ಮುಖದಲ್ಲಿ ತುಸು ಕಲೆಯಾದರೂ, ಮುಚ್ಚಿಕೊಳ್ಳಲು ಹರಸಾಹಸ ಮಾಡುವ ಬಾಲಿವುಡ್ ನಟಿಯರ ನಡುವೆ ಸಮೀರಾ ರೆಡ್ಡಿ ವಿಭಿನ್ನ ಎನಿಸುತ್ತಾರೆ. ಪ್ರಸವದ ನಂತರ ಹಾಳಾದ ಸೌಂದರ್ಯವನ್ನೇ ಜಗತ್ತಿಗೇ ತೋರಿಸಿ, ಇವೆಲ್ಲ ಸಹಜ ಬಿಡಿ ಎಂದಿದ್ದಾರೆ. 'ಬಾಣಂತಿ ಪುರಾಣ' ಹೇಳಲು ಆರಂಭಿಸಿದ ಸಮೀರಾ, ಮುಚ್ಚಿಡಬೇಕಾದ್ದನ್ನು, ಬಿಚ್ಚಿ ತೋರಿಸಿ ನಟಿಯಾದರೇನು, ಪ್ರಕೃತಿ ಮುಂದೆ ಎಲ್ಲರೂ ಒಂದೇ ಎಂದೂ ಸಾರಿ ಸಾರಿ ಹೇಳುತ್ತಿದ್ದಾರೆ.
ಟಿಪಿಕಲ್ ಆಗಿ ಸೀಮಂತ ಮಾಡ್ಕೊಂಡು, ನೀರೊಳಗೆ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಂಡ ಸಮೀರಾ, ಜುಲೈ 12ಕ್ಕೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಲಿಟಲ್ ಏಂಜೆಲ್ ಫೋಟೋ ರಿವೀಲ್ ಮಾಡಿಯೂ, ಅಭಿಮಾನಿಗಳಿಗೆ ತಮ್ಮ ಕುಟುಂಬದ ಸದಸ್ಯೆಯನ್ನು ಪರಿಚಯಿಸಿದ್ದಾರೆ.
ಲಿಟಲ್ ಏಂಜಲ್ ಫೋಟೋ ರಿವೀಲ್ ಮಾಡಿದ ಸಮೀರಾ ರೆಡ್ಡಿ
ಇದೀಗ ಸಮೀರಾ ಪ್ರಸವ ಅದರಲ್ಲಿಯೂ ಸಿ ಸೆಕ್ಷನ್ ನಂತರ ಕೆಡುವ ಹೊಟ್ಟೆಯ ಅಂಧದ ಫೋಟೋವನ್ನು ಪೋಸ್ಟ್ ಮಾಡಿದ್ದು, ವೈರಲ್ ಆಗುತ್ತಿದೆ. ಅದಕ್ಕೆ 'ನನ್ನು #Imperfectlyperfect ಅಭಿಯಾನದಲ್ಲಿ ಹೇಳಿಕೊಂಡಂತೆ ನನ್ನ ಪೋಸ್ಟ್ ಪ್ರೆಗ್ನೆನ್ಸಿ ಜರ್ನಿ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳುವೆ. c-section ಹೊಲಿಗೆಗಳು ತುಂಬಾ ನೋವು ಕೊಡುತ್ತಿದೆ. ರಾತ್ರಿ ನಿದ್ದೆ ಇಲ್ಲದೇ ಮಗಳಿಗೆ ಹಾಲು ಕುಡಿಸುವುದು ಸಹಜವಾಗಿದೆ. ಎಲ್ಲವೂ ದೇಹದ ಮೇಲಿನ ಒತ್ತೆಡವನ್ನು ಹೆಚ್ಚಿಸುತ್ತಿದೆ. ದೇಹ ಕುಗ್ಗುತ್ತಿದೆ,' ಎಂದು ಬರೆದುಕೊಂಡಿದ್ದಾರೆ.
ಹೊಟ್ಟೆ ಊತ ಕಡಿಮೆ ಆಗುವುದಕ್ಕೆ ಸಮಯ ಬೇಕು. ಈಗ ಅಪ್ಲೋಡ್ ಮಾಡಿರುವುದು ಮಗಳು ಹುಟ್ಟಿ 5 ದಿನಗಳ ನಂತರದ ಫೋಟೋ ಎಂದು ಹೇಳಿದ್ದಾರೆ. ಆ ಮೂಲಕ ತಾಯ್ತನ, ಕೆಡುವ ಅಂದ, ಪ್ರಕೃತಿಯ ಕೊಡುಗೆ ಎಲ್ಲವನ್ನೂ ಬಿಡಿ ಬಿಡಿಯಾಗಿ ಬಿಡಿಸಿ ಹೇಳಲು ಯತ್ನಿಸಿದ್ದಾರೆ ಬಾಲಿವುಡ್ ನಟಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.