೈ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಕೂಡಾ ಆಗಿದ್ದಾರೆ.
ಸದ್ದಿಲ್ಲದೇ ಮದುವೆಯಾದ್ರಾ ಅಲಿಯಾ- ರಣಬೀರ್ ಕಪೂರ್?
ರಣಬೀರ್ ಕಪೂರ್
ತಮ್ಮ ಮೊದಲ ಚಿತ್ರ ಬಿಡುಗಡೆಯಾದಾಗ ರಣಬೀರ್ ಕೊಂಡ ಮೊದಲ ಕಾರ್ ಕೆಂಪು ಬಣ್ಣದ ಆಡಿ ಆರ್8 ಸೂಪರ್‌ಕಾರ್. ನಂತರದಲ್ಲಿ ಹಾಲಿವುಡ್ ಸೆಲೆಬ್ರಿಟಿಗಳ ಫೇವರೇಟ್ ಆದ ಮರ್ಸಿಡಸ್ ಬೆಂಜ್ ಜಿ55 ಎಎಂಜಿಯಲ್ಲಿ ಓಡಾಡುತ್ತಿದ್ದಾರೆ. ಇದೀಗ ಕಪೂರ್ ಗ್ಯಾರೇಜ್‌ನಲ್ಲಿ ಆಡಿ ಎ8, ಮರ್ಸಿಡಸ್ ಬೆಂಜ್ ಎಸ್ ಕ್ಲಾಸ್, ರೇಂಜ್ ರೋವರ್‌ಗಳಿವೆ.