ಯುವ ಪ್ರತಿಭೆ ರಾಜೇಶ್ ಆನಂದಲೀಲಾ ನಿರ್ದೇಶನದ ‘56’ಸಿನಿಮಾದ ಮೋಷನ್ ಟೀಸರ್ ನಾಯಕಿ ಪ್ರಿಯಾಮಣಿ ಅವರ ಹುಟ್ಟುಹಬ್ಬದಂದೇ ಬಿಡುಗಡೆಯಾಗಿದೆ. ಇದೊಂದು ಸೈನ್ಸ್ ಫಿಕ್ಸೆನ್.
ಪ್ರಿಯಾಮಣಿ ಪಾಲಿಗೂ ಸ್ಪೆಷಲ್ ಸಿನಿಮಾ. ಅವರ ಸಿನಿ ಜರ್ನಿಗೂಚಿತ್ರದ ಟೈಟಲ್‌ಗೂ ಸಾಮ್ಯತೆ ಇದೆ. ‘56’ಎನ್ನುವುದುಚಿತ್ರದ ಟೈಟಲ್ ಮಾತ್ರವಲ್ಲ, ಇದು ಪ್ರಿಯಾಮಣಿ
ಅವರ ೫೬ನೇ ಸಿನಿಮಾವೂ ಹೌದು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಅಷ್ಟು ಭಾಷೆಯ ಚಿತ್ರರಂಗದಲ್ಲೂ ನಟಿಯಾಗಿ ತಮ್ಮದೇ ಛಾಪು ಮೂಡಿಸಿರುವ ಅವರು, ಕನ್ನಡದಲ್ಲೇಗ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅಂತಹದೇ ಒಂದು ಪಾತ್ರ ಈ ಚಿತ್ರದಲ್ಲೂ ಇದೆ.
ಮುಸ್ತಫನ ರಾಣಿ ‘ಪುಲಿಮಣಿ’ ಚಾರ್ಮಿಂಗ್ ಫೋಟೋಸ್!
ಸೈನ್ಸ್ ಫಿಕ್ಸನ್ ಜತೆಗೆ ಮರ್ಡರ್ ಮಿಸ್ಟ್ರಿಯ ಕಥಾ ಹಂದರದ ಚಿತ್ರವಿದು. ಇಲ್ಲಿ ಸಿಬಿಐ ಅಧಿಕಾರಿಯಾಗಿ ಅಭಿನಯಿಸಿದ್ದಾರೆ ಪ್ರಿಯಾಮಣಿ. ಸಿನಿಮಾ ಹಾಗೂ ಪಾತ್ರದ ಬಗ್ಗೆ ಪ್ರಿಯಾ ಹೇಳಿದ್ದಿಷ್ಟು ‘ನಿರ್ದೇಶಕರು ಭೇಟಿ ಮಾಡಿ ಮೊದಲು ಕತೆ ಹೇಳಿದಾಗ ಚಿತ್ರದ ಟೈಟಲ್ ಏನು ಅಂತ ಫಿಕ್ಸ್ ಆಗಿರಲಿಲ್ಲ. ಕತೆ ಇಂಟರೆಸ್ಟಿಂಗ್ ಆಗಿತ್ತು. ಪಾತ್ರಕ್ಕೂ ಮಹತ್ವ ಇತ್ತು. ಆ ಕಾರಣಕ್ಕೆ ಒಪ್ಪಿಕೊಂಡೆ. ಆಮೇಲೆ ಟೈಟಲ್ ಫಿಕ್ಸ್ ಆಯಿತು. ಆಮೇಲೆ ಗೊತ್ತಾಗಿದ್ದು ಇದು ನನ್ನ ಸಿನಿಜರ್ನಿಯ ೫೬ನೇ ಸಿನಿಮಾ ಅಂತ. ಅದಕ್ಕೂ ಸಿನಿಮಾ ಟೈಟಲ್‌ಗೂ ಯಾವುದೇ ಕನೆಕ್ಷನ್ ಇರಲಿಲ್ಲ. ಈ ಸೈನ್ಸ್ ಫಿಕ್ಸನ್‌ಗೆ ಆ ಸಂಖ್ಯೆ ಕನೆಕ್ಟ್ ಆಗುತ್ತೆ. ಅದು ನನ್ನ ಸಿನಿಜರ್ನಿಯ ಒಟ್ಟು ಸಿನಿಮಾಗಳಿಗೆ ಸಿಂಕ್ ಆಯಿತು. ಎಲ್ಲವೂ ಕಾಕತಾಳೀಯ ಎನಿಸಿದೆ. ಇದೊಂದು ಒಳ್ಳೆಯ ಮನರಂಜನೆ ಸಿನಿಮಾ ಆಗಲಿದೆ ’ಎನ್ನುತ್ತಾರೆ ನಟಿ ಪ್ರಿಯಾಮಣಿ.
ಕೊನೆಗೂ ರಿಲೀಸ್ ಆಯ್ತು ಪ್ರಿಯಾಮಣಿ ಮದ್ವೆ ವಿಡಿಯೋ!