ಪವನ್ ಒಡೆಯರ್ ಪತ್ನಿ ಈಗ ಫ್ಯಾಷನ್ ಡಿಸೈನರ್!

Published : Jun 10, 2019, 10:34 AM IST
ಪವನ್ ಒಡೆಯರ್ ಪತ್ನಿ ಈಗ ಫ್ಯಾಷನ್ ಡಿಸೈನರ್!

ಸಾರಾಂಶ

ಬಾಗಲಕೋಟೆಯಿಂದ ಫ್ಯಾಷನ್ ಡಿಸೈನ್ ಕಲಿಯಬೇಕು ಎಂದು ಬೆಂಗಳೂರಿಗೆ ಬಂದ ಅಪೇಕ್ಷಾ ಪುರೋಹಿತ್ ಗಾಂಧಿ ನಗರಕ್ಕೆ ಎಂಟ್ರಿಯಾಗಿದ್ದು ನಟಿಯಾಗಿ.  

‘ಕಾಫಿ ತೋಟ’, ‘ಕಿನಾರೆ’ಯಂತಹ ಚಿತ್ರಗಳಲ್ಲಿ ನಟಿಸಿದ್ದ ಇವರು ಈಗ ತಮ್ಮ ಆಸೆಯಂತೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಅದು ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಮತ್ತೆ ಉದ್ಭವ’ ಚಿತ್ರದ ಮೂಲಕ.

ಕಾಫಿ ತೋಟದ ನಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪವನ್ ಒಡೆಯರ್

 

‘ನಾನು ಬೇಸಿಕಲ್ ಫ್ಯಾಷನ್ ಡಿಸೈನರ್. ಆದರೆ ನನಗೆ ನಟನೆಗೆ ಅವಕಾಶ ಸಿಕ್ಕಿದ್ದರಿಂದ ಅತ್ತ ಗಮನ ನೀಡಿದ್ದೆ ಅಷ್ಟೆ. ನನಗೆ ಸಿನಿಮಾಗೆ ಕಾಸ್ಟ್ಯೂಮ್ ಡಿಸೈನ್ ಮಾಡಬೇಕು ಎನ್ನುವ ಆಸೆ ಇತ್ತು. ಅದು ಈಗ ನೆರವೇರಿದೆ. ದೊಡ್ಡ ಬಜೆಟ್‌ನ ಚಿತ್ರಗಳಿಗೆ ಮಾತ್ರ ಕಾಸ್ಟ್ಯೂಮ್ ಡಿಸೈನ್ ಎನ್ನುವುದು ಇದೆ. ಆದರೆ ಇದು ಬದಲಾಗಿ ಬಜೆಟ್‌ಗೆ ತಕ್ಕಂತೆ ಡಿಸೈನ್ ಮಾಡುವ ಕಲ್ಪನೆ ಕನ್ನಡದಲ್ಲಿ ಬರಬೇಕು’ ಎನ್ನುವ ಅಪೇಕ್ಷಾ ಇಲ್ಲಿಗೆ ಬಂದರೂ ನಟನೆಯಲ್ಲಿಯೂ ಮುಂದುವರೆಯುವ ಆಸೆ ಹೊಂದಿದ್ದಾರೆ. ಈಗಾಗಲೇ ‘ಸಾಗುತ ದೂರ ದೂರ’ ಸಿನಿಮಾ ಬಿಡುಗಡೆಗೆ  ಸಿದ್ಧವಾಗಿದ್ದು, ಮುಂದೆ ಮಹಿಳಾ ಪ್ರಧಾನ ಕತೆಗಳು ಬಂದರೆ ನಟನೆ ಮುಂದುವರಿಸಲಿದ್ದಾರೆ. 

ಪವನ್ ಒಡೆಯರ್ ಹೆಂಡತಿ ಕೊಟ್ಟ ವಿಶೇಷ ಬರ್ತಡೇ ಗಿಫ್ಟ್ !

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!