
ಮುಂಬೈ: ಪಿಂಕ್‌ವಿಲ್ಲಾ ಎಂಬ ವೆಬ್‌ಸೈಟ್ ಜೊತೆ ಮನಬಿಚ್ಚಿ ಮಾತನಾಡಿದ ಸುನೈನಾ ಅವರು, ‘ದೆಹಲಿ ಮೂಲದ ಪತ್ರಕರ್ತನಾದ ಇಸ್ಲಾಂ ಧರ್ಮದ ರುಹೇಲ್ ಅಮಿನ್ ಅವರನ್ನು ನಾನು ಪ್ರೀತಿಸುತ್ತಿದ್ದ ವಿಚಾರವನ್ನು ತಂದೆಗೆ ತಿಳಿಸಿದೆ. ಈ ಸಂದರ್ಭದಲ್ಲಿ ಕೋಪಗೊಂಡ ತಂದೆ ರಾಕೇಶ್ ನನ್ನ ಕಪಾಳಕ್ಕೆ ಬಾರಿಸಿದರು. ಜೊತೆಗೆ, ನಾನು ಪ್ರೀತಿಸುತ್ತಿರುವ ವ್ಯಕ್ತಿ ಭಯೋತ್ಪಾದಕ ಎಂದು ತಂದೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ರುಹೇಲ್ ಮುಸ್ಲಿಂ ಎಂಬ ಏಕ ಮಾತ್ರ ಕಾರಣಕ್ಕಾಗಿ ಆತನನ್ನು ವಿವಾಹವಾಗಬೇಕೆಂಬ ನನ್ನ ಆಕಾಂಕ್ಷೆಗೆ ಹೃತಿಕ್ ಸೇರಿ ಕುಟುಂಬದ ಯಾವೊಬ್ಬ ಸದಸ್ಯರು ಒಪ್ಪಿಕೊಳ್ಳಲಿಲ್ಲ’ ಎಂದು ಹೇಳಿದ್ದಾರೆ.
ಅಬ್ಬಾ..! ಹೃತಿಕ್ ಇಷ್ಟೊಂದು ಸಂಭಾವನೆ ಪಡೆಯುತ್ತಾರಾ?
ಈ ಎಲ್ಲ ವಿಚಾರಗಳ ಬಹಿರಂಗಕ್ಕೆ ನನಗೆ ಇಷ್ಟವಿಲ್ಲ. ಆದರೆ, ರುಹೇಲ್‌ನನ್ನು ಒಪ್ಪಿಕೊಳ್ಳದೆ ಇರುವ ಮೂಲಕ ನನ್ನ ತಂದೆ ಮತ್ತು ಕುಟಂಬಸ್ಥರು ನನ್ನ ಜೀವನವನ್ನು ನರಕವಾಗಿಸಿದ್ದಾರೆ. ಇದನ್ನು ಸಹಿಸಲು ಸಾಧ್ಯವೇ ಇಲ್ಲ. ನಾನು ಯಾರನ್ನು ವಿವಾಹವಾಗುತ್ತೇನೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ, ಇದೀಗ ರುಹೇಲ್ ಜೊತೆಗೆ ಇರಬೇಕು ಎಂಬುದು ನನ್ನ ಆಕಾಂಕ್ಷೆಯಾಗಿದೆ ಎಂದರು.
'ಮೆಂಟಲ್ ಹೈ ಕ್ಯಾ' 'ಸೂಪರ್-30' ಮತ್ತೆ ಶುರುವಾಯ್ತು ಕಂಗನಾ- ಹೃತಿಕ್ ವಾರ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.