ಕಾಮಿಡಿ ಕಥೆಯಲ್ಲಿ ಒಂದಾಯ್ತು ವಿವಾಹಿತ ಜೋಡಿ?

Published : Apr 11, 2019, 09:37 AM ISTUpdated : Apr 11, 2019, 10:03 AM IST
ಕಾಮಿಡಿ ಕಥೆಯಲ್ಲಿ ಒಂದಾಯ್ತು ವಿವಾಹಿತ ಜೋಡಿ?

ಸಾರಾಂಶ

ನಟಿ ಮೇಘನಾ ರಾಜ್‌ ಮದುವೆ ನಂತರ ಮತ್ತೆ ಸಿನಿ ದುನಿಯಾಕ್ಕೆ ಮರಳಿದ್ದಾರೆ. ಸೃಜನ್‌ ಲೋಕೇಶ್‌ ಅಭಿನಯದ ಹೊಸ ಚಿತ್ರವೊಂದರಲ್ಲಿ ಅವರು ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಮಧುಚಂದ್ರ ನಿರ್ದೇಶನದ ಈ ಚಿತ್ರಕ್ಕೆ ಇನ್ನು ಟೈಟಲ್‌ ಫೈನಲ್‌ ಆಗಿಲ್ಲ. ಆದರೆ ಇಷ್ಟರಲ್ಲೇ ಸೆಟ್ಟೇರುವುದು ಖಾತರಿ ಆಗಿದೆ. ಅದರಲ್ಲೀಗ ಸೃಜನ್‌ ಲೋಕೇಶ್‌ ಹಾಗೂ ಮೇಘನಾ ರಾಜ್‌ ಜೋಡಿ ಆಗಿರುವುದು ವಿಶೇಷ.

ನಟಿಯರು ಮದುವೆಯಾದರೆ, ಮತ್ತೆ ನಟನೆಗೆ ವಾಪಸ್‌ ಆಗುವ ಬಗ್ಗೆ ಅನುಮಾನಗಳೇ ಹೆಚ್ಚು. ಆದರೆ ಮೇಘನಾ ರಾಜ್‌ ವಿಚಾರದಲ್ಲಿ ಹಾಗೇನು ಅನುಮಾನ ಇರಲಿಲ್ಲ. ಯಾಕಂದ್ರೆ, ಮದುವೆ ನಂತರವೂ ನಟಿಸುವುದು ಖಚಿತ ಅಂತಲೇ ಅವರು ಹೇಳಿದ್ದರು. ಅಷ್ಟೇ ಅಲ್ಲ, ಅವರು ಮದುವೆಯಾದ ಮೇಲೆಯೇ ಕಾಂತ ಕನ್ನಳ್ಳಿ ನಿರ್ದೇಶನದ ಇರುವುದೆಲ್ಲ ಬಿಟ್ಟು ಚಿತ್ರ ತೆರೆ ಕಂಡಿತ್ತು. ಆ ಚಿತ್ರದಲ್ಲಿ ಮೇಘನಾ ರಾಜ್‌ ಪ್ರಮುಖ ಪಾತ್ರದಲ್ಲೇ ಅಭಿನಯಿಸಿದ್ದರು. ನಿರೀಕ್ಷೆಯಂತೆಯೇ ಈಗ ಮತ್ತೆ ನಾಯಕಿ ಆಗಿ ಬೆಳ್ಳಿತೆರೆಗೆ ಮರಳಿದ್ದಾರೆ. ಈ ಚಿತ್ರದಲ್ಲಿ ಅವರದೇನು ಪಾತ್ರ ಎನ್ನುವುದಷ್ಟೇ ಈಗ ಕುತೂಹಲ.

2ನೇ ಮಗುವಿಗೆ ತಂದೆಯಾದ ಟಾಕಿಂಗ್ ಸ್ಟಾರ್!

ಸದ್ಯ ಸೃಜನ್‌ ಲೋಕೇಶ್‌ ಕಾಮಿಡಿಗೆ ಫೇಮಸ್‌. ಮಜಾ ಟಾಕೀಸ್‌ ಮೂಲಕ ಅವರು ‘ಟಾಕಿಂಗ್‌ ಸ್ಟಾರ್‌’ ಅಂತಲೇ ಬಿರುದು ಪಡೆದಿದ್ದಾರೆ. ಅದೇ ಜನಪ್ರಿಯತೆಗೆ ಪೂರಕವಾಗಿ ನಿರ್ದೇಶಕ ಮಧು ಚಂದ್ರ, ಪಕ್ಕಾ ಹಾಸ್ಯ ಪ್ರಧಾನ ಚಿತ್ರವೊಂದರಲ್ಲಿ ಸೃಜನ್‌ ಅವರನ್ನು ತೋರಿಸಲು ಹೊರಟಿದ್ದಾರಂತೆ. ಅದರಲ್ಲಿ ಮೇಘನಾ ರಾಜ್‌ ಅವರದ್ದು ಕೊಂಚ ಸೀರಿಯಸ್‌ ಪಾತ್ರ. ಇತ್ತೀಚೆಗಷ್ಟೇ ರವಿ ಹಿಸ್ಟರಿ ಹೆಸರಿನ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತಂದಿದ್ದ ಮಧು ಚಂದ್ರ ಅವರಿಗೆ ಇದು ಎರಡನೇ ಚಿತ್ರ.ಅಲ್ಲಿ ಸಸ್ಪೆನ್ಸ್‌, ಥ್ರಿಲ್ಲರ್‌ ಕತೆ ಹೇಳಿದ್ದರು. ಇಲ್ಲಿ ಕಾಮಿಡಿ ಕತೆ.

ಮದುವೆ ನಂತರ ಆಫರ್ ಕಡಿಮೆ ಆಗಿಲ್ಲ: ಮೇಘನಾ ರಾಜ್

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare Serial: ಜಯದೇವ್‌ ಕುತಂತ್ರಕ್ಕೆ ಗೌತಮ್‌-ಭೂಮಿಕಾ ಕುಟುಂಬದಲ್ಲಿ ಸಾವಾಯ್ತಾ?
ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?