ಬೇರೆ ಹುಡುಗಿ ಮೇಲೆ ಕಣ್ಣಾಕುವ ಅಜಯ್ ಗೆ ಪೊಸೆಸಿವ್ ಕಾಜೋಲ್ ರಿಯಾಕ್ಷನ್ ಇದು!

By Web Desk  |  First Published May 16, 2019, 1:42 PM IST

ಬಾಲಿವುಡ್ ಮೋಸ್ಟ್ ಸಕ್ಸಸ್ ಫುಲ್ ಕಪಲ್ ಅಜಯ್ ದೇವಗನ್ ಹಾಗೂ ಕಾಜೋಲ್ ತಮ್ಮ ದಾಂಪತ್ಯದ ಪೊಸೆಸಿವ್ ವಿಚಾರವೊಂದರ ಬಗ್ಗೆ ಸಂದರ್ಶನದಲ್ಲಿ ಬಹಿರಂಗವಾಗಿ ಮಾತನಾಡಿದ್ದಾರೆ.


‘ಡಿ ಡಿ ಪ್ಯಾರ್ ಡಿ’ ಚಿತ್ರದಲ್ಲಿ ಯಂಗ್ ಮ್ಯಾನ್ ಇನ್ ಲವ್ ವಿತ್ ಬಬ್ಲಿ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಜಯ್ ದೇವಗನ್ ತನ್ನ ನಿಜ ಜೀವನದಲ್ಲಿ ಕಾಜೋಲ್ ಗೆ ಹೇಗೆ ರಿಯಾಕ್ಟ್ ಮಾಡುತ್ತಾರೆಂದು ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ.

‘ಸಿನಿಮಾದಲ್ಲಿ ನಾನು ಮದುವೆಯಾಗಿದ್ದರೂ ಯಂಗ್ ಹುಡುಗಿ ಮೇಲೆ ಕಣ್ಣು ಹಾಕಿರುತ್ತೇನೆ. ಅದು ನನ್ನ ಹೆಂಡತಿಗೆ ಹೊಟ್ಟೆ ಉರಿಸುವುದಕ್ಕೆ ಅದರೆ ನಿಜ ಜೀವನದಲ್ಲಿ ಅಂತಹ ಸಂಬಂಧಕ್ಕೆ ಮುಖ ಹಾಕುವುದಿಲ್ಲ’ ಎಂದು ಹೇಳಿದ್ದಾರೆ.

Tap to resize

Latest Videos

ಅಜಯ್ ಟೊಬ್ಯಾಕೋ ಜಾಹಿರಾತಿಗೆ ಕ್ಯಾನ್ಸರ್ ಪೇಷಂಟ್ ಉತ್ತರವಿದು!

ಇನ್ನು ಕಾಜೋಲ್ ಸಿನಿಮಾ ರಂಗದಲ್ಲಿರುವವಳು. ಆಕೆಗೆ ಸಿನಿಮಾ ಯಾವುದು, ನಿಜ ಜೀವನ ಯಾವುದು, ಹೇಗೆ ಎರಡನ್ನೂ ಸಂಭಾಳಿಸಬೇಕೆಂದು ಸೂಕ್ಷ್ಮವಾಗಿ ಯೋಚನೆ ಮಾಡುವ ಶಕ್ತಿ ಇದೆ ಎಂದು ಕಾಜೋಲ್ ಪರವಾಗಿ ನಿಂತಿದ್ದಾರೆ. ಕೆಲ ದಿನಗಳ ಹಿಂದೆ 20 ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಅಜಯ್ ಆ್ಯಂಡ್ ಕಾಜೋಲ್ ದಾಂಪತ್ಯದ ಗುಟ್ಟೇನು ಎಂದು ಕೇಳಿದಾಗ ‘ಈ 20 ವರ್ಷದ ಜರ್ನಿಯಲ್ಲಿ ಆಕೆಯನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇನೆಂದರೆ ಆಕೆಯನ್ನು ನೋಡದೆ ಭಾವನೆ ಅರ್ಥ ಮಾಡಿಕೊಳ್ಳುವಷ್ಟು ಸಾಮರ್ಥ್ಯ ಬಂದಿದೆ. ಏನೇ ವಿಚಾರದ ಮೇಲೆ ಜಗಳವಾದರೂ ಇಬ್ಬರೂ ಕೂತು ಮಾತನಾಡಿಕೊಂಡು ಬಗೆಹರಿಸಿಕೊಳ್ಳುತ್ತೇವೆ ’ ಎಂದು ಅಜಯ್ ಹೇಳಿದ್ದಾರೆ.

click me!