
ಗೋವಾ (ಏ. 18) ಕೊರೋನಾ ಕಾರಣಕ್ಕೆ ಇಡೀ ದೇಶವೇ ಆತಂಕದಲ್ಲಿದೆ. ಆದರೆ ಈ ನಟಿ ಮಾತ್ರ ಗೋವಾದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಅವರು ಅವರಷ್ಟಕ್ಕೆ ಎಂಜಾಯ್ ಮಾಡಿದಿದ್ದರೆ ಯಾರೂ ಏನೂ ಹೇಳುತ್ತಿರಲಿಲ್ಲವೆನೋ.. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ಒಂದು ಟೀಕೆಗೆ ಗುರಿಯಾಗಿದೆ.
ಗೆಳೆಯನೊಂದಿಗೆ ಗೋವಾ ಸುತ್ತಾಟದಲ್ಲಿರುವ ನಟಿ ಪೂಜಾ ಬೇಡಿ ಕಮೆಂಟ್ ಗಳನ್ನು ಎದುರಿಸಬೇಕಾಗಿ ಬಂದಿದೆ. 50 ವರ್ಷದ ನಟಿ ಮಾನೆಕ್ ಕಂಟ್ರಾಕ್ಟರ್ ಎಂಬುವರ ಜತೆ ಎಂಗೇಜ್ ಆಗಿದ್ದು ಅರೆಬೆತ್ತಲೆಯಾಗಿ ಕಾಣಿಸಿಕೊಂಡು ಪೋಸ್ಟ್ ಒಂದನ್ನು ಹಾಕಿದ್ದಾರೆ.
ಮಲೈಕಾ ಬೆರಳಿಗೆ ವಜ್ರದುಂಗುರ ಹಾಕಿದ್ದು ಯಾರು?
ಯಾರೂ ಭಯಪಡಬೇಕಿಲ್ಲ. ಸಿಕ್ಕ ಸಮಯವನ್ನು ಎಂಜಾಯ್ ಮಾಡಿ.. ಆಮೇಲೆ ಮಿಸ್ ಮಾಡಿಕೊಂಡೆವು ಎಂದು ಪಶ್ಚಾತಾಪ ಪಡೆಬೇಡಿ ಎಂದು ಹೇಳಿದ್ದಾರೆ.
ಮಾಸ್ಕ್ ಇಲ್ಲದೆ ಸ್ನೇಹಿತನೊಂದಿಗೆ ಬೋಟ್ ನಲ್ಲಿ ತೆರಳುತ್ತಿದ್ದಾರೆ. ಜನರಿಗೆ ಸಂದೇಶ ಕೊಡುವ ಸ್ಥಾನದಲ್ಲಿರುವ ನೀವು ಹೀಗೆ ಮಾಡಿದರೆ ಹೇಗೆ? ಯಾವ ರೀತಿ ಇದನ್ನು ಅರ್ಥ ಮಾಡಿಕೊಳ್ಳಬೇಕು? ಎಂದು ನಟಿಗೆ ಮರು ಪ್ರಶ್ನೆ ಹಾಕಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.