
ಒಂದೇ ಮನೆ, ಮೂರು ದಿನದ ಕತೆ
ಡ್ರಗ್ಸ್ ಸ್ಕಾ್ಯಂಡಲ್ ಅನ್ನು ಆಧರಿಸಿ ಮಾಡಿರುವ ಕತೆ. ಮೈಸೂರಿನ ಒಂದೇ ಮನೆಯಲ್ಲಿ ಮೂರು ದಿನ ನಡೆಯುವ ಕತೆ ಇದು. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಯುತ್ತ ಬಂದಿದ್ದು, ಒಂದು ವಾರ ಮಾತ್ರ ಬಾಕಿದೆ. ಚಿಕ್ಕಮಗಳೂರಿನಲ್ಲಿ ಹಾಡುಗಳ ಚಿತ್ರೀಕರಣ ನಡೆಯಲಿದೆ. ಪೂರ್ಣಚಂದ್ರ, ಸುಚೇಂದ್ರ ಪ್ರಸಾದ್, ಪ್ರಶಾಂತ್ ಸಿದ್ದಿ ಮುಂತಾದವರು ನಟಿಸುತ್ತಿದ್ದಾರೆ. ಕ್ರೈಮ್, ಥ್ರಿಲ್ಲರ್, ಲವ್ ಈ ಮೂರು ಅಂಶಗಳನ್ನು ಒಳಗೊಂಡ ಚಿತ್ರವಿದೆ.
ಬ್ಲಾಕ್, ಲಂಕೆ ಹಾಗೂ ಭರಾಟೆ ಹೀಗೆ ಮೂರು ಚಿತ್ರಗಳು ಒಟ್ಟಿಗೆ ಚಿತ್ರೀಕರಣ ನಡೆಯುತ್ತಿವೆ. ಮೂರೂ ಚಿತ್ರಗಳಲ್ಲೂ ಮೂರು ಭಿನ್ನವಾದ ಪಾತ್ರಗಳನ್ನು ಮಾಡಿದ್ದೇನೆ.- ಕೃಷಿ ತಾಪಂಡ, ನಟಿ
ಭರಾಟೆಯಲ್ಲಿ ಅತಿಥಿ, ಲಂಕೆಗೆ ನಾಯಕಿ
ಶ್ರೀಮುರಳಿಗೆ ಬಿಗ್ ಬಾಸ್ ಸ್ಪರ್ಧಿ ‘ಭರಾಟೆ’!
ಶ್ರೀಮುರಳಿ ಅವರೊಂದಿಗೆ ‘ಭರಾಟೆ’ಯಲ್ಲೂ ನಟಿಸಿದ್ದೇನೆ. ನಾಯಕನ ಜೀವನದ ಫ್ಲ್ಯಾಷ್ ಬ್ಯಾಕ್‌ನಲ್ಲಿ ಬರುವ ಪಾತ್ರ ನನ್ನದು. ತುಂಬಾ ಚೆನ್ನಾಗಿದೆ. ಈ ಕಾರಣಕ್ಕೆ ನಿರ್ದೇಶಕ ಚೇತನ್ ಕುಮಾರ್ ಅವರು ಕೇಳಿದ ಕೂಡಲೇ ಒಪ್ಪಿಕೊಂಡೆ. ಇದರ ಚಿತ್ರೀಕರಣ ಕೂಡ ಮೈಸೂರಿನಲ್ಲೇ ನಡೆಯುತ್ತಿದೆ. ನಾಯಕಿಯಾಗಿ ನಟಿಸುತ್ತಿರುವ ‘ಲಂಕೆ’ ಚಿತ್ರಕ್ಕೆ ಶೇ.50 ಭಾಗ ಚಿತ್ರೀಕರಣ ಮುಕ್ತಾಯವಾಗಿದೆ. ರಾಮ್ ಪ್ರಸಾದ್ ಇದರ ನಿರ್ದೇಶಕರು. ಲೂಸ್ ಮಾದ ಯೋಗೀಶ್ ಚಿತ್ರದ ನಾಯಕ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.