ಚಿತ್ರೀಕರಣದ ವೇಳೆ ನಟಿ ಮೇಲೆ ಗೂಂಡಾಗಳಿಂದ ಹಲ್ಲೆ?

Published : Jun 21, 2019, 11:01 AM IST
ಚಿತ್ರೀಕರಣದ ವೇಳೆ ನಟಿ ಮೇಲೆ ಗೂಂಡಾಗಳಿಂದ ಹಲ್ಲೆ?

ಸಾರಾಂಶ

  ಮುಂಬೈನ ಫ್ಯಾಕ್ಟರಿವೊಂದರಲ್ಲಿ ವೆಬ್‌ ಸೀರಿಸ್ ಚಿತ್ರೀಕರಣ ನಡೆಯುತ್ತಿದ್ದು ನಾಲ್ಕು ಸ್ಥಳಿಯ ಗೂಂಡಾಗಳು ಸೆಟ್‌ಗೆ ನುಗ್ಗಿ ನಟಿ ಹಾಗೂ ತಂಡದವರ ಮೇಲೆ ಹಲ್ಲೆ ಮಾಡಲಾಗಿದೆ.

ಬಾಲಿವುಡ್‌ ಡಿಫರೆಂಟ್ ಡೈರೆಕ್ಟರ್ ಏಕ್ತಾ ಕಪೂರ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ 'ಫಿಕ್ಸರ್' ಎನ್ನುವ ವೆಬ್‌ ಸೀರಿಸ್‌ಗೆ ನಟಿ ಆಗಿರುವ ಮಹೀ ಗಿಲ್‌ ಹಾಗೂ ತಂಡದವರ ಮೇಲೆ ಗೂಂಡಾಗಳಿಂದ ಹಲ್ಲೆಯಾಗಿದೆ.

ಜೂನ್‌ 20 ರಂದು 'ಫಿಕ್ಸರ್' ಸೀರಿಸ್ ಚಿತ್ರೀಕರಣ ವೇಳೆ ಫ್ಯಾಕ್ಟರಿ ಒಳಗೆ ನಾಲ್ಕು ಗೂಂಡಾಗಳು ಕಂಠಪೂರ್ತಿ ಕುಡಿದು ನುಗ್ಗಿ ಸೆಟ್‌ನಲ್ಲಿ ಸಿಕ್ಕವರ ಮೇಲೆಲ್ಲಾ ಹಲ್ಲೆ ಮಾಡಿದ್ದಾರೆ. ಈ ವೇಳೆ ಅವರ ಕೈಯಲ್ಲಿ ಕಬ್ಬಿಣದ ಸರಳು, ದೊಣ್ಣೆ ಹಾಗೂ ಕೋಲುಗಳಿದ್ದು ನಿರ್ಮಾಪಕರಿಗೆ ಹಾಗೂ ಕೆಲ ತಂತ್ರಜ್ಞರ ಮೇಲೆ ಹಲ್ಲೆಯಾಗಿದೆ. ಈ ಘಟನೆ ಬಗ್ಗೆ ತಂಡದವರು ವೀಡಿಯೋ ಮಾಡಿ ಪೊಲೀಸರಿಗೆ ದೂರು ನೀಡಿ ಆ ನಂತರ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

 

ಶ್ರೀದೇವಿ ಮಾಡಿದ ತಪ್ಪನ್ನೇ ಮಗಳು ಜಾಹ್ನವಿ ಮಾಡಿದ್ಲಾ?

ಚಿತ್ರತಂಡದವರು ಈ ಹಿಂದೆ ಫ್ಯಾಕ್ಟರಿ ಮಾಲಿಕರ ಅನುಮತಿ ಪಡೆದು ಹಣ ನೀಡಿ ಆ ನಂತರ ಶೂಟಿಂಗ್ ಮಾಡುವುದಾಗಿ ನಿರ್ಧಾರ ತೆಗೆದುಕೊಂಡಿದ್ದರು. ಪೊಲೀಸರಿಗೆ ದೂರ ನೀಡಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಗೂಂಡಗಳನ್ನು ಬಂಧಿಸಿ ಫ್ಯಾಕ್ಟರಿಗೆ ಬೀಗ ಹಾಕಿದ್ದಾರೆ.

ಪ್ರೀತಿಸುತ್ತಿರುವ ಮುಸ್ಲಿಂ ಪತ್ರಕರ್ತ ಉಗ್ರನೆಂದು ತಂದೆಯಿಂದ ಹಲ್ಲೆ: ಹೃತಿಕ್ ತಂಗಿ ಆರೋಪ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನ್ನ ಅರ್ಧ ವಯಸ್ಸಿನ ಹುಡುಗರು ಡೇಟಿಂಗ್‌ಗೆ ಕರೀತಿದ್ದಾರೆ.. 50 ಆದ್ರೂ ಮದುವೆಗೆ ರೆಡಿ: ನಟಿ ಅಮೀಶಾ ಪಟೇಲ್
ಬಾಲಯ್ಯರಿಂದ ಅನಿರೀಕ್ಷಿತ ಸರ್ಪ್ರೈಸ್.. ಅಖಂಡ 2 ಹೊಸ ರಿಲೀಸ್ ಡೇಟ್ ಫಿಕ್ಸ್: ಈ ಚಿತ್ರಗಳಿಗೆ ದೊಡ್ಡ ಹೊಡೆತ