
ಈಗ ಖಾಸಗಿ ವಾಹಿನಿಯೊಂದು ನಡೆಸಿದ ಸಂದರ್ಶನದಲ್ಲಿ ಪ್ರೀತಿಯಲ್ಲಿ ಮೋಸ ಹೋದವರಿಗೆ, ಬ್ರೇಕ್ ಅಪ್ ಆದವರಿಗೆ ಒಂದಷ್ಟುಬುದ್ಧಿಮಾತು ಹೇಳುವುದರ ಜೊತೆಗೆ ತನ್ನ ಲೈಫ್‌ಸ್ಟೈಲ್ ಬಗ್ಗೆಯೂ ಹೇಳಿಕೊಂಡಿದ್ದಾರೆ.
* ನಾನು ಈಗ 80% ಕೆಲಸ ಮತ್ತು 20% ವೈಯಕ್ತಿಕ ಜೀವನ ಎನ್ನುವ ಸೂತ್ರವನ್ನು ಅಳವಡಿಕೆ ಮಾಡಿಕೊಂಡು ಮುಂದೆ ಸಾಗುತ್ತಿದ್ದೇನೆ. ಅದರಿಂದ ನನಗೆ ಆಗಿರುವ ಅನುಕೂಲ ಏನು ಎಂದರೆ ಬೇಡದ ವಿಚಾರಗಳ ಬಗ್ಗೆ ಆಲೋಚನೆ ಮಾಡುವುದಕ್ಕೂ ನನಗೆ ಸಮಯ ಸಿಕ್ಕುವುದಿಲ್ಲ.
ಕತ್ರಿನಾಗೆ ಇಷ್ಟು ದುಬಾರಿ ಕಾರು ಕೊಡಿಸಿದ್ದು ಯಾರು?
* ದೂರದಿಂದ ನೋಡಿದಾಗ ಎಲ್ಲರೂ ಚೆನ್ನಾಗಿ ಇರುವಂತೆ ಕಾಣುತ್ತಾರೆ. ಆಂತರ್ಯದಲ್ಲಿ ಎಲ್ಲರ ಒಳಗೂ ನೋವುಗಳು ಇರುತ್ತವೆ. ಅವುಗಳನ್ನು ಆಳಕ್ಕೆ ಇಳಿದು ಕೆದಕಿದಾಗ ಮಾತ್ರ ನಮ್ಮ ಕಷ್ಟಗಳು ಅಷ್ಟೇನು ದೊಡ್ಡದಲ್ಲ ಎನ್ನುವುದು ತಿಳಿಯುತ್ತದೆ. ಅದಕ್ಕಾಗಿ ಎಲ್ಲವನ್ನೂ ಮುಕ್ತ ಮನಸ್ಸಿನಿಂದ ನೋಡುವ ದೃಷ್ಟಿಬೆಳೆಸಿಕೊಳ್ಳಬೇಕು. ಆಗ ನಮ್ಮ ನೋವು ಹೆಚ್ಚಾಗುವುದಿಲ್ಲ.
* ನಾನು ಬ್ರೇಕ್‌ಅಪ್ ಆದ ಮೇಲೆ ಹೊಸದಾಗಿ ಏನಾದರೂ ಕ್ರಿಯೇಟ್ ಮಾಡುವುದು, ಹೊಸ ಐಡಿಯಾಗಳ ಬಗ್ಗೆ ಹೆಚ್ಚಾಗಿ ಆಲೋಚನೆ ಮಾಡುತ್ತಿರುತ್ತೇನೆ. ಒಮ್ಮೆ ಆ ವಿಚಾರಗಳಲ್ಲಿ ಮುಳುಗಿದರೆ ನನಗೆ ವಾಸ್ತವಕ್ಕೆ ಬರುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಹಾಗೆ ಆಲೋಚನೆ ಮಾಡುವ ವೇಳೆ ನಾನು ತುಂಬಾ ಖುಷಿಯಾಗಿ ಇರುತ್ತೇನೆ. ನಿಮಗೂ ಜಗತ್ತೆ ತಲೆ ಮೇಲೆ ಬಿದ್ದಿದೆ ಎಂದಾಗಲೂ ಹೊಸದಾಗಿ ಏನಾದರೂ ಕ್ರಿಯೇಟಿವ್ ಆಗಿ ಕೆಲಸ ಮಾಡಿ, ಎಲ್ಲವೂ ಸರಿಯಾಗುತ್ತದೆ.
ಕತ್ರಿನಾ 56 ಕೆಜಿಗೆ ಹೀಗೆ ಮಾಡ್ತಾರೆ!
ಹೀಗೆ ತನ್ನ ಬದುಕಿನಲ್ಲಿ ನಡೆದ ಘಟನೆಗಳು ಮತ್ತು ಅವುಗಳಿಂದ ಹೊರಗೆ ಬರಲು ತಾನು ಕಂಡುಕೊಂಡು ಮಾರ್ಗಗಳ ಬಗ್ಗೆ ಹೇಳಿದ್ದಾರೆ ಕತ್ರಿನಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.